ಕಾನೂನು ‌ರೀತಿಯಲ್ಲಿ ಕ್ರಮ ವಹಿಸಿದರೆ ಡಾಂಬರೀಕರಣಕ್ಕೆ ಅವಕಾಶ ನೀಡುವೆ: ಕುರ್ಕಿ ರಾಜೇಶ್ವರಿ

Date:

ಕೋಲಾರ: ತಾಲ್ಲೂಕಿನ ನರಸಾಪುರದ ದ್ವಿಪಥ ರಸ್ತೆಯಲ್ಲಿ ಡಾಂಬರೀಕರಣಕ್ಕೆ ಕಾನೂನುಬದ್ಧವಾಗಿ ನೋಟಿಸ್‌ ನೀಡಿ‌ ಪರಿಹಾರ ನೀಡಿದರೆ ಮಾತ್ರ ನ್ಯಾಯಾಲಯದ ತಡೆಯಾಜ್ಞೆ ತೆರವುಗೊಳಿಸಿ ಅವಕಾಶ ‌ಮಾಡಿಕೊಡಲಾಗುವುದು ಎಂದು ಎಪಿಎಂಸಿ ಮಾಜಿ ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ತಿಳಿಸಿದರು.

ಗ್ರಾಮದ ತಮ್ಮ ಜಾಗಕ್ಕೆ ಸಂಬಂಧಿಸಿದ ಸ್ಥಳದಲ್ಲಿ ಡಾಂಬರೀಕರಣಕ್ಕೆ ತಡೆಯಾಜ್ಞೆ ತಂದಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಆಸ್ತಿ ‌ಮೇಲೆ‌ ಆರೋಪ ಮಾಡಿ ಖಾತೆ ರದ್ದು ಮಾಡಿ‌ ಜಾಗ ತೆಗೆದುಕೊಂಡಿದ್ದಾರೆ‌.‌ ಏಕಾಏಕಿ ಕೆಲಸ ಮಾಡಲು ಮುಂದಾದರು ಬಲವಂತವಾಗಿ ಜಾಗ ತೆಗೆದುಕೊಳ್ಳುಲು ಮುಂದಾದರು ಇದು ಮನಸ್ಸಿಗೆ ನೋವುಂಟು ಮಾಡಿತು‌. ನಾವೇ ಒತ್ತುವರಿ ಮಾಡಿಕೊಂಡಿದ್ದೇವೆ ಎಂದರ್ಥ ಬರುತ್ತದೆ. ಅವಮಾನ ಆಗುವಂಥ ವಿಚಾರ. ಹೀಗಾಗಿ ನಮ್ಮ ಆಸ್ತಿಗೆ ಸಂಬಂಧಿಸಿದಂತೆ ಮಾತ್ರ ತಡೆಯಾಜ್ಞೆ ತಂದಿದ್ದೇನೆ ‌ನಮ್ಮ ಆಸ್ತಿ ಉಳಿಸಿಕೊಳ್ಳಲು ಈ ಕ್ರಮ ವಹಿಸಿದೆ ಎಂದರು.

ಕೆಲವರು ಎಸಗಿದ ತಪ್ಪಿನಿಂದ ಈ ಸಮಸ್ಯೆ ಸೃಷ್ಟಿಯಾಯಿತು. ಐದಾರು ತಿಂಗಳಿನಿಂದ ರಸ್ತೆ ಕಾರ್ಯ ನಿಂತಿತ್ತು ಈ ಕಾರಣ ರಸ್ತೆ‌ ನಿರ್ಮಾಣ ಕಾಮಗಾರಿ ವಿಳಂಬವಾಯಿತು‌‌ ದೂಳು ನಿರ್ಮಾಣವಾಯಿತು‌.‌ ಡಾಂಬರೀಕರಣಕ್ಕಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಜಿಲ್ಲಾ ಪೊಲೋಸ್ ವರಿಷ್ಠಾಧಿಕಾರಿ ವರೆಗೆ ‌ಹೋಗಬೇಕಾಯಿತು ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೆಲವರು ನಮ್ಮಿಂದಾಗಿ ಕೆಲಸ ಸ್ಥಗಿತಗೊಂಡಿದೆ ಎಂದು ಭಾವಿಸಿದ್ದರು ನಾನು ಯಾವತ್ತೂ ರಸ್ತೆ ನಿರ್ಮಾಣಕ್ಕೆ ವಿರೋಧಿ ಅಲ್ಲ ಈ ವಿಚಾರ‌ ಹೆಚ್ಚಿನವರಿಗೆ ಗೊತ್ತಿದೆ ಖಾತೆ ರದ್ದು ಮಾಡಿದ್ದಕ್ಕೆ ನ್ಯಾಯಾಲಯ ಮೊರೆ‌ಹೋದೆ ನನಗೆ ನಮ್ಮ ಜನ ಮುಖ್ಯ ಅವರಿಗಾಗಿ ಜಾಗ ಬಿಟ್ಟು ಕೊಡಲು ಸಿದ್ಧ ಆದರೆ ಹಾಗೆಯೇ ಕೊಟ್ಟರೆ ತಪ್ಪು ನಮ್ಮದು ‌ಎಂದಾಗುತ್ತದೆ ಈ ಜಾಗದ ಸಂಬಂಧ ಮತ್ತೆ ನಮ್ಮ ಹೆಸರಿಗೆ ಖಾತೆ ಮಾಡಬೇಕು ಹೀಗಾಗಿ ಕಾನೂನಾತ್ಮಕವಾಗಿ ಸರ್ಕಾರದಿಂದ ಪರಿಹಾರ ಪಡೆದು ಜಾಗ ಬಿಟ್ಟು ಕೊಡುತ್ತೇವೆ‌‌‌ ಅದಕ್ಕೆ ತಮ್ಮಂದಿರು ಒಪ್ಪಿದ್ದಾರೆ ಈ ವಿಚಾರವನ್ನು ಎಇಇ ಮಂಜುನಾಥ್ ಇದ್ದಾಗಲೇ ಚರ್ಚಿಸಲಾಗಿತ್ತು ಆದರೆ ಏಕೆ ‌ಖಾತೆ ರದ್ದು ‌ಮಾಡಿದರೋ ಗೊತ್ತಿಲ್ಲ ಎಂದು‌ ತಿಳಿಸಿದರು.

ಈಗ ನಿರ್ಮಾಣ‌ ಮಾಡುತ್ತಿರುವ ರಸ್ತೆಗೆ ಈಗಲೂ ಚರಂಡಿ ಇಲ್ಲ ಪಾದಚಾರಿ ಮಾರ್ಗ ಇಲ್ಲ ಹೀಗಾಗಿ ಈಗಲೂ ನ್ಯಾಯಾಲಯಕ್ಕೆ ಹೋಗಿ ರಸ್ತೆ ‌ಕಾಮಗಾರಿ ನಿಲ್ಲಿಸಬಹುದು ಆದರೆ ನಾನು ಆ ರೀತಿ ಮಾಡಲ್ಲ ಕೆಲವರು ಅಧಿಕಾರವಿದೆ‌ ಸರ್ಕಾರ ನಮ್ಮದಿದೆ ಎಂದು ದರ್ಪ ತೋರಿಸಲು ಮುಂದಾಗಿದ್ದಾರೆ‌‌‌. ಅಕ್ರಮವಾಗಿ ಖಾತೆ ರದ್ದು ‌ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನು ಓದಿದ್ದೀರಾ.? ಸವಿತಾ ಸಮಾಜದ ಬಂಧುಗಳಿಗೆ ನಿಗಮದ ಸೌಲಭ್ಯಗಳು ಕುರಿತಂತೆ ಅರಿವು ಕಾರ್ಯಕ್ರಮ

ಪ್ರಕರಣ ನ್ಯಾಯಾಲಯದಲ್ಲಿ ಇರುವ ಕಾರಣ ಈಗಲೇ ಜಾಗ ಬಿಟ್ಟುಕೊಡಲು ಆಗಲ್ಲ. ‌ಅದು ಕಾನೂನು ಪ್ರಕ್ರಿಯೆ ಮೂಲಕವೇ ಆಗಬೇಕಿದೆ ಖಾತೆ ನಮ್ಮ ಹೆಸರಿಗೆ ಮತ್ತೆ ಆಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಜೊತೆಗೆ ಇದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...