ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಹಲವು ರೈಲುಗಳ ಸಂಚಾರ ರದ್ದು

Date:

ಕಾರಟಗಿ ಮತ್ತು ಸಿದ್ದಾಪುರ ನಿಲ್ದಾಣಗಳಲ್ಲಿ ನಡೆಯುತ್ತಿರುವ ರೈಲ್ವೆ ಸಂಬಂಧಿತ ಕಾಮಗಾರಿಗಳಿಂದಾಗಿ ರೈಲುಗಳು ಭಾಗಶಃ ರದ್ದುಗೊಳ್ಳಲಿವೆ. ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ (16545) ಸೇವೆ ನವೆಂಬರ್ 21ರಿಂದ 30 ರವರೆಗೆ ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

ನೈಋತ್ಯ ರೈಲ್ವೆಯು ಬೆಂಗಳೂರು-ಹುಬ್ಬಳ್ಳಿ ಮಧ್ಯೆ ಪ್ರಯಾಣಿಸುವ ಎರಡು ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ನವೆಂಬರ್​ 20ಮತ್ತು 21ರಂದು ಪ್ರಯಾಣಿಸಬೇಕಿದ್ದ, ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಮತ್ತು ಕೆಎಸ್‌ಆರ್ ಬೆಂಗಳೂರು ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲನ್ನು ಕಳಪೆ ಆಕ್ಯುಪೆನ್ಸಿ ಕಾರಣದಿಂದ ರದ್ದು ಮಾಡಲಾಗಿದೆ. ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಪ್ರಯಾಣಿಸುವ ರೈಲುಗಳು ಮುಂದಿನ ಸುತ್ತೋಲೆ ಬರುವವರೆಗೂ ಹಳಿಗೆ ಇಳಿಯುವುದಿಲ್ಲ.

ಹೊಸಪೇಟೆ-ಹರಿಹರ ಪ್ಯಾಸೆಂಜರ್​​ ರೈಲುಗಳನ್ನು ಕಾರಣಾಂತರಗಳಿಂದ ನವೆಂಬರ್​ 17,18,19 ರದ್ದು ಮಾಡಲಾಗಿತ್ತು. ಇದೀಗ ರೈಲುಗಳು ಮೊದಲಿನ ವೇಳಾಪಟ್ಟಿಯಂತೆ ಮತ್ತೆ ಪ್ರಾರಂಭವಾಗಿವೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬಾರ್ಮರ್ ಮಧ್ಯೆ ಹೆಚ್ಚು ರೈಲುಗಳನ್ನು ಓಡಿಸಲು ಇಲಾಖೆ ನಿರ್ಧರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರೈಲು ಸಂಖ್ಯೆ 06521 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಬಾರ್ಮರ್ ವಿಶೇಷ ಎಕ್ಸ್‌ಪ್ರೆಸ್, ನವೆಂಬರ್ 21ರಂದು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಸಂಜೆ 4.30ಕ್ಕೆ ಹೊರಡಲಿದೆ. ನವೆಂಬರ್ 23ರಂದು ಮಧ್ಯಾಹ್ನ 1.45ಕ್ಕೆ ಬಾರ್ಮರ್ ತಲುಪುತ್ತದೆ. ಬಾರ್ಮರ್-ಸರ್ ಎಂ. ವಿಶ್ವೇಶ್ವರಯ್ಯ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ನವೆಂಬರ್ 24ರಂದು ಬೆಳಿಗ್ಗೆ 3.45 ಕ್ಕೆ ಬಾರ್ಮರ್‌ನಿಂದ ಹೊರಟು, ನವೆಂಬರ್ 25ರ ಬೆಳಿಗ್ಗೆ 11.30ಕ್ಕೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ತಲುಪಲಿದೆ.

ಈ ರೈಲುಗಳು ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ರಾಣಿಬೆನ್ನೂರು, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರಸ್ತೆ, ವಾಪಿ, ಸೂರತ್‌, ವಡೋದರಾ, ಅಹಮದಾಬಾದ್, ಮಹೇಶನ, ಪಟಾನ್, ಭಿಲ್ಡಿ, ಧನೇರಾ, ರಾಣಿವಾರ, ಮರ್ವಾರ್ ಭಿನ್ಮಾಲ್, ಮೋದ್ರನ್, ಜಲೋರ್, ಮೊಕಲ್ಸರ್, ಸಂಧಾರಿ, ಬಲೋತ್ರಾ ಮತ್ತು ಬೈತು ಮಾರ್ಗವಾಗಿ ಪ್ರಯಾಣಿಸುತ್ತದೆ.

ಈ ರೈಲುಗಳು ಎರಡು ಎಸಿ ಟು-ಟೈರ್ ಕೋಚ್‌ಗಳನ್ನು ಹೊಂದಿವೆ. 15 ಎಸಿ ತ್ರೀ-ಟೈರ್ ಎಕಾನಮಿ ಕೋಚ್‌ಗಳು ಮತ್ತು ಎರಡು ಲಗೇಜ್, ಜನರೇಟರ್, ಬ್ರೇಕ್ ವ್ಯಾನ್‌ಗಳನ್ನು ಹೊಂದಿವೆ.

ಕಾರಟಗಿ ಮತ್ತು ಸಿದ್ದಾಪುರ ನಿಲ್ದಾಣಗಳಲ್ಲಿ ನಡೆಯುತ್ತಿರುವ ರೈಲ್ವೆ ಸಂಬಂಧಿತ ಕಾಮಗಾರಿಗಳಿಂದಾಗಿ ಈ ಕೆಳಗಿನ ರೈಲುಗಳು ಭಾಗಶಃ ರದ್ದುಗೊಳ್ಳಲಿವೆ. ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್ ಸೇವೆ ನವೆಂಬರ್ 21ರಿಂದ 30ರವರೆಗೆ ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

ನವೆಂಬರ್ 21 ರಿಂದ 30ರವರೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ-ಕಾರಟಗಿ ಎಕ್ಸ್‌ಪ್ರೆಸ್ (17303) ಸೇವೆ, ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ, ಎಸ್‌ಎಸ್‌ಎಸ್ ಹುಬ್ಬಳ್ಳಿ-ಕಾರಟಗಿ ಪ್ಯಾಸೆಂಜರ್ (07381) ವಿಶೇಷ ಪ್ರಯಾಣವು ನವೆಂಬರ್ 21 ರಿಂದ 30 ರವರೆಗೆ ಗಂಗಾವತಿ ಮತ್ತು ಕಾರಟಗಿ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿವೆ.

ರೈಲು ಸಂಖ್ಯೆ 16546 ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ನವೆಂಬರ್ 22ರಿಂದ ಡಿಸೆಂಬರ್ 1 ರವರೆಗೆ ಕಾರಟಗಿಯಿಂದ ಹೊರಡುವ ಬದಲು ಗಂಗಾವತಿಯಿಂದ ಹೊರಡಲಿದೆ. ಕಾರಟಗಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ (17304) ನವೆಂಬರ್ 22 ರಿಂದ ಡಿಸೆಂಬರ್ 1 ರವರೆಗೆ ಕಾರಟಗಿ ನಿಲ್ದಾಣದ ಬದಲಾಗಿ ಗಂಗಾವತಿಯಿಂದ ಹೊರಡಲಿದೆ. ಕಾರಟಗಿ-ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ವಿಶೇಷ ರೈಲು (07382) ನವೆಂಬರ್ 21ರಿಂದ 30 ರವರೆಗೆ ಕಾರಟಗಿ ನಿಲ್ದಾಣದಬ ಬದಲು ಗಂಗಾವತಿಯಿಂದ ಹೊರಡಲಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...