ಇಂಡಿ | ಸದಾ ಶಿಕ್ಷಣದಲ್ಲಿ ತನ್ಮಯರಾಗುವುದೇ ವಿದ್ಯಾರ್ಥಿ ಜೀವನದ ಸಾರ್ಥಕತೆ: ಮಹೇಶ ಪೂತಾರ

Date:

ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ. ಅಂತಹ ಸುಂದರವಾದ ಬದಕನ್ನು ವ್ಯರ್ಥಮಾಡಿಕೊಳ್ಳದೆ ಸದಾ ಶಿಕ್ಷಣದಲ್ಲಿ ತನ್ಮಯರಾಗಬೇಕು. ಡಾ. ಬಿ ಆ‌ರ್ ಅಂಬೇಡ್ಕರ್‌ ಅವರು ಹೇಳಿದಂತೆ ಯಾರು ಪುಸ್ತಕಗಳನ್ನು ಪ್ರೀತಿಸುತ್ತಾರೋ ಅವರು ಪುಸ್ತಕದ ಪೂಜಾರಿಗೆಳಾಗುತ್ತಾರೆ ಎಂದು ಸಮಾಜ ಕಲ್ಯಾಣ ಇಲಾಖೆಯ ವಿಜಯಪುರ ಜಿಲ್ಲಾ ಉಪ ನಿರ್ದೇಶಕ ಮಹೇಶ ಪೂತಾರ ಹೇಳಿದರು.

ಜಿಲ್ಲೆಯ ಇಂಡಿ ತಾಲೂಕಿನ ಡಾ. ಬಿ ಆರ್ ಅಂಬೇಡ್ಕರ ವಿದ್ಯಾರ್ಥಿಗಳ ವಸತಿ ನಿಲಯದ ಗ್ರಂಥಾಲಯವನ್ನು ಉದ್ವಾಟಿಸಿ ಮಾತನಾಡಿದ ಅವರು, “ಡಾ. ಬಾಬಾಸಾಹೇಬರು ತಿನ್ನಲು ಅನ್ನವಿಲ್ಲದಿದ್ದರೂ ಪುಸ್ತಕ ಪ್ರೇಮಿಯಾಗಿದ್ದರು. ಗುಡಿಯ ಮುಂದೆ ಸಾಲು ಗಟ್ಟಿ ನಿಲ್ಲುವುದಕ್ಕಿಂತ ಗ್ರಂಥಾಲಯದ ಮುಂದೆ ನಿಲ್ಲಬೇಕು ಎಂಬ ಸಂದೇಶ ಅವರದಾಗಿತ್ತು. ಸರಕಾರಗಳು ಶೈಕ್ಷಣಿಕ ಗುಣಮಟ್ಟ ಉತ್ತೇಜಿಸಲು ಸರ್ವವಿಧದಲ್ಲಿ ಸಹಾಯ ಮಾಡುತ್ತಿವೆ. ಇದರ ಲಾಭ ಪಡೆದುಕೊಳ್ಳಬೇಕು. ಸಾಧನೆಗೆ ಬಡತನ ಅಡ್ಡಬರದು. ಸಮಯಕ್ಕೆ ಮಹತ್ವ ನೀಡಿ ಸಾಧಿಸಿ ತೋರಿಸಬೇಕು. ದೇಶ ನನಗೇನು ಮಾಡಿತು ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಮಾಡಿದೆ ಎನ್ನುವುದನ್ನು ಚಿಂತಿಸಬೇಕು” ಎಂದರು.

ರಮಾಬಾಯಿ ಪ್ರೌಢ ಶಾಲೆಯ ಮುಖ್ಯಗುರು ನಿಜಣ್ಣಾ ಕಾಳೆ ಮಾತನಾಡಿ, “ಹಿಂದಿನಂತೆ ಇಂದು ಶಿಕ್ಷಣ ಕಲಿಯುವುದು ಕಷ್ಟದ ಕೆಲಸವಲ್ಲ. ಸರಕಾರ ಪ್ರತಿಯೊಂದು ಹಂತದಲ್ಲಿ ಸಹಕಾರ ನೀಡುತ್ತಿದೆ. ನಾವು ಕಲಿಯುವಾಗ ಇಷ್ಟೊಂದು ಅನುಕೂಲವಿಲ್ಲದಿದ್ದರೂ ಒಂದು ಸ್ಥಾನ ಪಡೆದುಕೊಂಡಿದ್ದೇವೆ. ಇದಕ್ಕೆಲ್ಲ ಅಂಬೇಡ್ಕರ್ ನೀಡಿದ ಸಂವಿಧಾನದ ಕೊಡುಗೆ ಅಪಾರ. ಸತ್ತ ಮೇಲೆ ಬದುಕಬೇಕು ಎಂದರೆ ಜನ ಓದುವ ಹಾಗೆ ಏನಾದರೂ ಒಂದು ಬರೆದಿಟ್ಟು ಹೋಗಿ, ಇಲ್ಲವಾದರೆ ನಿಮ್ಮ ಬಗ್ಗೆ ಬೇರೆಯವರು ಬರೆಯುವ ಹಾಗೆ ಮಾಡಿ ಹೋಗಿ ಎಂದು ಡಾ. ಅಂಬೇಡ್ಕರ್ ಹೇಳಿದ್ದಾರೆ. ಆದ್ದರಿಂದ ಬುದ್ಧ, ಬಸವ, ಅಂಬೇಡ್ಕರ್ ತತ್ವದಡಿ ನಡೆಯಬೇಕು” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ: ವಿಜಯಪುರ | ಕನ್ನೇರಿ ಶ್ರೀ ವಿರುದ್ಧ ಕಠಿಣ ಕ್ರಮಕ್ಕೆ ದಸಂಸ ಆಗ್ರಹ

ದಲಿತ ಯುವ ಮುಖಂಡ ಬಾಬು ಗುಡಮಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಉಮೇಶ ಲಮಾಣಿ, ವಿಕಾಸ ಹೊಸಮನಿ, ನಿಲಯ ಪಾಲಕ ಪುಂಡಲೀಕ ಗೊಂದಳಿಸೇರಿದಂತೆ ವಿದ್ಯಾರ್ಥಿಗಳು ನೀಲಯ ಪಾಲಕರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...