ಧಾರವಾಡ | ಕಲ್ಲು ನಾಗರಕ್ಕೆ ಹಾಲೆರೆಯುವುದು ವ್ಯರ್ಥ : ಜಯಮೃತ್ಯುಂಜಯ ಸ್ವಾಮೀಜಿ

Date:

ನಾಗರ ಪಂಚಮಿ ಹಬ್ಬದಂದು ಕಲ್ಲು ನಾಗರಕ್ಕೆ ಮತ್ತು ಹುತ್ತಕ್ಕೆ ಹಾಲನ್ನು ಎರೆಯುವುದು ವ್ಯರ್ಥ. ಅದು ಮಣ್ಣು, ಕಲ್ಲು ಪಾಲಾಗುತ್ತದೆ, ಬದಲಿಗೆ ಅಪೌಷ್ಟಿಕತೆಯಿಂದ ಬಳಲುತ್ತಿರುವವರು ಮತ್ತು ಅಗತ್ಯವಿದ್ದರಿಗೆ ಹಾಲು ವಿತರಿಸಬೇಕು ಎಂದು ಕೂಡಲ ಸಂಗಮ ಪಂಚಮ  ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಮಹಾಸ್ವಾಮೀಜಿ ಹೇಳಿದರು.

ಪಂಚಸೇನಾ ರಾಜ್ಯ ಸೇನಾನಿಗಳ ಸಹಯೋಗದಲ್ಲಿ ಧಾರವಾಡದ ಕಿವುಡ ಹಾಗೂ ಮೂಕರ ಹೊನ್ನಮ್ಮ ವಸತಿ ಶಾಲೆಯಲ್ಲಿ ನಾಗ ಪಂಚಮಿಯ ಹಬ್ಬವನ್ನು ಕಿವುಡ ಮತ್ತು ಮಂದ ಮಕ್ಕಳಿಗೆ ಹಾಲು ವಿತರಿಸಿದರು.

ಬಸವ ಪಂಚಮಿ 27ನೇ ವರ್ಷಕ್ಕೆ ಕಾಲಿಟ್ಟ ಪ್ರಯುಕ್ತ ಹಾಲು ಕುಡಿಯುವ ಮತ್ತು ಕುಡಿಸುವ ಹಬ್ಬದ ಸಪ್ತಾಹ ಕಾರ್ಯಕ್ರಮ‌ ಕಿವುಡು ಮತ್ತು ಮೂಕರ ಮಕ್ಕಳ ಹೊನ್ನಮ್ಮ ಶಿಕ್ಷಣ ಸಂಸ್ಥೆ ಸರಸ್ವತಪುರ, ಟೋಲನಾಕಾ ಸೇರಿ ನಗರದ ವಿವಿಧೆಡೆ ನಡೆಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ʼಕಲ್ಲು ನಾಗರ ಹಾವಿಗೆ ಎರೆಯುವ ಹಾಲು, ಬಡ ಮಕ್ಕಳ ಪಾಲು ಎಂಬ ಸಪ್ತಾಹವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದಾರೆ. ನಾಗರ ಪಂಚಮಿ ಹೆಸರಿನಲ್ಲಿ ಕಲ್ಲು ನಾಗರಕ್ಕೆ ಹಾಲು ಎರೆಯುವುದು ತಪ್ಪು. ಇದೊಂದು ಮೂಢನಂಬಿಕೆ. ಪೌಷ್ಠಿಕ ಹಾಲು ವ್ಯರ್ಥ ಮಾಡಬಾರದು. ಮೊಟ್ಟೆಯಿಂದ ಜೀವ ಪಡೆದ ಯಾವುದೇ ಪಕ್ಷಿ, ಪ್ರಾಣಿಯೂ ಹಾಲು ಕುಡಿಯುವುದಿಲ್ಲ. ಅಂತಹ ಪಕ್ಷಿ, ಪ್ರಾಣಿಗಳಿಗೆ ಹಾಲು ಹಾಕಿದರೆ ವ್ಯರ್ಥವಾಗುತ್ತದೆ. ಪೌಷ್ಠಿಕವುಳ್ಳ ಸದ್ಬಳಕೆಯಾಗಲಿʼ ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಮಾಜಿ ಸಿಎಂ ಕುಮಾರಸ್ವಾಮಿ ಅನುಮೋದಿಸಿದ್ದ ಬೋಗಸ್ ಕಂಪನಿಯ ಇತಿಹಾಸ

ಕಾರ್ಯಕ್ರಮದಲ್ಲಿ ಪಂಚಸೇನಾ ರಾಜ್ಯ ಪದಾಧಿಕಾರಿ ರುದ್ರಗೌಡ ಸೋಲಬಗೌಡ್ರ, ಕಾರ್ಯದರ್ಶಿ ಸಂಗನಗೌಡ ಹೂವನ್ನವರ, ನಿಂಗಣ್ಣ ಕರೀಕಟ್ಟಿ, ನಾಗಪ್ಪ ಮುಮ್ಮಿಗಟ್ಟಿ, ವಿದ್ಯಾ ಪಾಟೀಲ, ಪೂಜಾ ಸವದತ್ತಿ, ಅಡಿವೆಪ್ಪ ಸಲಕಿ, ರಾಘವೇಂದ್ರ ಘಟ್ಟದ, ಮೈಲಾರ ಪಂಚನ್ನವರ, ಶಾಲಾ ಮಕ್ಕಳು, ಶಾಲಾ ಸಿಬ್ಬಂದಿ ತಾಯಂದಿರು ಹಿರಿಯರು ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...