ಹುನಗುಂದ | ದುಬಾರಿ ಬಾಡಿಗೆ; ಹರಾಜಾಗದ ಪುರಸಭೆಯ ವ್ಯಾಪಾರ ಮಳಿಗೆಗಳು

Date:

ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಪುರಸಭೆಯ ಹಲವಾರು ಮಳಿಗೆಗಳು ಖಾಲಿಬಿದ್ದಿವೆ. ಬಾಡಿಗೆ ಹೆಚ್ಚಾದ ಕಾರಣಕ್ಕೆ ಬಾಡಿಗೆದಾರರು ಮಳಿಕೆಗಳನ್ನು ಪಡೆದುಕೊಳ್ಳುತ್ತಿಲ್ಲ ಎಂಬ ಮಾತುಗಳಿವೆ. ನಗರದಲ್ಲಿ 18ಕ್ಕೂ ಹೆಚ್ಚು ಮಳಿಗೆಗಳು ಹರಾಜಾಗದೆ ದಶಕದಿಂದಲೂ ಖಾಲಿ ಬಿದ್ದಿವೆ. ಪರಿಣಾಮ, ಪುರಸಭೆ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ.

ಹುನಗುಂದ ನಗರ ವ್ಯಾಪ್ತಿಯಲ್ಲಿ ಪುರಸಭೆಯು 2006-07ನೇ ಸಾಲಿನ ಐಡಿಎಸ್‌ಎಂಟಿ ಯೋಜನೆಯಡಿ 20 ವಾಣಿಜ್ಯ ಮಾಳಿಗೆಗಳನ್ನು ನಿರ್ಮಿಸಿತ್ತು. ಮಳಿಗೆಗಳಿಗೆ 4,500 ರೂ. ಬಾಡಿಗೆಯನ್ನು ನಿಗದಿ ಮಾಡಿತ್ತು. ಬಾಡಿಗೆ ಹೆಚ್ಚಾದ ಕಾರಣ ಈ ಮಳಿಗೆಗಳನ್ನು ಬಾಡಿಗೆಗೆ ಪಡೆಯಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಹಲವು ವರ್ಷಗಳಿಂದ ಮಳಿಗೆಗಳು ಖಾಲಿ ಬಿದ್ದಿವೆ, ಇಲಿ, ಹೆಗ್ಗಣದಂತಹ ಪ್ರಾಣಿಗಳ ವಾಸಸ್ಥಾನವಾಗಿ ಮಾರ್ಮಟ್ಟಿವೆ. ಮಳೆ-ಗಾಳಿಯಿಂದ ಶಿಥಿಲಗೊಳ್ಳುತ್ತಿವೆ.

WhatsApp Image 2024 11 02 at 6.40.50 PM

ಬಿಎಸ್‌ಎನ್‌ಎಲ್‌ ಕಚೇರಿ ಹತ್ತಿರ, ವಿದ್ಯಾನಗರ ಸೇರಿದಂತೆ ಹಲವೆಡೆ ಪುರಸಭೆಯು ಮಳಿಗೆಗಳನ್ನು ನಿರ್ಮಾಣ ಮಾಡಿದೆ. ಹಲವು ವ್ಯಾಪ್ತಿಗಳು ಬೀದಿ ಬದಿಗಳಲ್ಲಿ ಹಾಗೂ ತಗಡಿನ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳು ದಿನನಿತ್ಯ 20 ರೂ. ನೆಲದ ಬಾಡಿಗೆ ಕೊಟ್ಟು ವ್ಯಾಪಾರ ಮಾಡುತ್ತಿದ್ದರೆ, ತಿಂಗಳಿಗೆ 600 ಕೊಟ್ಟು ತಗಡಿನ ಅಂಗಡಿಗಳಲ್ಲಿ ಕೆಲವರು ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ಈ ಮಳಿಗೆಗಳತ್ತ ಮುಖ ಮಾಡುತ್ತಿಲ್ಲ. ಇದಕ್ಕೆ ಕಾರಣ, ಒಂದು ಮಳಿಗೆಗೆ ಬರೋಬ್ಬರಿ 4,500 ರೂ. ಬಾಡಿಗೆ ಇರುವುದು ಎಂದು ಸ್ಥಳೀಯರು ಹೇಳುತ್ತಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ವರದಿ ಓದಿದ್ದೀರಾ?: ನಟ ದರ್ಶನ್ ಅಭಿಮಾನಿಗಳ ಅತಿರೇಕಕ್ಕೆ ಕೊನೆಯೇ ಇಲ್ಲವೇ, ಕೊಲೆಯೂ ಸಮರ್ಥನೀಯವೇ?

ಪುರಸಭೆ ಮಳಿಗೆಗಳಿಗೆ ನಿಗದಿ ಮಾಡಿರುವ ದುಬಾರಿ ಬಾಡಿಗೆ ಹಾಗೂ ಡೆಪಾಸಿಟ್ ಮೊತ್ತವನ್ನು ಕಡಿಮೆ ಮಾಡಿ ಮಳಿಗೆ ಹರಾಜು ಮಾಡಬೇಕೆಂದು ಹಲವು ಬಾರಿ ಪುರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಆದರೂ, ಪುರಸಭೆಯ ಮುಖ್ಯ ಅಧಿಕಾರಿ ನಿರ್ಲಕ್ಷ್ಯ ಧೋರಣೆ ತಳೆದಿದ್ದು, ಅವರ ಬೇಜವಾಬ್ದಾರಿಯಿಂದ ಮಳಿಗೆಗಳು ಖಾಲಿ ಬಿದ್ದಿವೆ ಎನ್ನುತ್ತಾರೆ ಪುರಸಭೆ ಸದಸ್ಯರು.

ಆದಾಯ ಶೂನ್ಯ: ಪುರಸಭೆಯಿಂದ ಕೋಟ್ಯಂತರ ರೂ. ಖರ್ಚು ಮಾಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಪುರಸಭೆ ಒಂದು ಮಳೆಗೆಗೆ 4,500 ರೂ. ನಿಗದಿ ಮಾಡಿದೆ. ಆದರೆ, ವ್ಯಾಪರಿಗಳು 2,000 ರೂ. ಅಥವಾ 2,500 ರೂ. ನಿಗದಿ ಮಾಡಿ ಎನ್ನುತ್ತಿದ್ದಾರೆ. ಬಾಡಿಗೆ ಕಡಿಮೆಯಾಗದ ಕಾರಣ ಮಳಿಗೆಗಳು ಖಾಲಿ ಬಿದ್ದಿವೆ. ಮಳಿಗೆಗಳಿಂದ ಲಕ್ಷಾಂತರ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ದುಬಾರಿ ಬಾಡಿಗೆಯಿಂದ ಯಾರೊಬ್ಬರೂ ಮಳಿಗೆಗಳನ್ನು ಬಾಡಿಗೆಗೆ ಪಡೆಯದ ಕಾರಣ, ಪುರಸಭೆಗೆ ಮಳಿಗೆಗಳಿಂದ ಯಾವುದೇನ ಆದಾಯ ಬರುತ್ತಿಲ್ಲ.

ಈದಿನ.ಕಾಮ್ ಪ್ರತಿನಿಧಿ ಪುರಸಭೆ ಪ್ರಭಾರಿ ಮುಖ್ಯ ಅಧಿಕಾರಿಗೆ ಕರೆ ಮಾಡಿದಾಗ ಅಧಿಕಾರಿಗಳು ಫೋನ್ ನಿರಾಕರಿಸಿದ್ದಾರೆ. ಹಲವು ಬಾರಿ ಕರೆ ಮಾಡಿದ್ದಾಗಿಯೂ ಅವರು ಕರೆ ಸ್ವೀಕರಿಸಿಲ್ಲ. ಪುರಸಭೆ ಸದಸ್ಯರಾಗಲಿ, ಪುರಸಭೆ ಅಧಿಕಾರಿಗಳಾಗಲಿ ಮಳಿಗೆಗಳ ಬಾಡಿಗೆ ವೆಚ್ಚ ಕಡಿಮೆ ಮಾಡಿ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಮಳಿಗೆಗಳನ್ನು ಬಾಡಿಗೆಗೆ ಕೊಡವರೇ ಎಂದು ಕಾದು ನೋಡಬೇಕಿದೆ.

WhatsApp Image 2024 11 02 at 6.40.50 PM 1

ಪೋಸ್ಟ್ ಹಂಚಿಕೊಳ್ಳಿ:

ರಮೇಶ ಎಸ್ ಹೊಸಮನಿ
ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...