ಯುವಕರಿಬ್ಬರು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಹರಿಬಿಟ್ಟಿದ್ದ ಘಟನೆ ಹುಬ್ಬಳ್ಳಿ ನಗರದ ಹಳೆ ಹುಬ್ಬಳ್ಳಿ ಪೊಲೀಸ ಠಾಣೆ ವ್ಯಾಪಿಯಲ್ಲಿ ನಡೆದಿದೆ.
ಅಪರಿಚಿತ ಮಹಿಳೆಯೊಬ್ಬರು ನಗರದಲ್ಲಿ ಓಡಾಡಿಕೊಂಡಿದ್ದರು. ಈ ವೇಳೆ ಶಿವಾನಂದ್ (29) ಹಾಗೂ ಗಣೇಶ್ ಗಿಡ್ಡಣ್ಣವರ (31) ಎಂಬುವ ಯುವಕರಿಬ್ಬರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಇದನ್ನೂ ಓದಿ ಧಾರವಾಡ | ಹದಗೆಟ್ಟ ರಸ್ತೆಗಳ ದುರಸ್ತಿಗೆ ರೈತರ ಒತ್ತಾಯ
ಶಿವಶಂಕರ ಕಾಲೋನಿ ನಿವಾಸಿಗಳಾದ ಇಬ್ಬರನ್ನೂ ಈಗಾಗಲೇ ಮಹಿಳೆಯಿಂದ ದೂರು ದಾಖಲಿಸಿಕೊಂಡು ಪೊಲೀಸರು ಬಂಧಿಸಿದ್ದು, ಅತ್ಯಾಚಾರಕ್ಕೊಳಗಾದ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನಡೆಯುತ್ತದೆ ಎನ್ನಲಾಗಿದೆ.





