ಹುಬ್ಬಳ್ಳಿ | ಕರ್ನಾಟಕದ ಏಕೀಕರಣದ ಇತಿಹಾಸ‌ ರೋಚಕವಾಗಿದೆ: ಪ್ರೊ. ಕೆ.ಎಸ್. ಕೌಜಲಗಿ

Date:

ಕರ್ನಾಟಕವನ್ನು ಏಕೀಕರಣಗೊಳಿಸಲು ಸಾಹಿತಿಗಳು, ಪತ್ರಿಕೆಗಳು, ಸಂಘ ಸಂಸ್ಥೆಗಳು, ರಾಜಕೀಯ ಧುರೀಣರು ಹಾಗೂ ಅದರಗುಂಚಿ ಶಂಕರಗೌಡರ ಆಮರಣ ಉಪವಾಸದಿಂದ ಕೇಂದ್ರ ಸರ್ಕಾರವು ಭಾಷಾವಾರು ಪ್ರಾಂತಗಳ ರಚನಾ ಆಯೋಗವನ್ನು ರಚಿಸಿತು.‌ ಆಯೋಗದ ವರದಿಯ ಪ್ರಕಾರ 1956 ನವೆಂಬರ್ 1 ರಂದು ಮೈಸೂರು ಎಂಬ ಹೆಸರು ಪಡೆದು ಅಸ್ತಿತ್ವಕ್ಕೆ ಬಂತು.‌1973 ರಲ್ಲಿ ಕರ್ನಾಟಕ ಎಂಬ ಪುನರ್ ನಾಮಕರಣ ಹೊಂದಿತು. ಹೀಗೆ ಕರ್ನಾಟಕದ ಏಕೀಕರಣದ ಇತಿಹಾಸ‌ ರೋಚಕವಾಗಿದೆ ಎಂದು ಪ್ರೊ. ಕೆ.ಎಸ್. ಕೌಜಲಗಿ ಹೇಳಿದರು.

ಹುಬ್ಬಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ, ವಿಶ್ವ ಭಾರತಿ ಪದವಿ ಪೂರ್ವ ಕಾಲೇಜು ಹಾಗೂ ವಿಶ್ವ ಭಾರತಿ ಬಾಲಕೀಯರ ಪ್ರೌಡಶಾಲೆಯಲ್ಲಿ ಏರ್ಪಡಿಸಿದ್ದ ಶಾಂತಾ ರಾಮಚಂದ್ರ ನಾಡಗೇರ ದತ್ತಿ ಉಪನ್ಯಾಸದಲ್ಲಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕವು ಅನೇಕ ಪ್ರಾಂತ ಮತ್ತು ಸಂಸ್ಥಾನಗಳಲ್ಲಿ ಹರಿದು ಹಂಚಿ ಇಪ್ಪತ್ತೆರಡು ತುಂಡುಗಳಾಗಿ ಬೇರೆ ಬೇರೆ ಆಡಳಿತಕ್ಕೆ ಒಳಪಟ್ಟಿತ್ತು ಎಂದರು.

ವೆಂಕಟರೆಡ್ಡಿ ಕಿರೆಸೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.‌ ಎಚ್ ಎಸ್ ಚೌವಡಾಪೂರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ವಿಶ್ವ ಭಾರತಿ  ಪದವಿ ಪೂರ್ವ ಹಾಗೂ ವಿಶ್ವ ಭಾರತಿ ಬಾಲಕೀಯರ ಪ್ರೌಡ ಶಾಲೆಯ ವಿದ್ಯಾರ್ಥಿನಿಯರಿಂದ ಕನ್ನಡಪರ ಗೀತೆಗಳು, ನಾಡು ನುಡಿ ಕುರಿತು ಭಾಷಣ ನಡೆದವು. ಇದೇ ಸಂದರ್ಭದಲ್ಲಿ ವೆಂಕಟರೆಡ್ಡಿ ಕಿರೆಸೂರ, ಧೀಮಂತ ಪ್ರಶಸ್ತಿ ಪುರಸ್ಕೃತ ಚನ್ನಬಸಪ್ಪ ಧಾರವಾಡಶೆಟ್ಟರ, ದತ್ತಿದಾನಿ ಶಾಂತಾ ನಾಡಿಗೇರ, ಪ್ರೊ. ಎಚ್ ಎಸ್ ಚೌವಡಾಪೂರ ಅವರನ್ನು ಸನ್ಮಾನಿಸಿದರು.‌

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ ಧಾರವಾಡ | ಇತರ ರಾಜ್ಯಗಳ ಹೇರಿಕೆಯಿಂದ ಕನ್ನಡ ರಕ್ಷಿಸುವುದು ನಮ್ಮ ಕರ್ತವ್ಯ: ಶಾಸಕ ಎಂ. ಆರ್. ಪಾಟೀಲ

ವಿದ್ಯಾ ವಂಟಮುರಿ ವಂದಿಸಿದರು.‌ ಕುಮಾರಿ ರಕ್ಷಾ ನಡ್ಲಹಳ್ಳಿ ಕಾರ್ಯಕ್ರಮ ನಿರೂಪಿಸಿದರು.‌ ಪ್ರಾಚಾರ್ಯ ಬಿ ಜಿ ಗೋಪಾಲ, ಮುಖ್ಯಪಾಧ್ಯಾಯಿನಿ ಭಾರತಿ ಭದ್ರಾಪೂರ, ಸಂಧ್ಯಾ ದೀಕ್ಷಿತ್, ಗಿರಿಜಾ ಚಿಕ್ಕಮಠ, ಅನಸೂಯಾ ಪಾಟೀಲ್, ಸಿದ್ದಮ್ಮ ಅಡವೆಣ್ಣವರ, ಕುಮದಾ ದೇಶಪಾಂಡೆ, ಸುರೇಶ್ ಹೊರಕೇರಿ, ರೇಣುಕಾ ದೆಸಾಯಿ, ಪ್ರೊ ತ್ರಿವೇಣಿ ಚಿಪ್ಪಾಡಿ, ಪ್ರೊ. ತ್ರಿವೇಣಿ ವಾಲಿ, ಜ್ಯೋತಿ ಶಿರೋಳ, ಭಾರತಿ ಕಮಡೊಳ್ಳಿ, ಎಸ್ ಕೆ ಕೊಣ್ಣೂರ, ಯಶೋಧಾ ಬಂಡಿ, ಜಯಶ್ರೀ ಪಾಟೀಲ್ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...