ಮನೆಯಲ್ಲಿ ಮೋಟಾರ್ ಬಂದ್ ಮಾಡಲು ಹೋಗಿದ್ದ ಯುವತಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ನಗರದ ಮೂರುಸಾವಿರ ಮಠದ ಹತ್ತಿರ ನಡೆದಿದೆ.
ಮೃತ ಯುವತಿಯನ್ನು ಮೇಘನಾ (23) ಎಂದು ಗುರುತಿಸಲಾಗಿದ್ದು, ಒಂದು ತಿಂಗಳ ಹಿಂದೆ ಮನೆಯಲ್ಲಿ ಮೋಟಾರ್ ಸ್ವಿಚ್ ಆಫ್ ಮಾಡುವ ಸಮಯದಲ್ಲಿ ಆಕೆಗೆ ವಿದ್ಯುತ್ ಸ್ಪರ್ಶಿಸಿದ್ದು, ಗಂಭೀರವಾಗಿ ಅಸ್ವಸ್ಥಗೊಂಡಿದ್ದಳು.
ಕುಟುಂಬಸ್ಥರು ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು, ಸತತ ಒಂದು ತಿಂಗಳಿನಿಂದ ವೈದ್ಯಕೀಯ ಸಿಬ್ಬಂದಿ ನಡೆಸಿದ ಪ್ರಯತ್ನ ಫಲಕಾರಿಯಾಗದೆ ಮೇಘನಾ ನ. 26ರಂದು ಮೃತಪಟ್ಟಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಉಪನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.





