ವಿಜಯಪುರ ಪಟ್ಟಣದಲ್ಲಿ ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲು ಮುಂದಾಗಿರುವ ಸರ್ಕಾರದ ನಡೆಗೆ ಹಲವು ಪ್ರಗತಿಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಪಟ್ಟಣದಲ್ಲಿ ಪ್ರತಿಭಟನೆ ನಡೆಸಿವೆ.
ಇಂಡಿ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರಾರಂಭವಾದ ಪ್ರತಿಭಟನಾ ರ‍್ಯಾಲಿಯು ಡಾ. ಬಾಬು ಜಗಜೀವನ್ ರಾವ್ ವೃತ್ತ, ಟಿಪ್ಪು ಸುಲ್ತಾನ್ ರತ್ತ, ಬಸವೇಶ್ವರ ಸರ್ಕಲ್, ಬಸ್ ನಿಲ್ದಾಣ ರಸ್ತೆ ಮೂಲಕ ಮಿನಿ ವಿಧಾನಸೌಧ ತಲುಪಿತು.

ಸರ್ಕಾರದ ಮಟ್ಟದಲ್ಲಿ ಪಿಪಿಪಿ ಮಾದರಿಯಲ್ಲಿ ವೈದಿಕೀಯ ಕಾಲೇಜು ಸ್ಥಾಪನೆ ಮಾಡಬೇಕೆಂದು ಹುನ್ನಾರ ನಡೆದಿದೆ. ಜಿಲ್ಲೆಯಲ್ಲಿ ಶಾಸಕರು ಒಬ್ಬರು ಬಂಡವಾಳ ಹೂಡುವದಾಗಿ ಬರವಸೆ ನೀಡಿದ್ದಾರೆ ಇದು ಸಲ್ಲದು. ಅವರಿಗೆ ಬೇಕಾದರೆ ಮತ್ತೊಂದು ಖಾಸಗಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಿಕೊಳ್ಳಲಿ ಎಂದು ಪ್ರತಿಭಟನಾಕಾರರು ಪಿ ಪಿ ಪಿ ಮಾದರಿಯ ವೈದಿಕೀಯ ಕಾಲೇಜು ಸ್ಥಾಪನೆ ಮಾತ್ರ ಬೇಡ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ ಸರಿಯಾಗಿ ನಡೆದಿದೆ. ಅಲ್ಲಿ ಸಾಕಷ್ಟು ಸ್ಥಳವಿದೆ. ಅಲ್ಲಿಯ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು. ಬಡವರ ಪಾಲಿಗೆ ಆಶಾಕಿರಣವಾಗಲಿದೆ ಎಂದು ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ಸದಸ್ಯ ಅರವಿಂದ ಕುಲಕರಣಿ ಆಗ್ರಹಿಸಿದರು.
ಇದನ್ನೂ ಓದಿ: ಇಂಡಿ | ಬರದ ನಾಡಿನಲ್ಲೂ ಹಸಿರು ಚಿಗುರಿಸಿದ ಸರ್ಕಾರಿ ಶಾಲೆ
ಪ್ರತಿಭಟನೆಯ ನೇತೃತ್ವವನ್ನು ಒಡಲದನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಭುವನೇಶ್ವರಿ ಕಾಂಬಳೆ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಈಳಗೇರಾ, ಶಾಂತಿ ಮಹಿಳಾ ಸಂಘದ ಅಧ್ಯಕ್ಷ ಸರೋಭಾವಿ ದಶವಂತ, ಮನೆರಾಗ ಅನುಷ್ಠಾನ ಅಭಿಯಾನದ ರೇಣುಕ ನಾಟಿಕಾರ, ಕರ್ನಾಟಕ ಜನರ ಆರೋಗ್ಯ ಚಳುವಳಿಯ ಟೀನಾ ಕ್ಲೇವಿಯರ್, ಅಮ್ಮ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಗೇಶ ಸೊಲ್ಲಾಪುರ, ಸಿದ್ದರಾಮ ಹಳ್ಳೂರ, ರವಿಚಂದ್ರ ಪಾದಗಟ್ಟಿ, ಜನ ವೇದಿಕೆ ಒಕ್ಕೂಟದ ಸದಸ್ಯರು, ಶಕ್ತಿ ಮಹಿಳಾ ಒಕ್ಕೂಟದ ಅಂಬಿಕ ಶಿರಕನಹಳ್ಳಿ, ಅಕ್ರಮ ಮಾಶಾಳಕರ, ಸಿದ್ದಮ್ಮ ಗುಣಕಿ, ಯಲ್ಲವ್ವ ಮಾದರ, ನೀಲಾಂಬಿಕೆ ಬಿರಾದಾರ, ಇಸ್ಮಾಯಿಲ್ ಕುಣಬಿ, ಮುದ್ದು ಗೌಡ ಪಾಟೀಲ ವಹಿಸಿಕೊಂಡಿದ್ದರು.





