ಹುಬ್ಬಳ್ಳಿ | ಪ್ರಲ್ಹಾದ್ ಜೋಶಿ ಎಲ್ಲಿದ್ದಾರೆಂದು ಪತ್ತೆ ಹಚ್ಚಬೇಕಿದೆ: ವಿಜಯಕುಮಾರ ಗುಂಜಾಳ ಟೀಕೆ

Date:

ಸಚಿವ ಪ್ರಲ್ಹಾದ್ ಜೋಶಿ ಈಗ ಎಲ್ಲಿದ್ದಾರೆಂದು ಪತ್ತೆ ಹಚ್ಚಿ‌, ಮಹದಾಯಿ ನೀರಿನ‌ ಸಲುವಾಗಿ ಅವರೊಂದಿಗೆ ನೇರವಾಗಿ ಮಾತನಾಡಬೇಕಿದೆ. ನೀರಿನ ವಿಚಾರದಲ್ಲಿ ಕೇಂದ್ರ ಸಚಿವರು ಕಾಣೆಯಾಗುತ್ತಾರೆ ಎಂದು ಭಾರತ್ ಏಕತಾ ಮಿಷನ್‌ ಸಂಘಟನೆಯ ವಿಜಯಕುಮಾರ ಗುಂಜಾಳ ಟೀಕಿಸಿದರು.

ಮಹದಾಯಿ ನೀರಿನ ಸಮಸ್ಯೆ ವಿಳಂಬ ನೀತಿ ಖಂಡಿಸಿ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಮಾತನಾಡಿದರು. ಇದೇ ವೇಳೆ ಪ್ರತಿಭಟನಾಕಾರರು ಕಾಲಿ‌ಕೊಡ ಹಿಡದು ಕೇಂದ್ರ ಸರ್ಕಾರ ಮತ್ತು ಕೇಂದ್ರ ಸಚಿವರ ವಿರುದ್ಧ ಘೋಷಣೆ ಕೂಗಿದರು.

“ಬಹಳ ವರ್ಷಗಳಿಂದ ಮಹದಾಯಿ ಹೋರಾಟವನ್ನು ನೋಡುತ್ತದ್ದೇವೆ. ಜನರು ತಕ್ಕಪಾಠ ಕಲಿಸಬೇಕಿದೆ. ಇಂತಹ ವಿಷಯದಲ್ಲಿ ಯಾವುದೇ ತಾರತಮ್ಯವಿಲ್ಲ. ಹೀಗಾಗಿ ಎಲ್ಲರೂ ಒಂದಾಗಿ ಹೋರಾಡೋಣ. ಮತ್ತು ಕಾಣೆಯಾಗಿರುವ ಜೋಶಿಯವರನ್ನು ಹುಡುಕಿ ತರುವ ಕೆಲಸ ಮಾಡೋಣ. ರೈತರು ಉದ್ಧಾರವಾದರೆ; ನಾವೆಲ್ಲ ಉದ್ದಾರವಾಗುತ್ತೇವೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ವೇಳೆ ಬಾಬಾಜಾನ ಮುಧೋಳ ಮಾತನಾಡಿ, “ಕಳೆದ ಹತ್ತು ವರ್ಷಗಳಿಂದ ನಿರಂತರ ರೈತರು, ಕಾರ್ಮಿಕರು, ದಲಿತಪರ, ಕನ್ನಡಪರ ಹೀಗೆ ವಿವಿಧ ಸಂಘಟನೆಗಳು ಸೇರಿಕೊಂಡು ಹುಬ್ಬಳ್ಳಿ ಧಾರವಾಡದ ಭಾಗಕ್ಕೆ‌ ನೀರು ಬೇಕು ಎಂದು ಧ್ವನಿ ಮಾಡುತ್ತಾ ಬಂದಿದ್ದಾರೆ. ಇದು ಕೇವಲ ರೈತರಿಗೆ ಮಾತ್ರ ಸಿಮೀತವಾಗಿಲ್ಲ. ಕಳಸಾ ಬಂಡೂರಿ ಹೋರಾಟವು ಐತಿಹಾಸಿಕ ಹೋರಾಟವಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ನಾಲ್ಕು ಸಂಸದೀಯ ಸದಸ್ಯರಿದ್ದಾರೆ. ಕೇಂದ್ರಕ್ಕೆ ಅತೀ ಆಪ್ತರಾದ ಪ್ರಲ್ಹಾದ್ ಜೋಶಿಯವರು ನೀರಿಗಾಗಿ ದ್ವನಿಯೆತ್ತಬಹುದಿತ್ತು. ಪ್ರಧಾನಿ ಮೋದಿ ಮನಸ್ಸು ಮಾಡಿದರೆ; ನೀರಿನ ಸಮಸ್ಯೆ ಕೂಡಲೇ ಬಗೆಹರಿಯುತ್ತದೆ. ಕುಡಿಯುವ ನೀರಿನ ವಿಚಾರದಲ್ಲಿ ವಿಳಂಬ ಮತ್ತು ಮಲತಾಯಿ ಧೋರಣೆ ಆಗುತ್ತಿದೆ” ಎಂದು ದೂರಿದರು.

WhatsApp Image 2025 08 02 at 1.17.41 PM

ಬಳ್ಳಾರಿಯ ಯ್ಯೂಸೂಫ್‌ಖಾನ್ ಮಾತಮಾಡಿ, “ಮಹದಾಯಿ ಹೋರಾಟವು ನಾಲ್ಕು ದಶಕಗಳಿಂದ ಮುಂದುವರೆದಿದೆ. ನಮ್ಮ ನೀರು ನಮ್ಮ ಹಕ್ಕು. ಆದ್ದರಿಂದ ನಮಗೆ ನೀರು ಬೇಕು. ನಮಗೆ ನೀರು ಕೊಡಿಸುವ ತನಕ ಮುಷ್ಕರ ಮುಂದುವರೆಯುತ್ತದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಅಭಿವೃದ್ದಿ ಕಾರ್ಯದಲ್ಲಿ ವಿಫಲವಾಗಿದ್ದಾರೆ. ಕೇವಲ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು. ರಾಜಕಾರಣಿಗಳಿಗೆ ಬುದ್ದಿ ಕಲಿಸಲು ಇವರನ್ನು ಮೊದಲು ಬಹಿಷ್ಕಾರ ಹಾಕಬೇಕಿದೆ. ಮಹದಾಯಿ ನೀರಿಗಾಗಿ ನಡೆದ ಧರಣಿಗೆ ಎಲ್ಲರೂ ಕೈಜೋಡಿಸಬೇಕು” ಎಂದು ವಿನಂತಿಸಿದರು.

ಇದನ್ನೂ ಓದಿ: ಹುಬ್ಬಳ್ಳಿ | ಕಸ ವಿಲೇವಾರಿ ವಾಹನ ಹರಿದು 6 ವರ್ಷದ ಬಾಲಕಿ ಸಾವು

ನಾಗಪ್ಪ ಮಾತನಾಡಿ, “ರಾಜ್ಯ ಮತ್ತು ಕೇಂದ್ರ ಸರ್ಕಾದಗಳು ಒಬ್ಬರ ಮೇಲೊಬ್ಬರು ಹಾಕುತ್ತಿದ್ದಾರೆ.‌ ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಮಾಡುವ ಹಲಾಲ್‌ಕೋರ ಸರ್ಕಾರಗಳನ್ನು ಕಿತ್ತೊಗೆಯಬೇಕು. ಮಹದಾಯಿ ನೀರು ಕೇವಲ ರೈತರಿಗಾಗಿ ಅಷ್ಟೇ ಅಲ್ಲ. ಹುಬ್ಬಳ್ಳಿ ಧಾರವಾಡ ಜನತೆಗೆ ಅನುಕೂಲವಾಗುತ್ತದೆ. ಜಾತಿ ಮತ ಮರೆತು ಎಲ್ಲರೂ ಒಂದಾಗಿ ಕುಡಿಯುವ ನೀರಿಗಾಗಿ ಎರಡೂ ಸರ್ಕಾರಗಳಿಗೂ ಒತ್ತಾಯಿಸಬೇಕು. ಮಹದಾಯಿ ಹೋರಾಟ ಸ್ಥಗಿತಗೊಂಡರೆ ರಾಜಕೀಯ ಮಾಡಲು ಕಾರಣವಿಲ್ಲ ಎಂಬ ಕಾರಣಕ್ಕೆ ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ” ಎಂದರು.

ಧರಣಿಯಲ್ಲಿ ದಲಿತಪರ ಹೋರಾಟಗಾರ್ತಿ ಶೋಭಕ್ಕ, ಗಂಧಾದರ ಪೆರೂರ, ಸಿದ್ದಣ್ಣ ತೇಜಿ, ಪೀರಸಾಬ ನದಾಫ್, ಫಾತೀಮಾ ತಡಕೋಡ, ಮಕಾನಂದಾರ, ಬೀರಪ್ಪ ಕಡ್ಡಿ, ಶಂಕ್ರಣ್ಣ ಕೋಟಿ, ನಾಗಪ್ಪ ಉಂಡಿ, ರವಿರಾಜ ಕಂಬಳಿ, ಹರೀಶ್ ಗುಂಟ್ರಾಳ, ಶಮೀಮ್ ಮುಲ್ಲಾ, ಮಹಿಳೆಯರು ಹಾಗೂ ಹಲವು ರೈತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...