ಸೌಜನ್ಯಳ ಆರೋಪಗಳಿಗೆ ಅಂದು ಕ್ರೂರ ಶಿಕ್ಷೆ ವಿಧಿಸಿದ್ದರೆ ಇಂದು ನೇಹಾ, ರಕ್ಸನಾ ಮತ್ತು ಪ್ರಿಯಾರವರು ಉಳಿಯುತ್ತಿದ್ದರು ಎಂದು ಸಾಧನಾ ಸಂಸ್ಥೆಯ ಸಂಸ್ಥಾಪಕಿ ಡಾ ಇಸಬೆಲಾ ಝೇವಿಯರ್ ಹೇಳಿದರು.
ಹುಬ್ಬಳ್ಳಿಯ ಬಿಡ್ಳನಾಳ ಯುವತಿ ನೇಹಾ ಮನೆಗೆ ಸಂಸ್ಥೆಯ ಸದಸ್ಯರೊಂದಿಗೆ ಭೇಟಿ ನೀಡಿ, ನೇಹಾಳ ಹೆತ್ತವರ ಜೊತೆಯಲ್ಲಿ ಒಂದು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿ ಮಾತನಾಡಿದರು.
“ಆರೋಪಿ ಯಾವುದೇ ಜಾತಿಯವನಾಗಿರಲಿ, ಧರ್ಮದವನಾಗಿರಲಿ ಅವನು ಗಂಡಸು ಬಲಿಯಾಗುತ್ತಿರುವವರು ಹೆಣ್ಣುಗಳು. ಹಾಗಾಗಿ ನೇಹಾಳ ಹೆಸರಿನ ಕಾನೂನು ತಂದಲ್ಲಿ ಅತ್ಯಚಾರ ಮತ್ತು ಕೊಲೆ ಪ್ರಕರಣಗಳು ನಡೆದಲ್ಲಿ ಕೂಡಲೇ ಕಠಿಣ ಅಥವಾ ಗಲ್ಲುಶಿಕ್ಷೆಗಳಾದರೆ ದುಷ್ಕರ್ಮಿಗಳು
ಕೃತ್ಯ ಎಸಗುವಾಗ ಭಯ ಹುಟ್ಟತ್ತದೆ. ಕನಿಷ್ಟ ಪಕ್ಷ ಜೀವಗಳು ಉಳಿಯುತ್ತವೆ. ಸೌಜನ್ಯಳ ಪ್ರಕರಣದಲ್ಲಿ ಅಂದು ತೀವ್ರ ಶಿಕ್ಷೆಯಾಗಿದ್ದರೆ ಇಂದು ಉಡುಪಿಯ ಹುಡುಗಿ, ಆಕೆಯ ಕುಟುಂಬದ ಸದಸ್ಯರು, ರುಕ್ಸನಾ, ಪ್ರಿಯಾ ಮತ್ತು ನೇಹಾ ಉಳಿಯುತ್ತಿದ್ದರು” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಭಿವೃದ್ಧಿ ಆತ್ಮಾವಲೋಕನ ಮಾಡಿಕೊಂಡು ಕಾಂಗ್ರೆಸ್‌ಗೆ ಮತ ನೀಡಿ: ಶಾಸಕ ಯಶವಂತರಾಯಗೌಡ ಪಾಟೀಲ
“ಚುನಾವಣೆಗಾಗಿ ಕೈ ಕಾಯಿಸಿಕೊಳ್ಳುವುದನ್ನು ಬಿಟ್ಟು, ಅಪರಾಧಿಗೆ ಕಠಿಣ ಶಿಕ್ಷೆಯಾಗುವ ಬಗ್ಗೆ ಪ್ರಯತ್ನ ಮಾಡಬೇಕಾಗಿದೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮನಸ್ಸು ಮಾಡಿ, “ನೇಹಾ 2024 ಅಪರಾಧಿಗೆ ಗಲ್ಲು” ಎಂಬ ಕಾಯಿದೆ ಜಾರಿ ಮಾಡಿ ಆದಲ್ಲಿ ಮಾತ್ರ ಲಕ್ಷಾಂತರ ನೇಹಾಗಳ ಬದುಕು ಉಳಿಯಬಹುದು ಎಂದು ಹೇಳುತ್ತಾ, ನಿರಂಜನ ಹಿರೇಮಠ ಅವರ ಮಗಳ ನ್ಯಾಯಕ್ಕಾಗಿ ಹೋರಾಡಬೇಕು, ರಾಜಕೀಯಕ್ಕೆ ಅವಕಾಶ ಕೊಡಬಾರದು” ಎಂದು ಡಾ ಇಸಬೆಲಾ ಝೇವಿಯರ್ ವಿನಂತಿಸಿದರು.





