ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೆರೆಯ ಮುಂದಿರುವ ಕೃಷಿ ಜಮೀನುಗಳಿಗೆ ಮತ್ತು ಕೆರೆಯ ಏರಿಯಾ ಹಾನಿಯನ್ನು ತಡೆಯಲು ಮುನ್ನೆಚ್ಚೆರಿಕೆ ಕ್ರಮವಾಗಿ ಚಾನೆಲ್ ನಿರ್ಮಾಣ ಮಾಡಿ ನೀರು ಹೊರಹಾಕಿರುವುದರಿಂದ ನೀರಿನ ಮಟ್ಟವು 10ಅಡಿಗಳಷ್ಟು ಕಡಿಮೆಯಾಗಿದೆ. ಇನ್ನು ಮುಂದೆ ಯಾವುದೇ ಅಪಾಯ ಕಂಡುಬರುವುದಿಲ್ಲವೆಂದು ವಿಜಯಪುರ ಜಿಲ್ಲಾಧಿಕಾರಿ ಡಾ. ಆನಂದ ಕೆ ತಿಳಿಸಿದ್ದಾರೆ.
“ಹೋರ್ತಿ ಕೆರೆಯನ್ನು 1972ರಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಕೆರೆಯ ಸಾಮರ್ಥ್ಯವು 19.50 ಎಂ.ಸಿ.ಎಫ್.ಟಿ ಇದ್ದು, ಕೆರೆಯ ವಿಸ್ತೀರ್ಣ18 ಹೆಕ್ಟರ್ ಇದೆ. ಏರಿಯಾ ಎತ್ತರ 11ಮೀ ಹಾಗೂ ಉದ್ದ 400ಮೀ ಇದ್ದು, ಪ್ರಸ್ತುತ ಕೆರೆಯನ್ನು ಕೃಷ್ಣಭಾಗ್ಯ ಜಲ ನಿಗಮದ ವತಿಯಿಂದ ಕೆರೆತುಂಬವಾ ಯೋಜನೆಯಡಿ ಕೆರೆ ತುಂಬಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿರುವುದರಿಂದ ಈ ಕೆರಿಗೆ ಕೋಡಿ ಇಂದ ಸುಮಾರು ಒಂದು ತಿಂಗಳಿಂದ ನೀರು ಹರಿದು ಹೋಗಿರುತ್ತದೆ. ಸೆ.28 ಸಂಜೆ 7 ಗಂಟೆಗೆ ಕೆರೆಯ ಏರಿಯ 30 ಮೀಟರ್ ಉದ್ದದಷ್ಟು ಹಾಗೂ 0.30 ಮೀಟರ್‌ನಷ್ಟು ಕುಸಿದಿರುವುದು ಕಂಡುಬಂದಿದೆ. ತದನಂತರ ಕೋಡಿಯನ್ನು ಇಳಿಸಲು ಸೆ. 29 ರಂದು ಜೆಸಿಬಿ ಮತ್ತು ಹಿಟಾಚಿ ಬ್ರೇಕರ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಹಾಕಲು ಸತತ ಮೂರು ದಿನಗಳ ಕಾಲ ಕೆರೆಯಲ್ಲಿ ಎರಡು ಅಡಿಯಷ್ಟು ನೀರನ್ನು ಇಳಿಸಲಾಯಿತು. ಅದಾಗ್ಯ ಕೂಡಾ ಪ್ರತಿದಿನ ನೀರಿನ ಒತ್ತಡದಿಂದಾಗಿ ಕ್ರಮೇಣವಾಗಿ ಏರಿಯ ಕುಸಿಯುವುದು ಕಂಡುಬಂದಿದೆ”
ಇದನ್ನೂ ಓದಿ: ವಿಜಯಪುರ | ಪ್ರವಾಹದಲ್ಲಿ ಕೊಚ್ಚಿಹೋದ ಬದುಕು, ಕಣ್ಣೀರೊರೆಸುವುದೇ ಸರ್ಕಾರ?
“ಇದರಿಂದಾಗಿ ಅ.2ರಂದು ಹೆಚ್ಚಿನ ಪ್ರಮಾಣದ ಏರಿಯಾ ಕುಸಿತ ಕಂಡ ಕಾರಣ ಹೋರ್ತಿ ಕೆರೆಯ ಕೆಳ ಭಾಗದಲ್ಲಿ ಒಟ್ಟು ಮೂರು ಕೆರೆಗಳಿದ್ದು, ಅವುಗಳು ಕೂಡಾ ಈಗಾಗಲೇ ಕೃಷ್ಣಾ ಭಾಗ್ಯ ಜಲ ನಿಗಮ ವತಿಯಿಂದ ಭರ್ತಿ ಮಾಡಲಾಗಿದೆ. ಈ ಕೆರೆಗಳಿಗೆ ಹಾನಿಯಾಗದಂತೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಹಾನಿ ತಡೆಗಟ್ಟಲು ಮುನ್ನೆಚ್ಚೆರಿಕೆ ಕ್ರಮವಾಗಿ ಕೆರೆಯ ಕೊಡಿಯಿಂದ ಸುಮಾರು 30 ಮೀಟರ್ ದೊರದಲ್ಲಿ ಹಾಗೂ ಕುಸಿತ ಕಂಡುಬಂದ ಸ್ಥಳದಿಂದ 50ಮೀಟರ್ ಅಂತರದಲ್ಲಿ ಕ್ರಮೇಣ ನೀರನ್ನು ಹೊರೆಗೆ ಹಾಕಲು ಕೃತಕವಾಗಿ ಕೆರೆಯ ಏರಿಯಾದಲ್ಲಿ ಚಾನಲ್ ನಿರ್ಮಾಣ ಮಾಡಿ ಹಂತ ಹಂತವಾಗಿ ನೀರನ್ನು ಹೊರಹಕಲಾಗುತ್ತಿದೆ” ಎಂದು ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





