ಹುಣಸೂರು | ಪರಿಸರ ಉಳಿಸುವ ರೈತರನ್ನು; ಪರಿಸರ ಹಾಳು ಮಾಡುವಂತೆ ಮಾಡಿದ್ದಾರೆ: ಹೊಸೂರು ಕುಮಾರ್

Date:

ಮೈಸೂರು ಜಿಲ್ಲೆ, ಹುಣಸೂರು ಪಟ್ಟಣದ ಆರ್ ಎಂ ಸಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ‘ರಾಜ್ಯ ತಂಬಾಕು ಬೆಳೆಗಾರರ ಸಮಾಲೋಚನಾ ಸಭೆ’ಯಲ್ಲಿ ಜಿಲ್ಲಾಧ್ಯಕ್ಷರಾದ ಹೊಸೂರು ಕುಮಾರ್ ಮಾತನಾಡಿ, ‘ಪರಿಸರ ಉಳಿಸುವ ರೈತರನ್ನು, ಪರಿಸರ ಹಾಳು ಮಾಡುವಂತೆ ಮಾಡಿದ್ದಾರೆ’ ಎಂದು ಕಿಡಿಕಾರಿದರು.

“ಜಿಲ್ಲೆಯಲ್ಲಿ ತಂಬಾಕು ಖರೀದಿದಾರರು ಖರೀದಿ ನಿಲ್ಲಿಸಿದರ ಪರಿಣಾಮ ಮಾರುಕಟ್ಟೆ ಕಳೆದ ಹದಿನೈದು ದಿನಗಳಿಂದ ಸ್ಥಗಿತಗೊಂಡಿದ್ದು. ತಂಬಾಕು ಮಾರಾಟ ಮಾಡಲಾಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ದುಸ್ಥಿತಿಗೆ ರಾಜ್ಯ, ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ ನೇರ ಕಾರಣವಾಗಿದೆ. ತಂಬಾಕು ಮಂಡಳಿ ರೈತರ ವಿರೋಧಿಯಾಗಿ ವರ್ತನೆ ತೋರುತ್ತಿದೆ. ಅದರಲ್ಲೂ, ಖರೀದಿದಾರರ(ಕಂಪನಿ ಬಯ್ಯರ್ಸ್) ಜೊತೆ ಸೇರಿ ಯಾವುದೇ ನೊಟೀಸ್ ನೀಡದೆ ಮಾರುಕಟ್ಟೆ ಸ್ಥಗಿತ ಮಾಡಿದೆ. ಇನ್ನೂ ಮಾರಾಟ ಮಾಡಲಾಗದ ತಂಬಾಕಿನ ನಷ್ಟದ ಆತಂಕ ಮನೆ ಮಾಡಿದೆ. ವಾಣಿಜ್ಯ ಬೆಳೆ ಹೆಸರಿನಲ್ಲಿ ತಂಬಾಕು ಬೆಳೆಯುವಂತೆ ಮಾಡಿ ಆರೋಗ್ಯ ಅಷ್ಟೇ ಅಲ್ಲಾ, ಭೂಮಿ ಫಲವತ್ತತೆ ಕಳೆಯುವ ಕೆಲಸ ಮಾಡಿದ್ದಾರೆ. ನಾವೇನು ತಂಬಾಕು ಬೆಳೆಯಲೇ ಬೇಕು ಅಂತೇನಿಲ್ಲ. ಆದರೇ, ಜಿಲ್ಲೆಯಲ್ಲಿ ಪರವಾನಿಗೆ ಮೂಲಕ ಅವಕಾಶ ಕಲ್ಪಿಸಿ, ಬೆಳೆಯುವಂತೆ ಮಾಡಿ ರೈತರನ್ನು ವಂಚಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿಮ್ಮೆಗೌಡ ಮಾತನಾಡಿ, “ಕರ್ನಾಟಕ ಹಾಗು ಆಂಧ್ರದ ತಂಬಾಕು ರೈತರಿಂದ ಕೇಂದ್ರ ಸರ್ಕಾರಕ್ಕೆ ಬರೋಬ್ಬರಿ ₹4 ಸಾವಿರ ಕೋಟಿ ತೆರಿಗೆ ರೂಪದಲ್ಲಿ ಆದಾಯ ಬರುತ್ತದೆ. ಅದರಲ್ಲಿ, ರಾಜ್ಯಕ್ಕೆ 100 ಮಿಲಿಯನ್ ತಂಬಾಕು ಅವಕಾಶವಿದೆ. ಆದರೇ, ನಾನಾ ಕಾರಣಗಳಿಂದ 80 ಮಿಲಿಯನ್ ವರ್ಜನಿಯ ತಂಬಾಕು ಬೆಳೆಯಲಾಗುತ್ತಿದೆ. ಆದರೇ, ಆಂಧ್ರಕ್ಕೆ ಹೋಲಿಕೆ ಮಾಡಿದರೆ ಅಲ್ಲಿನ ಗರಿಷ್ಠ ಬೆಲೆಯನ್ನ ನಮ್ಮ ರಾಜ್ಯದಲ್ಲಿ ಕೊಡದೆ ನಿರಂತರವಾಗಿ ವಂಚನೆ ಮಾಡುತ್ತಿದ್ದಾರೆ. ಒಂದು ಕೆಜಿ ತಂಬಾಕಿಗೆ ಅವರೇಜ್ ₹270 ರೂಪಾಯಿ ನೀಡುತ್ತಾರೆ. ಅದೇ ಕಂಪನಿಗಳು ಮೌಲ್ಯವರ್ಧನೆ ಮಾಡಿ ಒಂದು ಕೆಜಿ ತಂಬಾಕಿಗೆ ₹25 ಸಾವಿರ ರೂಪಾಯಿ ಲಾಭಗಳಿಸುತ್ತಿವೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕ್ರಾಪ್ ಕಮಿಟಿ ಸದಸ್ಯ ಕಾಳೆಗೌಡ ಮಾತನಾಡಿ, ಕೂಡಲೇ ತಂಬಾಕು ಬಿತ್ತನೆ ಬೀಜ ನೀಡುವುದನ್ನು, ಗೊಬ್ಬರಕ್ಕಾಗಿ ಇದುವರೆಗೆ ರೈತರಿಂದ ಕಟ್ಟಿಸಿಕೊಂಡಿರುವ ತಲಾ ₹7 ಸಾವಿರ ರೂಪಾಯಿ ಹಣವನ್ನು ಹಿಂದಿರುಗಿಸಬೇಕು ಎಂದು ಒತ್ತಾಯಿಸಿದರು. ಫೆಡರೇಷನ್ ಅಧ್ಯಕ್ಷ ಪರಮೇಶ್ ಮಾತನಾಡಿ, ಕೇಂದ್ರ ಸರ್ಕಾರ ತಂಬಾಕು ಉತ್ಪನ್ನಗಳ ಮೇಲೆ ವಿಧಿಸಿದ ಹೆಚ್ಚಿನ ತೆರಿಗೆಯ ಹೊಡೆತ ತಂಬಾಕು ರೈತರ ಮೇಲೆ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರ ಮುಂಬರುವ ಬಜೆಟ್ ನಲ್ಲಿ ತೆರಿಗೆ ವಿಧಾನ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ವಿಕ್ರಂ ರಾಜೇ ಅರಸ್ ಮಾತನಾಡಿ, ರಾಜ್ಯದಲ್ಲಿ 48 ಸಾವಿರ ತಂಬಾಕು ಬೆಳೆಗಾರರಿದ್ದು, ಸರಿ ಸುಮಾರು 58 ಸಾವಿರ ತಂಬಾಕು ಹದ ಮಾಡುವ ಪರವಾನಿಗೆ ಹೊಂದಿದ ಬ್ಯಾರನ್ ಗಳಿವೆ. ಆದರೂ ಆಂಧ್ರ ರೈತರಿಗೆ ಹೋಲಿಕೆ ಮಾಡಿದರೆ ತೀರ ಕಡೆಗಣನೆ ನಮ್ಮಲ್ಲಿದೆ ಕಾರಣ ಒಗ್ಗಟ್ಟಿಲ್ಲದೇ ಇರುವುದು. ಇದಕ್ಕೆಲ್ಲ ನೇರ ಕಾರಣ ರಾಜಕಾರಣ. ಇದನ್ನೆಲ್ಲಾ ದಿಟ್ಟವಾಗಿ ಎದುರಿಸಲು ತಂಬಾಕು ಬೆಳೆಗಾರರ ಸಂಘಟನೆ ರೂಪಿಸುವ ಮೂಲಕ ಸಮರ್ಥವಾಗಿ ಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.

ಉಂಡುವಾಡಿ ಚಂದ್ರೆಗೌಡ ಮಾತನಾಡಿ, ಇದುವರೆಗೆ ಮಾರಾಟವಾಗದ ಅರ್ಧ ಬಿಲಿಯನ್ ತಂಬಾಕು ಹಾಗೆಯೇ ಉಳಿದಿದೆ. ಅದರ ಸಧ್ಯ ಮೌಲ್ಯ ₹2 ಕೋಟಿಗೂ ಅಧಿಕ. ಹೀಗಾಗಿ, ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು. ನಿಲುವಾಗಿಲು ಪ್ರಭಾಕರ್ ಮಾತನಾಡಿ, ರೈತರು ಸಂಘಟಿತರಾಗಿ ನ್ಯಾಯ ಕೇಳಬೇಕು. ಆಂಧ್ರ ಮಾದರಿಯ ಒಗ್ಗಟ್ಟು ನಮ್ಮಲ್ಲೂ ಸಹ ಮೂಡಬೇಕು. ಅಲ್ಲಿನವರು ಹೆಚ್ಚುವರಿ ತಂಬಾಕನ್ನು ಸಹ ಒತ್ತಡ ಹೇರಿ ಯಾವ ರೀತಿಯಲ್ಲಿ ಮಾರಾಟ ಮಾಡುತ್ತಾರೋ ಹಾಗೇ ನಮ್ಮಲ್ಲಿಯೂ ಅಂತಹ ಪರಿಸ್ಥಿತಿ ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಹುಣಸೂರು | ರೈತ ಸಭೆಗಳು ಗೋಳಾಗಬಾರದು; ದಿಟ್ಟ ನಿರ್ಣಯವಾಗಬೇಕು: ಬಡಗಲಪುರ ನಾಗೇಂದ್ರ

ಸಭೆಯಲ್ಲಿ ದಸಂಸ ತಾಲ್ಲೂಕು ಸಂಚಾಲಕ ಅತ್ತಿಕುಪ್ಪೆ ರಾಮಕೃಷ್ಣ, ಮೋದೂರು ಶಿವಣ್ಣ, ಲಿಂಗೇಗೌಡ್ರು, ಕಾಳೆಗೌಡ್ರು, ರವಿಗೌಡ್ರು, ನಾಗರಾಜಪ್ಪ, ಅಗ್ರಹಾರ ರಾಮೇಗೌಡ, ದೇವರಾಜ್, ದಶರಥ, ಪೃಥ್ವಿ, ಆನಂದ್ ಸೇರಿದಂತೆ ಹಲವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...