ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದಲ್ಲಿ ಸಾಹಿತ್ಯ ರತ್ನ ಲೋಕನಾಯಕ ಅಣ್ಣಾಭಾವು ಸಾಠೆ ಅವರ 105ನೇ ಜಯಂತಿ ಆಚರಿಸಲಾಯಿತು.
ಮುಖಂಡ ಗಣೇಶ ಸೂರ್ಯವಂಶಿ ಮಾತನಾಡಿ, ʼಅಣ್ಣಾಭಾವು ಸಾಠೆ ಅವರು ಜಾನಪದ ಸಾಹಿತ್ಯ, ಕಾದಂಬರಿ, ಜೀವನ ಚರಿತ್ರೆ ಸೇರಿ ಹಲವು ರೀತಿಯ 40ಕ್ಕೂ ಹೆಚ್ಚು ಪುಸ್ತಕ ರಚನೆ ಮಾಡಿದ್ದಾರೆ. ಅವರ ಚಿಂತನೆಯನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಉತ್ತಮ ನಾಗರಿಕರಾಗಿ ಬದುಕುವಂತೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆʼ ಎಂದು ತಿಳಿಸಿದರು
ಮಾಹಾರಾಷ್ಟ್ರದ ಮುಖಂಡ ವಿಷ್ಣು ಖಂಡಾಗಳೆ ಮಾತನಾಡಿ, ʼಸಮಾಜದ ಏಳಿಗಾಗಿ ಶ್ರಮಿಸಿದ ಅಣ್ಣಾಭಾವು ಸಾಠೆ ಯುವಜನಾಂಗಕ್ಕೆ ದಾರಿದೀಪವಾಗಿದ್ದಾರೆ. ಅವರ ವಿಚಾರದಲ್ಲಿನಾವೆಲ್ಲರೂ ಮುನ್ನಡೆಯೋಣʼ ಎಂದರು.
ಇದನ್ನೂ ಓದಿ : ಕಲಬುರಗಿ | ಅನ್ಯಜಾತಿ ಯುವಕನನ್ನು ಪ್ರೀತಿಸಿದಕ್ಕೆ ಮಗಳನ್ನು ಕೊಂದ ತಂದೆ
ಕಾರ್ಯಕ್ರಮದಲ್ಲಿ ಶಿಕ್ಷಕ ಸೂರ್ಯಕಾಂತ ಸಸಾನೆ. ಸಮಿತಿ ಅಧ್ಯಕ್ಷ ಸಂತೋಷ್ ಸೂರ್ಯವಂಶಿ ಹಾಗೂ ಸಮಾಜದ ಮುಖಂಡರಾದ ಭೀಮಶಾ, ಚಂದ್ರಕಾಂತ ಬಾಬುರಾವ್ ದೇವಿದಾಸ ಮಲ್ಲಿಕಾರ್ಜುನ, ಧನರಾಜ್,ವೆಂಕಟ, ಪಪ್ಪು, ಮನೋಜ್ ವಿನೋದ್, ಮಾಹಾದೇವ, ಅನೀಲ, ಲಕ್ಷ್ಮಣ, ಚನ್ನಪ್ಪ, ರೂಪೇಶ್, ಶಾಮ, ದತ್ತು ದಿಗಂಬರ ಲಹು, ನಾಗೇಶ್, ಶ್ರೀಮಂತ, ಸುಮೀತ, ಗೋವಿಂದ, ಹಣಮಂತ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.





