ಜೇವರ್ಗಿ | ಮಾರಾಟವಾಗದ ಅಡುಗೆ ಮನೆಯಲ್ಲಿ ಉಪಯೋಗಿಸುವ ಕಲ್ಲಿನ ಉಪಕರಣಗಳು; ಸಂಕಷ್ಟದಲ್ಲಿ ವ್ಯಾಪಾರಿಗಳು

Date:

ಕಲ್ಲು ಒಡೆದು, ಅದಕ್ಕೆ ಸುಂದರ ಆಕೃತಿ ಕೊಟ್ಟು ಅಡುಗೆ ಮನೆಯಲ್ಲಿ ಉಪಯೋಗಿಸುವ ವಸ್ತುಗಳಾದ ಖಾಲಗಲ್ (ಅಸಗಲ್ಲ), ಬಿಸಕಲ್, ರುಬ್ಬುಗುಂಡು ಮಾಡಿ ಬದುಕುತ್ತಿರುವ ವ್ಯಾಪಾರಿಗಳ ಜೀವನ ಚಿಂತಾಜನಕವಾಗಿದೆ. ದಿನಕ್ಕೆ ಒಂದು ಕೂಡಾ ಮಾರಾಟ ಆಗದೇ ಇರುವುದರಿಂದ ದಿನದೂಡುವುದೇ ಕಷ್ಟಕರ ಸನ್ನಿವೇಶಕ್ಕೆ ತಂದೊಡ್ಡಿದೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಮುಖ್ಯರಸ್ತೆ ಬದಿಯಲ್ಲಿ ವಡ್ಡರ ಸಮುದಾಯದ ಐದು ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಸುಮಾರು ಇಪ್ಪತ್ತು ವರ್ಷಗಳಿಂದ ವಾಸವಾಗಿದೆ. ತಲೆತಲಾಂತರಗಳಿಂದ ಉಳಿಸಿಕೊಂಡು ಬಂದ ಕಸುಬನ್ನು ಇನ್ನೂ ಕೂಡ ಮುಂದುವರಿಸಿಕೊಂಡಿದ್ದಾರೆ. ಆದರೆ ನಮ್ಮ ಪರಿಶ್ರಮಕ್ಕೆ ತಕ್ಕಂತೆ ಫಲ ಸಿಗುತ್ತಿಲ್ಲ. ನಾವು ಮಾಡಿರುವ ವಸ್ತುಗಳು ಕೆಲವೊಮ್ಮೆ ಮಾರಾಟ ಆಗುತ್ತವೆ. ಒಂದೊಮ್ಮೆ ದಿನಕ್ಕೆ ಒಂದು ಕೂಡ ಮಾರಾಟ ಆಗುವುದಿಲ್ಲ ಎಂದು ಈ ದಿನ.ಕಾಮ್ ಜೊತೆಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

WhatsApp Image 2024 08 17 at 2.58.26 PM

ನಾವು ಗುಡಿಸಲಲ್ಲಿ ವಾಸಿಸುತ್ತಿದ್ದೇವೆ. ಮಳೆಗಾಲದಲ್ಲಿ ಗುಡಿಸಲಲ್ಲಿ ಮಳೆ ನೀರು ನುಗ್ಗುತ್ತವೆ. ಹಾವು-ಚೇಳುಗಳು ಬರುತ್ತವೆ. ಭಯದಲ್ಲಿಯೇ ಬದುಕು ದೂಡುತ್ತಿದ್ದೇವೆ. ನಮ್ಮಿಂದ ಓಟು ಪಡೆಯುತ್ತಾರೆ. ಆದರೆ ನಮಗೆ ಸಹಾಯ ಮಾಡಲು ಸ್ಥಳೀಯ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಮುಂದೆ ಬರುತ್ತಿಲ್ಲ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸ್ಥಳೀಯ ಶಾಸಕ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು ಎಂದು ವಡ್ಡರ ಸಮುದಾಯದ ಐದು ಕುಟುಂಬದ ಸದಸ್ಯರು ಆಗ್ರಹಿಸಿದ್ದಾರೆ.

ಈ ದಿನ. ಕಾಮ್‌ನೊಂದಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ವಡ್ಡರ ಸಮುದಾಯದ ಮಹಿಳೆ ಸುಶೀಲಾಬಾಯಿ, ” ನಮಗೆ ಸರಿಯಾದ ಮನೆ ಇಲ್ಲ. ಹೀಗಾಗಿ, ರಸ್ತೆಯ ಬದಿಯಲ್ಲೇ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವೆ. ಕಲ್ಲು ಒಡೆದು ವಸ್ತುಗಳು ಮಾಡುತ್ತೇವೆ. ಕೆಲವೊಮ್ಮೆ ಒಂದು ಕೂಡಾ ಮಾರಾಟ ಆಗುವುದಿಲ್ಲ. ಇದರಿಂದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಕೂಡ ಆಗುತ್ತಿಲ್ಲ” ಎಂದು ಹೇಳಿದರು.

“ಓಟು ಹಾಕುತ್ತೇವೆ. ಆಧಾರ್ ಕಾರ್ಡ್, ವೋಟರ್ ಐಡಿ ಇದ್ದರೂ ಕೂಡ ಇದುವರೆಗೆ ನಮಗೆ ರೇಷನ್ ಕಾರ್ಡ್ ಸಿಕ್ಕಿಲ್ಲ. ನಾವು ಇರುವ ಗುಡಿಸಲು ಮಾರ್ಗವಾಗಿಯೇ ಜನಪ್ರತಿನಿಧಿಗಳು ಹಾದು ಹೋಗುತ್ತಾರೆ. ಆದರೆ ನಮ್ಮ ಸಮಸ್ಯೆ ಕುರಿತು ವಿಚಾರಿಸುವುದಿಲ್ಲ” ಎಂದು ಆರೋಪಿಸಿದರು.

WhatsApp Image 2024 08 17 at 2.58.26 PM 2

ಗುಂಡಪ್ಪ ಮಾತನಾಡಿ,”ಕಲ್ಲುಗಳನ್ನು ಚಿಂಚೋಳಿ ತಾಲೂಕಿನಿಂದ ತರಿಸಿಕೊಳ್ಳುತ್ತೇವೆ. ಅದಕ್ಕೆ ಹತ್ತು ಸಾವಿರ ಖರ್ಚು ಆಗುತ್ತದೆ. ಅದು ಹೊಟ್ಟೆಗೆ ಬಟ್ಟೆಗೆ ಸರಿಯಾಗುತ್ತೆ. ಇದರಿಂದ ಏನೂ ಕೂಡ ಉಳಿತಾಯ ಆಗುವುದಿಲ್ಲ. ಸರ್ಕಾರದಿಂದ ಒಂದು ಮನೆ ಕೊಟ್ಟರೆ ನಮಗೆ ಅನುಕೂಲ” ಎಂದು ಕೇಳಿಕೊಂಡರು.

ಇದನ್ನು ಓದಿದ್ದೀರಾ? ಸೊರಬ | ಸಚಿವ ಮಧು ಬಂಗಾರಪ್ಪರಿಂದ ಕುಬಟೂರು ಸರ್ಕಾರಿ ಶಾಲೆಗೆ ₹10 ಲಕ್ಷ ಮೌಲ್ಯದ ಪರಿಕರ ದೇಣಿಗೆ

ಈದಿನ.ಕಾಮ್ ದೊಂದಿಗೆ ಜಯಶ್ರೀ ಮಾತನಾಡಿ, “ಇದ್ರಲ್ಲಿ ನಮಗೆ ನೂರು ಇನ್ನೂರು ರೂಪಾಯಿ ಸಿಗುತ್ತೆ ಅಷ್ಟೇ. ನಮಗೆ ಸಹಾಯ ಮಾಡುತ್ತೇವೆ ಎಂದು ಆಶ್ವಾಸನೆ ಕೊಟ್ಟು ಓಟು ಹಾಕಿಸಿಕೊಳ್ಳುತ್ತಾರೆ. ಚುನಾವಣೆ ಮುಗಿದ ಬಳಿಕ ಯಾರೂ ಕೂಡ ನಮ್ಮ ನೆರವಿಗೆ ಬರುವುದಿಲ್ಲ” ನೋವು ತೋಡಿಕೊಂಡರು.

WhatsApp Image 2024 08 17 at 2.58.26 PM 1

ಈ ದಿನ.ಕಾಮ್‌ನೊಂದಿಗೆ ನಾಗಮ್ಮ ಮಾತನಾಡಿ, “ಸುಮಾರು ಇಪ್ಪತ್ತೈದು ವರ್ಷಗಳಿಂದ ಕಲ್ಲು ಒಡೆದು ಒಳ್ಳು, ಬಿಸಕಲ್, ಖಾಲಗಲ್ ಮಾಡುತ್ತೇವೆ. ಐವತ್ತು, ನೂರು ಉಳಿತಾಯ ಆಗುತ್ತೆ ಅಷ್ಟೇ. ಸರ್ಕಾರ ನಮಗೊಂದು ಸ್ವಂತ ನಿವೇಶನ ಮಾಡಿಕೊಟ್ಟರೆ ಅನುಕೂಲ ಆಗುತ್ತದೆ” ಎಂದು ಕೇಳಿಕೊಂಡರು.

ಗೀತಾ ಹೊಸಮನಿ
ಗೀತಾ ಹೊಸಮನಿ
+ posts

ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಗೀತಾ ಹೊಸಮನಿ
ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...