ಕಲಬುರಗಿ | ಸಿಮೆಂಟ್ ಕಾರ್ಖಾನೆಯ 5ನೇ ಘಟಕ ಸ್ಥಾಪನೆಗೆ ಬಹುಜನ ಸಮಾಜ ಪಕ್ಷದ ವಿರೋಧ

Date:

ಅಲ್ಟ್ರಾಟೆಕ್ ಸಿಮೆಂಟ್ ಆದಿತ್ಯ ನಗರ ರಾಜಶ್ರೀ ಸಿಮೆಂಟ್ ಕಾರ್ಖಾನೆಯವರು 5ನೇ ಘಟಕವನ್ನು ಪ್ರಾರಂಭ ಮಾಡುವುದನ್ನು ರದ್ದುಗೊಳಿಸಲು ಒತ್ತಾಯಿಸಿ ಬಹುಜನ ಸಮಾಜ ಪಕ್ಷ, ಸೇಡಂನ ಉಪ ವಿಭಾಗ ಕಾರ್ಯಾಲಯದ ಸಹಾಯಕ ಆಯುಕ್ತರ ಮುಖಾಂತರ ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆಯವರು ವಿಷಪೂರಿತ ರಸಾಯನಿಕ ಅನಿಲವನ್ನು ನೇರವಾಗಿ ಕಾಗಿಣಾ ನದಿಗೆ ಬಿಡುತ್ತಿರುವುದರಿಂದ, ಮಳಖೇಡ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಪರಿಸರ ಮಾಲಿನ್ಯವನ್ನು ಹಾಳು ಮಾಡುತ್ತಿದ್ದು ಮತ್ತು ಫಲವತ್ತಾದ ಜಮೀನಿನ ಬೆಳೆಗಳ ಮೇಲೆ ಬ್ಲಾಸ್ಟಿಂಗ್ ದಿಂದ ಧೂಳು ಬೆಳೆಗಳ ಮೇಲೆ ಬಿದ್ದು, ಬೆಳೆ ಹಾಳಾಗುತ್ತಿದೆ. ಗ್ರಾಮಸ್ಥರು ಹಾಗೂ ರೈತರು ಕಾರ್ಖಾನೆಯವರು ಬಿಟ್ಟ ವಿಷಪೂರಿತ ನೀರನ್ನು ಕುಡಿದು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಪ್ರಾಣಿಗಳು ಕೂಡಾ ವಿಷಪೂರಿತ ನೀರಿಗೆ ಬಲಿಯಾಗುತ್ತಿವೆ.

ಆದರೂ ಸಿಮೆಂಟ್ ಕಾರ್ಖಾನೆಯವರು ಪುನಃ 5ನೇ ಘಟಕವನ್ನು ಸ್ಥಾಪನೆ ಮಾಡುವ ವಿಷಯ ತಿಳಿದು ಬಂದಿರುತ್ತದೆ. ಪರಿಸರ ಮಾಲಿನ್ಯದಿಂದ ಉಂಟಾಗುತ್ತಿರುವ ಜೀವ ಹಾನಿ ಹಾಗೂ ಪ್ರಾಣ ಹಾನಿ ತಡೆಗಟ್ಟುವ ನಿಟ್ಟಿನಲ್ಲಿ ಸಿಮೆಂಟ್ ಕಾರ್ಖಾನೆಯ 5ನೇ ಘಟಕವನ್ನು ಪ್ರಾರಂಭಿಸಲು ಬಹುಜನ ಸಮಾಜ ಪಕ್ಷ ಸೇಡಂ ಘಟಕಖಂಡಿಸುತ್ತದೆ. ಆದಕಾರಣ ಅದನ್ನು ರದ್ದುಪಡಿಸಿ, ಇದರ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳದಿದ್ದರ ಮುಂದಿನ ದಿನಗಳಲ್ಲಿ ಕಾರ್ಖಾನೆ ವಿರುದ್ಧ ಮುಷ್ಕರ ಕೈಗೊಳ್ಳಲಾಗುವುದು ಎಂದು ರೇವಣಸಿದ್ದಪ್ಪ, ಎಸ್.ಸಿಂಧೆ, ಬಿಎಸ್‌ಪಿ ಅಧ್ಯಕ್ಷರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...