ಹುಬ್ಬಳ್ಳಿ | ಸಾಧನಾ ಸಂಸ್ಥೆಯಿಂದ 5 ವರ್ಷದ ಮೃತ ಬಾಲಕಿ ಕುಟುಂಬಕ್ಕೆ ಧನಸಹಾಯ ನೀಡಿ ಸಾಂತ್ವನ

Date:

5 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಯತ್ನ ಮತ್ತು ಕೊಲೆ ಘಟನೆ ಹಾಗೂ ಬಿಬಾರ ಮೂಲದ ಆರೋಪಿ ರಿತೇಶಕುಮಾರ್‌ನ ಎನ್‌ಕೌಂಟರ್ ಪ್ರಕರಣದ ಹುಬ್ಬಳ್ಳಿ ಜನೆತೆಯೆ ಬೆಚ್ಚಿಬಿದ್ದಿದ್ದು, ಇತ್ತ ಮೃತ ಬಾಲಕಿ ಕುಟುಂಬಕ್ಕೆ ಹಲವರು ಸಹಾಯಕ್ಕೆ ಧಾವಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಸಾಧನಾ ಮಹಿಳಾ ‌ಮತ್ತು ಮಕ್ಕಳ ‌ಅಭಿವೃದ್ದಿ ಸಂಸ್ಥೆಯ‌ ಮೂಲಕ 28500ರೂ ಚೆಕ್ ನೀಡಿ ಸಾಂತ್ವನ ಹೇಳಿ ಹೇಳಿದ್ದಾರೆ.

ಈ ವೇಳೆ ಸಂಸ್ಥೆಯ ಮಹಿಳೆಯರು ಮಾತನಾಡಿ, ಅತ್ಯಾಚಾರ ಮಾಡಿ ಪುಟ್ಟ ಐದು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದ ದುರ್ಘಟನೆ ಹಬ್ಬಳಿಯ ಅಶೋಕನಗರದ ವ್ಯಾಪ್ತಿಯಲ್ಲಿ ನಡೆದದ್ದು ಕ್ಷಮಿಸಲಾರದ ಘಟನೆ. ಅತ್ಯಾಚಾರಿ ಬಿಹಾರ ಮೂಲದ ವಲಸಿಗನಾಗಿದ್ದಾನೆ. ಮೃತ ಬಾಲಕಿಯ ತಾಯಿ ಲತಾ ಕುರಿ‌ ಮನೆ ಕೆಲಸ ಮಾಡಿಕೊಂಡು ‌ಬದುಕಿದ್ದವಳು. ತಂದೆ ಪೆಂಟಿಂಗ್ ಮಾಡುವ ಕೂಲಿ ಕೆಲಸ ಮಾಡುತ್ತಾರೆ. ವಾಸಿಸಲು ಸ್ವಂತ ಮನೆಯು ಇಲ್ಲ. 8 ವರ್ಷದ ಹೆಣ್ಣು ಮಗು ಅಂಗವಿಕಲೆ. ಅವರ ಬದುಕ ದುಸ್ತರವಾಗಿದೆ ಎಂದರು.

ಸಿಸ್ಟರ ಸಾಲಿ ಡಿಸೋಜ 5000ರೂ, ಸಿಸ್ಟರ ದಿವ್ಯಾಡಿ’ಸೋಜ 5000ರೂ, ಪ್ರತಾಪ 3000ರೂ, ವೆನಿಟಾ ಪೇರ್ನಾಂಡಿಸ್ 5000ರೂ, ಬಿಹಾರದ ಪ್ರಕಾಶಲೂಯಿಸ 5500 ರೂ‌ ಒಟ್ಟು 28500ರೂ. ನೀಡಿ ನೊಂದ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈ ವೇಳೆ ಇಸಾಬೆಲಾ ಝೇವಿಯರ್ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...