ಚಿಂತಾಮಣಿ:ಒಳ ಮೀಸಲಾತಿ ಜಾರಿಯಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ ಇಂದು ಬೆಂಗಳೂರು ಚಲೋ ಕಾರ್ಯಕ್ರಮಕ್ಕೆ ಇಲ್ಲಿನ ಮಾದಿಗ ಸಮುದಾಯದ ಮುಖಂಡರುಗಳು ತೆರಳಿದರು.
ಈ ವೇಳೆ ಮಾತನಾಡಿದ ಮಾದಿಗ ಜನಜಾಗೃತಿ ಹೋರಾಟ ಸಮಿತಿಯ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಎಂ ವಿ ರಾಮಪ್ಪ ಮಾತನಾಡಿ ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಬಿದ್ದರೂ ಒಳ ಮೀಸಲಾತಿಯಡಿ ಸರ್ಕಾರಿ ಹುದ್ದೆಗಳ ನೇಮಕಾತಿ ನಡೆಯದಿರುವುದು ಬೇಸರದ ಸಂಗತಿ ಸರ್ಕಾರ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ದ್ರೋಹ ಎಸಗಿದೆ.ಸಮುದಾಯದ 35 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೂ ಅಪಮಾನ ಮಾಡಿದೆ ಎಂದರು.
ಚುನಾವಣೆಗೂ ಮುನ್ನ ಒಳ ಮೀಸಲಾರಿ ಜಾರಿಗೆ ಬದ್ಧ ಎಂದು ಆಶ್ವಾಸನೆ ನೀಡಿದ್ದ ಕಾಂಗ್ರೆಸ್ ಮಾತು ತಪ್ಪಿದೆ. ಅಧಿಕಾರಕ್ಕೆ ಬಂದ ಮೊದಲ ಎರಡು 2 ವರ್ಷ ಒಳ ಮೀಸಲಾತಿ ಜಾರಿಗೆ ಮುಂದಾಗದ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪಿಗೆ ಮಣಿದು ಒಳ ಮೀಸಲಾತಿ ಜಾರಿಗೆ ಮುಂದಾಗಿದೆ ಆದರೆ ಒಳ ಮೀಸಲಾತಿ ಅಡಿಯಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು ನಿರಾಕರಿಸಿರುವುದು ಖಂಡನೀಯ ಎಂದರು ಸಂವಿದಾನ ಅಂಬೇಡ್ಕರ್ ಪರ ಎಂದು ಹೇಳಿಕೊಳ್ಳುವ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ..? ಇರಾನ್ ಯುದ್ದ ನಿಲ್ಲಿಸುವಂತೆ ಯು ಬಸವರಾಜ್ ಒತ್ತಾಯ.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಪಿ ಎಂ ನರಸಿಂಹಯ್ಯ,ಶ್ರೀನಿವಾಸ್, ಶಿವಾನಂದ,ಹೆಬ್ಬರಿ ನಾರಾಯಣಸಾಮಿ,ಟಿ ಜಿ ಪುನೀತ್, ಕದಿರಪ್ಪ,ನರಸಿಂಹಪ್ಪ,ಸೇರಿದಂತೆ ಮತ್ತಿತರರು ಇದ್ದರು.





