ಶಂಕರಾಚಾರ್ಯರಿಂದ, ಮದ್ವಚಾರ್ಯರಿಂದ, ರಾಮನುಚಾರ್ಯರು ಸೃಷ್ಟಿಸಿದ 330 ಕೋಟಿ ದೇವರುಗಳಿಂದ ದಲಿತರಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ. ಬದಲಾಗಿ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನ್ಯಾಯಸಿಕ್ಕಿದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ಶನಿವಾರ ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಅಂಬೇಡ್ಕರ್‌ರವರ 69ನೇ ಪರಿನಿಬ್ಬಾಣ ದಿನದ ಅಂಗವಾಗಿ ಕ್ಯಾಂಡಲ್ ಮೆರವಣಿಗೆಯ ಸಮಾರೋಪದಲ್ಲಿ ಮಾತನಾಡುತ್ತಾ, ದಲಿತರ ದೌರ್ಬಲ್ಯ ಅಸಹಾಯಕತೆ ಬಡತನ ಹಸಿವು ನಮ್ಮ ಹಣೆಬರಹ ಪಾಪವಲ್ಲ.ನಿಜವಾದ ಪಾಪವೆಂದರೆ ಶಿಕ್ಷಣ ಪಡೆದರೂ ದಲಿತರು ಘರ್ಜಿಸದೆ ಇರುವುದು. ಅಂಬೇಡ್ಕರ್ ನಿಮ್ಮಂತೆಯೇ ವಿದ್ಯಾಭ್ಯಾಸ ತೊರೆದು ದೇವರನ್ನು ಪೂಜಿಸಲು ಆರಂಭಿಸಿದಿದ್ದರೆ ಇಂದು ದಲಿತರು ದೇವಸ್ಥಾನದ ಹೊರಗೆ ಭಿಕ್ಷೆಯನ್ನು ಬೇಡಿಕೊಂಡಿರಬೇಕಾಗಿತ್ತು ಎಂದರು.

ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ಅಸಮಾನತೆ ಹೆಚ್ಚಾಗಿದ್ದು, ಶಿಕ್ಷಣವನ್ನು ಇಂದು ವ್ಯಾಪಾರಿಕಾರೀಕರಣ ಮಾಡಲಾಗುತ್ತಿದೆ. ಜೊತೆಗೆ ಶಿಕ್ಷಣದ ಹಕ್ಕನ್ನು ಕಸಿದುಕೊಂಡು ಸರಕಾರಿ ಶಾಲೆಯನ್ನು ಮುಚ್ಚುವ ಹಂತಕ್ಕೆ ಬಂದಿದ್ದಾರೆ, ಅಂಬೇಡ್ಕರ್‌ರವರ ಚಿಂತನೆಯನ್ನು ಮೈಗೂಡಿಸಿ ಹೋರಾಡದಿದ್ದರೆ ದಲಿತರು,ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲಾರರು ಎಂದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರ ದಲಿತರಿಗೆ ಮೀಸಲಾತಿಯಲ್ಲಿ ಅನ್ಯಾಯಮಾಡುತ್ತಿದೆ. ದಲಿತ ಚಳುವಳಿ ಖಾಸಾಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ರಮೇಶ್ ಕಾಂಚನ್, ಮಹಾಬಲ ಕುಂದರ್, ಸತೀಶ್ ನಾಯ್ಕ, ರಮೇಶ್ ತಿಂಗಳಾಯ, ವೆಂಕಟೇಶ್ ಕುಲಾಲ್, ಮಂಜುನಾಥ, ಶರತ್ ಶೆಟ್ಟಿ, ಮೀನಾಕ್ಷಿ ಮಾಧವ, ಉಷಾ, ಸತೀಶ್ ಮಂಚಿ, ಮಾಧವ ಬನ್ನಂಜೆ , ಸತೀಶ್ ಕೊಡವೂರು, ಸುಧಾರ್ಶನ್ ಪಡುಕರೆ,ಯಾದವ ಅಮೀನ್ ಕೊಳ,ಹರೀಶ್ ಸಲ್ಯಾನ್, ಸಂತೋಷ್ ಕಪ್ಪೆಟ್ಟು, ರವಿರಾಜ್ ಲಕ್ಮೀನಗರ, ದಯಾಕರ ಮಲ್ಪೆ, ಸಾಧು ಚಿಟ್ಪಾಡಿ, ಕೃಷ್ಣಶ್ರೀಯಾನ್, ಸುಮಿತ್ ನೆರ್ಗಿ, ಗುಣವಂತ ತೋಟ್ಟಂ, ಭಗವಾನ್, ವಿನಯ ಬಲರಾಮನಗರ, ಸತೀಸ್ ಕಪ್ಪೆಟ್ಟು, ದೀಪಕ್, ಸಂದ್ಯಾಕೃಷ್ಣ, ಪೂರ್ಣಿಮ ಸಂದ್ಯಾತಿಲಕ್, ಪ್ರಮೀಳ, ಶಶಿಕಲಾ ತೊಟ್ಟಂ, ವಿನಯ ಕೊಡಂಕೂರು, ವಿನೋದ ಮುಂತಾದವರು ಭಾಗವಹಿಸಿದ್ದರು.





