ಹುಬ್ಬಳ್ಳಿ | ಜನಸಾಮಾನ್ಯರಿಂದ ವೃತ್ತಿ ರಂಗಭೂಮಿ ದೂರವಾಗುತ್ತಿದೆ: ಸುಭಾಷ್ ನರೇಂದ್ರ

Date:

ಸಿನೆಮಾ, ದೂರದರ್ಶನ, ಮೊಬೈಲ್‌ಗಳ ಹಾವಳಿಯಿಂದ ಮತ್ತು ಆಧುನಿಕತೆಗೆ ಮಾರುಹೋಗಿ ರಂಗ ಭೂಮಿಯ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಪ್ರದರ್ಶನ ನೀಡಲು ನಟರು ತೊಡಗಿದ್ದರಿಂದ ವೃತ್ತಿ ರಂಗಭೂಮಿ ಜನಸಾಮಾನ್ಯರಿಂದ ದೂರಾಗುತ್ತಿದೆ ಎಂದು ಮಾಜಿ ರಂಗಾಯಣದ ನಿರ್ದೇಶಕ ಸುಭಾಷ್ ನರೇಂದ್ರ ಹೇಳಿದರು.

ಹುಬ್ಬಳ್ಳಿ ನಗರ ಘಟಕದ ಕನ್ನಡ ಸಾಹಿತ್ಯ ಪರಿಷತ್ತು ಈಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಿರಿಯ ರಂಗ ಕಲಾವಿದೆ ವೀಣಾ ಅಠವಲೆ ದತ್ತಿ ಕಾರ್ಯಕ್ರಮದಲ್ಲಿ ರಂಗಭೂಮಿಯ ಏಳು-ಬೀಳು ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವೀಣಾ ಅಠವಲೆಯವರು ಕಲಾವಿದೆಯಾಗಿ, ಬಡ ಮಕ್ಕಳ ತಾಯಿಯಾಗಿ ಮಾಡಿದ ಸೇವೆ ಅಪಾರ ಎಂದರು. ಇದೇ ಸಂದರ್ಭದಲ್ಲಿ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ ಪದ್ಮಿನಿ ಓಕ್, ರಂಗ ಕಲಾವಿದ ಗೋಪಾಲ ಉಣಕಲ್, ನೃತ್ಯ ವಿಧುಷಿ ಹೇಮಾ ವಾಘ್ಮೋಡೆ ಅವರನ್ನು ಸನ್ಮಾನಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದನ್ನೂ ಓದಿ: ಹುಬ್ಬಳ್ಳಿ | ಪ್ರಲ್ಹಾದ್ ಜೋಶಿ ಎಲ್ಲಿದ್ದಾರೆಂದು ಪತ್ತೆ ಹಚ್ಚಬೇಕಿದೆ: ವಿಜಯಕುಮಾರ ಗುಂಜಾಳ ಟೀಕೆ

ಕಾರ್ಯಕ್ರಮದಲ್ಲಿ ರಂಗ ಕಲಾವಿದ ಬಸವರಾಜ ಚಕ್ರಸಾಲಿ, ಡಾ. ಲಿಂಗರಾಜ ಅಂಗಡಿ, ಲಕ್ಷ್ಮಣ್ ರಾವ್ ಓಕ್, ಪ್ರೊ ಕೆ ಎಸ್ ಕೌಜಲಗಿ, ಪದ್ಮಿನಿ ಓಕ್, ಜೋಶನಾ ಕಡಕೋಳ, ಸುನಿಲ್ ಪತ್ರಿ, ವಿ ಎನ್ ಕೀರ್ತಿವತಿ, ಚನ್ನಬಸಪ್ಪ ಧಾರವಾಡ ಶೆಟ್ಟರ್, ಸಿದ್ದಮ್ಮ ಅಡವೆನ್ನವರ, ಎಸ್ ಕೆ ಆದಪ್ಪನವರ, ಸಂಧ್ಯಾ ದಿಕ್ಷೀತ, ಅನಸೂಯಾ ಪಾಟೀಲ, ರೇಖಾ ಹೆಗಡೆ, ರೇಣುಕಾ ದೆಸಾಯಿ, ರೂಪಾ ಜೋಶಿ, ಈರಣ್ಣ ಕಾಡಪ್ಪನವರ, ಬ್ಯಾಸಿಲ್ ಡಿಸೋಜಾ, ಭಾರತಿ ವಾಲಿ, ನೀಲಾ ಕುಬಸದ ಹಾಗೂ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...