ಬಾಗೇಪಲ್ಲಿ:-ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮಾರ್ಗವಾಗಿ ಆಂಧ್ರದ ಪುಟ್ಟಪರ್ತಿಗೆ ರೈಲು ಮಾರ್ಗ ನಿರ್ಮಾಣಕ್ಕೆ 20 ವರ್ಷಗಳ ಹಿಂದೆ ಕೇಂದ್ರ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿತ್ತಾದರೂ ಇನ್ನು ಕಾಮಗಾರಿ ಮಾತ್ರ ಪ್ರಾರಂಭವಾಗದಿರುವುದು ತಾಲೂಕಿನ ಜನರಲ್ಲಿ ನಿರಾಸೆ ಮೂಡಿಸಿದೆ ಎಂದು ತಾಲ್ಲೂಕು ಕರವೇ ಅದ್ಯಕ್ಷ ಹರೀಶ್ ಹೇಳಿದರು.
ಅವರು ಪಟ್ಟಣದ ಬಸ್ ನಿಲ್ದಾಣ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡಸಿ ಗ್ರೇಡ್ 2 ತಹಶಿಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜನಪ್ರತಿನಿದಿಗಳ ನಿರ್ಲಕ್ಷದಿಂದ ಚಿಕ್ಕಬಳ್ಳಾಪುರ ಹಾಗೂ ಪುಟ್ಟಪರ್ತಿ ರೈಲು ಮಾರ್ಗದ ಯೋಜನೆ ನನೆಗುದಿಗೆ ಬಿದ್ದಿದೆ ಈ ಹಿಂದೆ ಪಂಜಿನ ಮೆರವಣಿಗೆ ಹಾಗೂ ಪ್ರತಿಭಟನೆ ಮಾಡಲಾಗಿತ್ತು ಇಂದು ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಲಾಯಿತು ಮುಂದಿನ ದಿನಗಳಲ್ಲಿ ಹೆಚ್ಚಿನ ದಿನಗಳ ಉಪವಾಸ ಸತ್ಯಾಗ್ರಹ ಹಾಗೂ ಬೃಹತ್ ಪ್ರತಿಭಟನೆ ಮಾಡಲಾಗಿದೆ ಎಂದು ಹೇಳಿದರು.
2009ರಲ್ಲಿ ಯಶವಂತಪುರ- ಸತ್ಯಸಾಯಿ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಯೋಜನೆ ಮಾಡಲು ಅಂದಿನ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ.ಎಂ.ವೀರಪ್ಪ ಮೊಯಿಲಿ ಮಾಜಿ ಶಾಸಕ ಎನ್.ಸಂಪಂಗಿ ಅವರು ಅಂದಿನ ರೈಲ್ವೆ ಇಲಾಖೆಯ ಸಚಿವ ಮಮತಾ ಬ್ಯಾನರ್ಜಿ ಅವರ ಮೇಲೆ ಒತ್ತಡ ಹಾಕಿದ್ದರು ಅವರು ಮಂಡಿಸಿದ ಬಜೆಟ್‌ನಲ್ಲಿ ಈ ರೈಲು ಯೋಜನೆ ಕಾಮಗಾರಿಗೆ 7480 ಕೋಟಿ ರೂಪಾಯಿ ಮೀಸಲಿಟ್ಟು ಅನುದಾನ ಬಿಡುಗಡೆ ಮಾಡಿದ್ದರು ಅದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನಿರ್ಲಕ್ಷ್ಯ ತೋರಿದ್ದಾರೆ ಸಿ.ಎಂ.ಸಿದ್ದರಾಮಯ್ಯ ಮುಂದಿನ ಬಜೆಟ್ ನಲ್ಲಿ ಹಣ ಮೀಸಲು ಇಡಬೇಕು ಎಂದು ಮನವಿ ಮಾಡಿದರು.
ಈ ಯೋಜನೆ ಉದ್ದೇಶಿತ ಈ ರೈಲು ಮಾರ್ಗ ಚಿಕ್ಕಬಳ್ಳಾಪುರ ಪೇರಸಂದ್ರ, ಗುಡಿಬಂಡೆ, ಬಾಗೇಪಲ್ಲಿ ಮೂಲಕ ಆಂಧ್ರಪ್ರದೇಶಕ್ಕೆ ಹೋಗಿ ಬರಲು ತುಂಬ ಅನುಕೂಲವಾಗಿದೆ ಜತೆಗೆ ಈ ಭಾಗದಲ್ಲಿ ಬೆಳೆಯುವ ಟೋಮೆಟೊ ರೇಷ್ಮೆ ತರಕಾರಿ ಶೇಂಗಾ ಮುಸುಕಿನಜೋಳ ಇನ್ನಿತರೆ ಬೆಳೆಗಳನ್ನು ರೈಲಿನಲ್ಲಿ ಸಾಗಾಣಿಕೆ ಮಾಡಿ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡಲು ತುಂಬ ಅನುಕೂಲವಾಗಿದೆ. ಜತೆಗೆ ಬಾಗೇಪಲ್ಲಿ ತಾಲೂಕು ಆಂಧ್ರ ಗಡಿಭಾಗದಲ್ಲಿರುವುದರಿಂದ ಜನಸಾಮಾನ್ಯರ ಒಡನಾಟ ಹೆಚ್ಚಾಗಿದೆ ಆದ್ದರಿಂದ ಈ ಭಾಗದಲ್ಲಿ ರೈಲ್ವೆ ಸಂಚಾರ ತುಂಬ ಅಗತ್ಯವಾಗಿದೆ ಆದರೆ ಜನಪ್ರತಿನಿಧಿಗಳು ರೈಲ್ವೆ ನಿರ್ಮಾಣ ಕಾಮಗಾರಿ ಜಾರಿಗೆ ತರಬೇಕು ಎಂದು ಒತ್ತಾಯ ಮಾಡಿದರು.
ಇದನ್ನು ಓದಿದ್ದೀರಾ..?ಮನರೇಗಾ ಮರುಸ್ಥಾಪಿಸುವ ಕಾಂಗ್ರೆಸ್ ಹೋರಾಟವನ್ನು ಬೆಂಬಲಿಸಿ- ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಕರೆ
ಈ ಸಂದರ್ಭದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಿಯಾಜ್ಉಲ್ಲಾ, ತಾಲ್ಲೂಕು ಉಪಾಧ್ಯಕ್ಷರು ಅಲೀಮ್,
ಜಿಲ್ಲಾ ಮಹಿಳಾ ಅಧ್ಯಕ್ಷರು ಸುಜಾತಮ್ಮ ತಾಲ್ಲೂಕು ಮಹಿಳಾ ಅಧ್ಯಕ್ಷರು ಗಂಗರತ್ನಮ್ಮ, ತಾಲ್ಲೂಕು ಉಪಾಧ್ಯಕ್ಷರು ರಘು,
ನಗರ ಘಟಕ ಅಧ್ಯಕ್ಷರು ಜಾನಿ, ಜಿಲ್ಲಾ ಉಪಾಧ್ಯಕ್ಷರು ರಾಮರೆಡ್ಡಿ, ತಾಲ್ಲೂಕು ಸಂಚಾಲಕರು ಶಿವಕುಮಾರ್,
ತಾಲ್ಲೂಕು ಕಾರ್ಯದರ್ಶಿ ಮಂಜುನಾಥ ನಾಯ್ಕ, ಜಿಲ್ಲಾ ಸಂಚಾಲಕರು ನರಸಿಂಹಮೂರ್ತಿ,ತಾಲ್ಲೂಕು ಸಂಘಟನಾ ಕಾರ್ಯದರ್ಶಿ ಶಂಕರ್, ಕಾರ್ಮಿಕ ಘಟಕ ಅಧ್ಯಕ್ಷರು ಶಂಕರ್, ಅನ್ವರ್, ಬಾಬಾ, ರಹಮತ್ತುಲ್ಲಾ, ಮಂಜುನಾಥ, ರಾಜೇಶ್ವರಿ, ಜರೀನಮ್ಮ, ಚಾಂದ್ ಬಾಷ, ಅನಿಲ್, ಆಕೀಲ್, ಜಬಿ, ವೆಂಕಟೇಶ್, ಶಿವಪ್ಪ, ವಿದ್ಯಾರ್ಥಿ ಘಟಕ ಅಧ್ಯಕ್ಷರು ಗಂಗರಾಜು, ನವೀನ್, ವಿದ್ಯಾರ್ಥಿ ಘಟಕ ಪ್ರಧಾನ ಕಾರ್ಯದರ್ಶಿ ರಾಮಾಂಜಿ, ಕಿರಣ್ ಕುಮಾರ್, ಹಾಗೂ ಮತ್ತಿತರು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು.
ಚಿಕ್ಕಬಳ್ಳಾಪುರ ಬಾಗೇಪಲ್ಲಿ ಮಾರ್ಗವಾಗಿ ಆಂಧ್ರದ ಪುಟ್ಟಪರ್ತಿಗೆ ರೈಲು ಮಾರ್ಗ ಯೋಜನೆ ಜಾರಿಗೊಳಿಸಿ
ಪೋಸ್ಟ್ ಹಂಚಿಕೊಳ್ಳಿ:




