ತುಮಕೂರು | ಸಚಿವ ಜಿ ಪರಮೇಶ್ವರ್‌ ಪ್ರಜಾಪ್ರಭುತ್ವದ ರಾಜರೇ?

Date:

ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅನಿವಾರ್ಯವಾಗಿತ್ತು. ಸರ್ವಾಧಿಕಾರಿಗಳ ಆಡಳಿತದ ಅವಧಿಯಲ್ಲಿ ಪ್ರಜಾಪ್ರಭುತ್ವದ ಆಶಯಗಳು ಅಪಾಯದಲ್ಲಿರುವಾಗ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಾರಲು ಮಾನವ ಸರಪಳಿ ಉತ್ತಮ ಸಂದೇಶ ವಾಹಕ.

ಆದರೆ, ತುಮಕೂರಿನಲ್ಲಿ ನಡೆಸಿದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ರಾಜಪ್ರಭುತ್ವವನ್ನು ನೆನಪಿಸಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್‌ ಅವರು ಅಂಬಾರಿ ಏರಿದ ರಾಜನಂತೆ ಕಂಡುಬಂದರು. ರಾಜನೋರ್ವ ಅಂಬಾರಿ ಮೇಲೆ ತೆರಳುತ್ತಿದ್ದರೆ ಪ್ರಜೆಗಳೆಲ್ಲರೂ ರಸ್ತೆ ಬದಿಯಲ್ಲಿ ನಿಂತು ಜಯಘೋಷಗಳನ್ನು ಕೂಗುವಂತೆ, ರಾಜನು ಅಂಬಾರಿ ಏರಿ ಬಡ ಪ್ರಜೆಗಳೆಲ್ಲರತ್ತ ಕೈಬೀಸಿ ಸಾಗುತ್ತಿದ್ದ ದೃಶ್ಯ ಇಂದಿನ ಮಾನವ ಸರಪಳಿಯಲ್ಲಿ ಮರುಕಳಿಸಿತು.

ಶಿರಾ ತಾಲೂಕಿನ ತಾವರೆಕೆಯಿಂದ ಪ್ರಾರಂಭವಾದ ಪ್ರಜಾಪ್ರಭುತ್ವ ದಿನಾಚರಣೆ ಮಾನವ ಸರಪಳಿಯಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರು ಸುಮಾರು 17 ಅಡಿ ಎತ್ತರದ ಅಂಬಾರಿ ಬಸ್ ಏರಿ ಕೈಬೀಸುತ್ತಿದ್ದದ್ದು ಮಾತ್ರ ಒಂದು ಕ್ಷಣ ಪ್ರಜಾಪ್ರಭುತ್ವ ದೇಶದಲ್ಲಿ ಇದೆಂತಹ ನಡವಳಿಕೆ ಎಂಬ ಗೊಂದಲಕ್ಕೀಡು ಮಾಡಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗೃಹ ಸಚಿವರ ಈ ನಡವಳಿಕೆಯಿಂದ ಪ್ರಜಾಪ್ರಭುತ್ವ ಅರ್ಥಹೀನವಾಗುತ್ತದೆ. ಅಲ್ಲದೆ ಇದು ಸ್ವಂತ ಪ್ರಚಾರಕ್ಕೆ ಬಳಸಿಕೊಂಡಂತೆ ಭಾಸವಾಯಿತು. ಉದ್ದೇಶ ಒಳ್ಳೆಯದಾಗಿದ್ದರೂ ಅನುಷ್ಠಾನಗೊಳಿಸುವ ಪರಿ ಸ್ವೀಕಾರಾರ್ಹವಲ್ಲ. ಜನಪ್ರತಿನಿಧಿಗಳು 90 ಕಿಮೀ ನಡೆಯಲು ಸಾಧ್ಯವಿಲ್ಲ, ಸರಿ. ಜನರೊಂದಿಗೆ ಬೆರೆಯದೆ ರಾಜನಂತೆ(ಇಂದಿನ ಪ್ರಧಾನ ಮಂತ್ರಿಗಳಂತೆ) ಅಂಬಾರಿ ಏರಿ ಹೊರಟರೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ. ಇದು ಉದ್ದೇಶಪೂರಿತ ತಪ್ಪಲ್ಲವೆಂದು ಮೇಲ್ನೋಟಕ್ಕೆ ಕಾಣಿಸುತ್ತಿದ್ದರಿಂದ ಮಾಫಿಗೆ ಅರ್ಹವಾದದು. ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳಿಗೆ ಮಾತ್ರ ಸೀಮಿತವಾಗದೆ ಕಾರ್ಯಕ್ರಮ ರೂಪಿಸಿದ ರಾಜ್ಯ ಸರ್ಕಾರದ ಗಮನದಲ್ಲಿರಬೇಕಿತ್ತು.‌

ಮಾನವ ಸರಪಳಿಯಲ್ಲಿ ಸರ್ಕಾರಿ ಶಾಲೆ ಮಕ್ಕಳು, ಖಾಸಗಿ ಶಾಲೆ ಮಕ್ಕಳು ಭಾಗವಹಿಸಿದ್ದರು. ಖಾಸಗಿ ಶಾಲೆ ಮಕ್ಕಳು ಸುವ್ಯವಸ್ಥಿತವಾದ ಶಾಲಾ ಬಸ್‌ನಲ್ಲಿ ಬಂದಿಳಿದರೆ, ಸರ್ಕಾರಿ ಶಾಲೆ ಮಕ್ಕಳು ಸಾಮಾನು ಸರಂಜಾಮು ಸಾಗಿಸುವ ಟಾಟಾ ಏಸಿ ವಾಹನಗಳಲ್ಲಿ ಬಂದಿಳಿದರು. ಸರ್ಕಾರಿ ಶಾಲೆ ಮಕ್ಕಳ ಜೀವಕ್ಕೆ ಬೆಲೆ ಇಲ್ಲದಿರುವುದು ಈ ಚಿತ್ರ ನಿರೂಪಿಸಿದಂತಿತ್ತು. ಟಾಟಾ ಏಸಿ ವಾಹನದಲ್ಲಿ ಸಾಗುತ್ತಿರುವ ಮಕ್ಕಳಿಗೆ ಯಾವುದೇ ರಕ್ಷಣೆ ಇಲ್ಲದೆ ನಿಂತಿದ್ದರು. ದುರಾದೃಷ್ಟವೆಂಬಂತೆ ಅಪಘಾತ ಸಂಭವಿಸಿದ್ದರೆ ಪರಿಸ್ಥಿತಿ ಏನಾಗಬೇಕಿತ್ತು. ದೇಶದ ಮುತ್ತು-ರತ್ನಗಳಂತಿರುವ ಮಕ್ಕಳ ಜೀವಕ್ಕೆ ಹಾನಿಯಾದರೆ ಬೆಲೆ ಕಟ್ಟಲಾದೀತೆ?. ಪೋಷಕರಿಗೆ ಉತ್ತರ ನೀಡುವವರು ಯಾರು?. ಅಧಿಕಾರಿಗಳು, ಜನಪ್ರತಿನಿಧಿಗಳ ಶೋಕಾಚರಣೆ ಪರಿಹಾರವಾದೀತೇ?. ಈ ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳು ಹಾಗೂ ಇಲಾಖೆ ಮೇಲೆ ಕ್ರಮ ಆಗಬೇಕಲ್ಲವೇ?.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಆಶಯವೋ, ಅಣಕವೋ?

ಈ ಸಣ್ಣಪುಟ್ಟದ್ದನ್ನೆಲ್ಲ ಯಾರು ಕೇಳೋಕೆ ಹೋಗ್ತಾರೆ. ಗೂಡ್ಸಲ್ಲಿ ಬರ್ತಾರೆ, ಜಟ್ಕಾದಲ್ಲಿ ಬರ್ತಾರೆ, ಎತ್ತಿನ ಗಾಡಿಯಲ್ಲಿ ಬರ್ತಾರೆ. ಹೇಗಾದರೂ ಬರಲಿ ಬಿಡಿ ಎಂದು ಗೃಹ ಸಚಿವ ಪರಮೇಶ್ವರ್‌ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವುದು ಸಹ ಬೇಜವಾಬ್ದಾರಿತನದ ಹೇಳಿಕೆಯೇ ವಿನಾಃ ಬೇರೇನಲ್ಲ.

ಒಟ್ಟಾರೆ ತುಮಕೂರಿನಲ್ಲಿ ಪ್ರಜಾಪ್ರಭುತ್ವ ದಿನಾಚರಣೆಯನ್ನು ವೃದ್ಧರಿಂದ ಹಿಡಿದು, ಮಕ್ಕಳು, ಶ್ರಮಿಕ ವರ್ಗ, ಮಹಿಳೆಯರು ಸೇರಿದಂತೆ ಸಮಾಜದ ನಾನಾ ಸ್ತರದವರು ಭಾಗವಹಿಸಿ ಯಶಸ್ವಿಗೊಳಿಸಿದರಾದರೂ, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಂದು ರಾಜಪ್ರಭುತ್ವ ಮರುಕಳಿಸಿದ್ದಂತು ಸುಳ್ಳಲ್ಲ.

(ವರದಿ: ಹರೀಶ್)

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...