ಹುಬ್ಬಳ್ಳಿ-ಧಾರವಾಡ ನಗರ ಕಮಿಷನರೇಟ್‌ನ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯ ರೌಡಿಶೀಟರ್ ಮನೆಗಳ ಮೇಲೆ ಜುಲೈ 13ರಂದು ಬೆಳಗಿನ ಜಾವ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪರೇಡ್ ನಡೆಸಿ, 737 ರೌಡಿಶೀಟರ್‌ಗಳು, 20 ಡ್ರಗ್ಸ್ ಪೆಡ್ಲರ್‌ಗಳು, 227 ಡ್ರಗ್ಸ್ ಬಳಕೆದಾರರು, 72 ಎಂಒಬಿಗಳು ಸೇರಿದಂತೆ ಒಟ್ಟು 1056 ಜನ ಪರೇಡ್‌ನಲ್ಲಿ ಹಾಜರಿದ್ದರು.
ಈ ಸುದ್ದಿ ಓದಿದ್ದೀರಾ? ಚಿಂತಾಮಣಿ | ಡಿವೈಡರ್‌ಗೆ ಕಾರು ಢಿಕ್ಕಿ: ಐವರಿಗೆ ಗಂಭೀರ ಗಾಯ
ಒಟ್ಟು 1158 ರೌಡಿಶೀಟರ್‌ಗಳ ಮನೆಗಳನ್ನು ಪರಿಶೀಲನೆ ನಡೆಸಿದ್ದು, ದಾಳಿ ವೇಳೆ 80 ಮೊಬೈಲ್‌ಗಳು, 14 ದ್ವಿಚಕ್ರ ವಾಹನಗಳು ಮತ್ತು 2 ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾದ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





