ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯ ನವೀಕೃತ ಮಸೀದಿಯ ಉದ್ಘಾಟನೆಯು ಇತ್ತೀಚೆಗೆ ನಡೆಯಿತು. ಮಸೀದಿ ಉದ್ಘಾಟಿಸಿದ ಉಡುಪಿಯ ಸೈಮ್ ಗ್ರೂಪ್ ನ ನಿರ್ದೇಶಕರಾದ ಜನಾಬ್ ಜಿ. ಇಮ್ತಿಯಾಝ್ ಇವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ “ಜಾತಿ ಧರ್ಮಗಳ ನಡುವೆ ಉತ್ತಮ ಬಾಂಧವ್ಯ, ಸಾಮರಸ್ಯ, ಸಮುದಾಯದ ಬೆಳವಣಿಗೆಯಲ್ಲಿ ಧಾರ್ಮಿಕ ಕೇಂದ್ರವಾಗಿ ಮಸೀದಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಹೇಳಿದರು.
ಸಾರ್ವಜನಿಕರಿಗೆ ಮಸೀದಿ ಸಂದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಸಾರ್ವಜನಿಕ ಪ್ರವಚನ ನೀಡಿದ ಕರ್ನಾಟಕ ರಾಜ್ಯ ಜಮಾಆತೇ ಇಸ್ಲಾಮೀ ಹಿಂದ್ ನ ಕಾರ್ಯದರ್ಶಿ ಜನಾಬ್ ಅಕ್ಬರ್ ಆಲಿ ಮಾತನಾಡುತ್ತಾ, ಧಾರ್ಮಿಕ ಕೇಂದ್ರಗಳು ಕೇವಲ ಆರಾಧನೆಗೆ ಸೀಮಿತವಾಗಿರದೇ ಸಾಮಾಜಿಕ ಚಟುವಟಿಕೆಗಳು ನಡೆಯುವಂತಾಗಬೇಕು, ಆ ಬಾಗದ ಜನರ ಬೇಡಿಕೆಗಳನ್ನು ಈಡೇರಿಸುವ ಕೇಂದ್ರಗಳಾಗಿ ಮಾರ್ಪಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೆಂಗಳೂರು ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರಾದ ಹೈಕಾಡಿಯವರಾದ ಶ್ರೀ ಜಿ.ಕೆ.ಶೆಟ್ಟಿ, ಪುರೋಹಿತರಾದ ಶ್ರೀ ಬಾಲಕೃಷ್ಣ ಭಟ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಜನಾಬ್ ಎಂ.ಎ. ಗಫೂರ್, ಜಮಾಆತಿನ ಹಿರಿಯ ಉಪಾಧ್ಯಕ್ಷರಾದ ಜನಾಬ್ ಖಾಜಿ ಶಬ್ಬೀರ್ ಸಾಹೇಬ್, ಖಜಾಂಚಿ ಜನಾಬ್ ಮೊಯಿದಿನ್ ಸಾಹೇಬ್ ಇವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮಸೀದಿಯ ಅಧ್ಯಕ್ಷರಾದ ಜನಾಬ್ ಎಂ. ಅಸ್ಲಾಂ ಹೈಕಾಡಿ ವಹಿಸಿದರು. ವೇದಿಕೆಯಲ್ಲಿ ಆವರ್ಸೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ದಿವಾಕರ ಗಾಣಿಗ, ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಸಮೀನ ಬಾನು, ಗ್ರಾಮ ಪಂಚಾಯತ್ ನ ಸದಸ್ಯರಾದ ಶ್ರೀ ಸಂತೋಷ ಶೆಟ್ಟಿ ಕೊಣ್ಣೆಮಕ್ಕಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಜನಾಬ್ ಎಂ.ಎ. ಮೌಲಾ, ಉಡುಪಿ ಸಾಲಿಹಾತ್ ಶಿಕ್ಷಣ ಸಂಸ್ಥೆ ಸಲಹಾ ಮಂಡಳಿ ಅಧ್ಯಕ್ಷರಾದ ಡಾಕ್ಟರ್ ಶಹನ್ವಾಜ ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಜನಾಬ್ ಇರ್ಷಾದ್ ಮೀಫ್ ಸಂಸ್ಥೆಯ ಗೌರವಾಧ್ಯಕ್ಷರಾದ ಜನಾಬ್ ಶಬ್ಬೀ ಅಹ್ಮದ್ ಖಾಜಿ, ಉದ್ಯಮಿ ಯಾಸೀನ್ ಕೋಡಿಬೆಂಗ್ರೆ, ಕಾರ್ಯದರ್ಶಿ ಜನಾಬ್ ಬಿ. ಜಾಫರ್ ಸಾದಿಕ್ ಮುಂತಾದವರು ಉಪಸ್ಥಿತರಿದ್ದರು.
ಮೌಲಾನ ಬಿಲಾಲ್ ಇವರು ಕಿರಾತ್ ಪಠಿಸಿದರು. ಮುಸ್ಲಿಂ ವೆಲ್ ಫೇರ್ ಟ್ರಸ್ಟ್ ನ ಅಧ್ಯಕ್ಷರಾದ ಅಬ್ದುಲ್ ಸಮದ್ ಸ್ವಾಗತಿಸಿದರು. ಜಮಾತ್ ಸದಸ್ಯರಾದ ಅಜ್ಮಲ್ ಧನ್ಯವಾದವಿತ್ತರು. ಮಾಜಿ ಅಧ್ಯಕ್ಷರಾದ ಜನಾಬ್ ಹುಸೇನ್ ಹೈಕಾಡಿ ಕಾರ್ಯಕ್ರಮ ನಿರೂಪಿಸಿದರು.





