ಕಲಬುರಗಿ ಜಿಲ್ಲೆಯ ಹೆಮ್ಮೆಯ ಶಿಲ್ಪ ಕಲಾವಿದ ಆನಂದ್ ಬಾಬು ಮನೋಹರ್ ಅವರು 2024ರ ಸಾಲಿನ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ದೇಶದ ಕೈಗಾರಿಕೆ ಮತ್ತು ಕಲೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಹಿನ್ನೆಲೆ ಕಲಾವಿದರಿಗೆ ನೀಡಲಾಗುವ ಈ ಗೌರವವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 9ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಿದರು.
ಆನಂದ್ ಬಾಬು ಅವರು ಕಳೆದ ದಶಕದಗಳಿಂದ ಕೈಗಾರಿಕೆ ಸೇವಾ ಕೇಂದ್ರ (ಅಭಿವೃದ್ಧಿ ಆಯುಕ್ತರ ಕಚೇರಿ)ದ ಹಲವು ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಶಿಲ್ಪ ವಿನ್ಯಾಸದಲ್ಲಿ ಮಾಡಿರುವ ಕೆಲಸ ಇದೀಗ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ.
ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ರಾಜ್ಯಗಳಿಂದ ಬಂದಿದ್ದ ಕಲಾವಿದರು, ಅಧಿಕಾರಿಗಳು ಮತ್ತು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟ್ರಪತಿ ಮುರ್ಮು ಅವರ ಕೈಗಳಿಂದ ಪ್ರಶಸ್ತಿ ಸ್ವೀಕರಿಸಿದಾಗ ಆನಂದ್ ಬಾಬು ಅವರ ಮುಖದಲ್ಲಿ ಉಲ್ಲಾಸ ಸ್ಪಷ್ಟವಾಗಿ ಕಾಣಿಸಿತು. “ಈ ಗೌರವ ನನ್ನ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕಲಬುರಗಿಯ ಕಲೆಗೆ ಈ ಸ್ಥಾನಮಾನ ಸಿಕ್ಕಿರುವುದು ನನಗೆ ಅತ್ಯಂತ ಹೆಮ್ಮೆ ತಂದಿದೆ ಎಂದು ಅವರು ಪ್ರತಿಕ್ರಿಯಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಜೀವ ಬೆದರಿಕೆ; ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ದೂರು ದಾಖಲು
ಕಲಬುರಗಿ ಜಿಲ್ಲೆಯಿಂದ ರಾಷ್ಟ್ರ ಮಟ್ಟದ ಪ್ರಶಸ್ತಿ ಗಳಿಸುವ ಕಲಾವಿದರ ಸಾಲಿಗೆ ಆನಂದ್ ಬಾಬು ಅವರ ಹೆಸರು ಸೇರ್ಪಡೆಯಾಗಿರುವುದು ಸ್ಥಳೀಯ ಕಲಾಸಕ್ತರಲ್ಲಿ ಸಂತೋಷ ಮೂಡಿಸಿದೆ.





