ಹೊನ್ನುಡಿ ಪ್ರಭಾಕರ್ ನಿಧನಕ್ಕೆ ಪತ್ರಕರ್ತರ ಸಂಘದ ವತಿಯಿಂದ ಸಂತಾಪ ಹಾಗೂ ನುಡಿ ನಮನ

Date:

ಬಾಗೇಪಲ್ಲಿ:-ಹೊನ್ನುಡಿ ಪತ್ರಿಕೆಯ ಸಂಪಾದಕರು ಪ್ರಗತಿಪರ ಚಿಂತಕರು ಸಾಮಾಜಿಕ ಹಾಗೂ ಕಾರ್ಮಿಕರ ಪರ ಹೋರಾಟಗಾರರು ಹಿರಿಯ ಮಾರ್ಗದರ್ಶಕರಾಗಿದ್ದ ದಿವಂಗತ ಹೊನ್ನುಡಿ ಪ್ರಭಾಕರ್ ನಿಧನಕ್ಕೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂತಾಪ ಸೂಚಿಸಲಾಯಿತು.

ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಹೊನ್ನುಡಿ ಪ್ರಭಾಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಮಾತನಾಡಿ ಅಭಿಜಿತ ಕೋಲಾರ ಜಿಲ್ಲೆಯ ಶಾಶ್ವತ ನೀರಾವರಿ ಯೋಜನೆ ಸಮಿತಿ ಸಂಸ್ಥಾಪಕರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರೈತರ ಹಾಗೂ ಕಾರ್ಮಿಕರ ಪರ ದ್ವನಿ ಯಾಗಿದ್ದರು ಹೊನ್ನುಡಿ ಪತ್ರಿಕೆಯ ಮೂಲಕ ಜನಪರ ಪತ್ರಿಕೋದ್ಯಮಿ ಮೂಲಕ ಹೊಸ ಆಯಾಮ ನೀಡಿ ಕೋಲಾರ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ ಇವರು ಸಾಮಾಜಿಕ ಹಾಗೂ ಕಾರ್ಮಿಕರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು ಸದಾ ಕ್ರಿಯಾಶೀಲರಾಗಿದ್ದ ರವರು ಎಲ್ಲಾ ಕಾರ್ಯನಿರತ ಪತ್ರಕರ್ತರು ಅವರ ಮಾರ್ಗದರ್ಶನ ಹಾದಿಯಲ್ಲಿ ಸಾಗಬೇಕು ಹಾಗು ಅವರ ಮೌಲ್ಯಗಳನ್ನು ಬಿತ್ತಿದರೆ ಅವರ ಕನಸುಗಳಿಗೆ ಗೌರವ ಕೊಟ್ಟಂತಾಗುತ್ತದೆ ಎಂದು ಹೇಳಿದರು

ಹಿರಿಯ ಪತ್ರಕರ್ತರ ಬಿ.ಆರ್.ಕೃಷ್ಣಾ ಮಾತನಾಡಿ ಅವರು ನುಡಿಯಲ್ಲಿ ಮಾತ್ರವಲ್ಲ ನಡೆಯಲ್ಲೂ ಜನರ ಪರವಾಗಿ ಕೆಲಸ ಮಾಡಿದರು. ಅವರ ಆದರ್ಶ ಉಳಿಸಿಕೊಂಡು ಹೋಗಬೇಕು ಹಾಗೂ ಪ್ರಭಾಕರ ಹೆಗ್ಗುರುತು ಬಿಟ್ಟು ಹೋಗಿದ್ದಾರೆ ಧೀಮಂತ ಪತ್ರಕರ್ತ ಅವರ ಮಾರ್ಗದರ್ಶನ ಆದರ್ಶದೊಂದಿಗೆ ಯುವ ಪೀಳಿಗೆ ಮುಂದೆ ಸಾಗಬೇಕು ಎಂದರು ಪ್ರಭಾಕರ ಒಬ್ಬ ಛಲಗಾರ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಕೋಲಾರದ ಪತ್ರಿಕೋದ್ಯಮಕ್ಕೆ ಕಣ್ಣಾಗಿದ್ದರು ಅಂಥ ಪತ್ರಕರ್ತರು ಮತ್ತೆ ಹುಟ್ಟುವುದಿಲ್ಲ ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸೈಯದ್ ಸಿದೀಕ್ ಮಾತನಾಡಿ ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ಪ್ರಭಾಕರ ಅವರು ಬರವಣಿಗೆ ಜೊತೆ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸಿದ್ದರು. ರೈಲ್ವೆ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು ಸಾಮಾಜಿಕ ವಿಚಾರಗಳಲ್ಲಿ ಉತ್ತಮ ವರದಿ ಮಾಡುವ ಪತ್ರಕರ್ತರಿಗೆ ಪ್ರಭಾಕರ ಹೆಸರಲ್ಲಿ ಪ್ರಶಸ್ತಿ ಕೊಡಬೇಕು ಎಂದು ಸಲಹೆ ನೀಡಿದರು.

ಇದನ್ನು ಓದಿದ್ದೀರಾ..? ಅರಣ್ಯ ಅಧಿಕಾರಿಗಳ ಕಿರುಕುಳ ಇತ್ಯರ್ಥಕ್ಕೆ ರೈತರಿಂದ ಪ್ರತಿಭಟನೆ

ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ರಾಮಕೃಷ್ಣ (ಹೆಗಡೆ), ಪತ್ರಕರ್ತರಾದ ರಾಮಚಂದ್ರ, ವೆಂಕಟೇಶ್, ಪಾಪಾಗ್ನಿ ಪತ್ರಿಕೆ ಸಂಪಾದಕ ‌ಕೊತ್ತಪಲ್ಲಿ ವೆಂಕಟೇಶ್, ಎ.ರಂಗನಾಥ ರೆಡ್ಡಿ ಹಾಜರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...