ಕಮಲಾಪುರ ತಾಲ್ಲೂಕಿನ ಬಾಚನಾಳ ಗ್ರಾಮದ ಸಮ್ಯಕ್ ಬುದ್ಧ ವಿಹಾರದಲ್ಲಿ ಶನಿವಾರ 5ನೇ ವಾರ್ಷಿಕೋತ್ಸವ ಹಾಗೂ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಅವರ ಜೀವನ ಚರಿತ್ರೆ ಆಧಾರಿತ ನಾಟಕ ಪ್ರದರ್ಶನ ಕಾರ್ಯಕ್ರಮ ಭಾವಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಸಾನಿಧ್ಯವನ್ನು ಸಮ್ಯಕ್ ಬುದ್ಧ ವಿಹಾರ ಬಾಚನಾಳದ ಪೂಜ್ಯ ಭಂತೆ ಶಾಸನ ಸೂರಿ ಹಾಗೂ ಹಾಲಳ್ಳಿಯ ಬುದ್ಧ ವಿಹಾರದ ಪೂಜ್ಯ ಭಂತೆ ಧಮ್ಮದೀಪ ವಹಿಸಿದ್ದರು. ಅವರ ಆಶೀರ್ವಚನದಲ್ಲಿ ಬೌದ್ಧ ಧರ್ಮದ ತಾತ್ವಿಕತೆ, ನೈತಿಕ ಜೀವನ ಮತ್ತು ರಮಾಬಾಯಿ ಅಂಬೇಡ್ಕರ್ ಅವರ ತ್ಯಾಗಮಯ ಬದುಕಿನ ಮಹತ್ವವನ್ನು ಅವರು ಸ್ಮರಿಸಿದರು.
ಕಾರ್ಯಕ್ರಮವನ್ನು ಕಮಲಾಪುರ ಪೊಲೀಸ್ ಠಾಣೆಯ ಪಿಎಸ್ಐ ಸುಖಾನಂದ ಸಿಂಗೆ ಉದ್ಘಾಟಿಸಿ ಮಾತನಾಡಿದ ಅವರು, ‘ಸಮಾಜದಲ್ಲಿ ಸಮಾನತೆ, ಶಾಂತಿ ಮತ್ತು ಬಾಂಧವ್ಯ ಬೆಳೆಸಲು ಬೌದ್ಧ ಧರ್ಮದ ಸಂದೇಶ ಇಂದಿಗೂ ಪ್ರಸ್ತುತವಾಗಿದೆ. ಯುವಕರು ಡಾ. ಬಾಬಾಸಾಹೇಬ ಅಂಬೇಡ್ಕರ್ ಹಾಗೂ ರಮಾಬಾಯಿ ಅವರ ಜೀವನದಿಂದ ಪ್ರೇರಣೆ ಪಡೆಯಬೇಕು,’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಂತೆ ಶಾಸನ ಸೂರಿ ಮಾತನಾಡಿ, ‘ರಮಾಬಾಯಿ ಅಂಬೇಡ್ಕರ್ ಅವರಂತಹ ತ್ಯಾಗಿಗಳ ಧೈರ್ಯ, ಸಹನೆ ಮತ್ತು ಸಹಜ ಮಾನವೀಯತೆ ಇಂದು ಪ್ರತಿಯೊಬ್ಬ ಮಹಿಳೆಗೆ ಪ್ರೇರಣೆಯಾಗಬೇಕು. ಅವರ ಜೀವನ ಕಥೆ ಕೇವಲ ಅಂಬೇಡ್ಕರ್ ಕುಟುಂಬದ ಇತಿಹಾಸವಲ್ಲ, ಅದು ಸಮಾಜ ಪರಿವರ್ತನೆಯ ಬೆಳಕು,’ ಎಂದು ಹೇಳಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬಾಚನಾಳ ಯುವಕ-ಯುವತಿಯರಿಂದ ರಮಾಬಾಯಿ ಅಂಬೇಡ್ಕರ್ ಅವರ ಜೀವನಕಥೆ ಆಧಾರಿತ ನಾಟಕ ಪ್ರದರ್ಶನ ನಡೆಯಿತು. ನಾಟಕದಲ್ಲಿ ಅವರ ದುರ್ಗತಿ, ಅಂಬೇಡ್ಕರ್‌ರಿಗೆ ನೀಡಿದ ಬೆಂಬಲ, ತ್ಯಾಗ ಮತ್ತು ನಿಸ್ವಾರ್ಥ ಸೇವೆಯನ್ನು ಭಾವನಾತ್ಮಕವಾಗಿ ಚಿತ್ರಿಸಲಾಯಿತು. ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಯಿತು.
ಇದನ್ನು ಓದಿದ್ದೀರಾ? ಯಾದಗಿರಿ | ಮಕ್ಕಳಲ್ಲಿ ಕನ್ನಡ ಪ್ರೀತಿ ಮೂಡುವಂತೆ ಪಾಲಕರು ಗಮನಹರಿಸಬೇಕು ; ಬಾಸುಮಿಯ ನಾಯ್ಕೋಡಿ
ಕಾರ್ಯಕ್ರಮದಲ್ಲಿ ಪ್ರಕಾಶ ಮೂಲಭಾರತಿ, ನಿಂಗಪ್ಪ ಪ್ರಬುದ್ಧಕರ್, ಪಿಡಿಒ ಸೂರ್ಯಕಾಂತ ಕೆರಳ್ಳಿ, ಸಿದ್ದಮಲ್ಲಪ್ಪ ಮುಗಳಿ, ಲಕ್ಷ್ಮೀಬಾಯಿ ಗೊರಂಪಲ್ಲಿ, ಶೃತಿ ಗೊರಂಪಲ್ಲಿ, ವಿಠ್ಠಲ್ ಪ್ರಬುದ್ಧಕರ್, ನರೇಂದ್ರ ಬಿರಾದರ, ಮಂಜು ಸಿಕೆ, ಸಂತೋಷ ರಾಠೋಡ್, ಪ್ರಕಾಶ ಪವಾರ, ಸುರೇಶ ಜಾಬ, ದಿಲೀಪ ಭೂತಿ, ಮಲ್ಲೇಶಪ್ಪ ಮುತ್ತಂಗಿ, ರಮೇಶ ಬೆಳಕೋಟಾ, ಗುಂಡಪ್ಪ ಚಿಕೆ, ಗಿರೆಪ್ಪ ಶಾಖಾ, ಶಿವಕುಮಾರ ಧನ್ನೂರ, ಬಸವರಾಜ ಸಂತಾ, ರೇವಣಸಿದಪ್ಪ ಸುತಾರ, ರಾಜಕುಮಾರ ಪ್ರಬುದ್ಧಕರ್, ವಿದ್ಯಾಧರ್ ಮಾಳಗೆ, ಸತೀಶ ಜಾದವ, ಪುಂಡಲೀಕ ಹೇರೂರ, ಮಹಾದೇವ ಮುಡಬಿ, ನಾಗೇಶ ಭೂಪತಿ ಸೇರಿದಂತೆ ಹಲವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.





