ಕರ್ತವ್ಯ ಲೋಪ ಆರೋಪದ ಮೇಲೆ ಯಡ್ರಾಮಿ ತಾಲ್ಲೂಕಿನ ಮುತ್ತಕೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶಿವಶಂಕರ ಅವರನ್ನು ಅಮಾನತುಗೊಳಿಸಲಾಗಿದೆ.
ಜೂನ್ 18ರಂದು ಜಿಲ್ಲಾ ಎಪಿಎಫ್ ತಂಡ ಶಾಲೆಗೆ ಭೇಟಿ ನೀಡಿತ್ತು. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಮಕ್ಕಳಿಗೆ ಬಿಸಿಯೂಟದಲ್ಲಿ ಮೊಟ್ಟೆ, ಬಾಳೆಹಣ್ಣು ಹಾಗೂ ಮೂರ್ನಾಲ್ಕು ದಿನ ಬಿಸಿಯೂಟ ವಿತರಿಸಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದರು.
ʼಬಿಸಿಯೂಟ ವಿತರಣೆ ದಾಖಲೆ ಕೂಡ ಬರೆಯದೇ ನಿರ್ಲಕ್ಷ್ಯ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಶಿಸ್ತು ಕ್ರಮ ಜರುಗಿಸುವಂತೆ ತಪಾಸಣೆ ತಂಡದವರು ಶಿಫಾರಸು ಮಾಡಿದ್ದರು. ಹೀಗಾಗಿ ಪ್ರಭಾರ ಮುಖ್ಯಶಿಕ್ಷಕರ ಮೇಲೆ ಶಿಸ್ತುಕ್ರಮ ಜರುಗಿಸಿ ಅಮಾನತುಗೊಳಿಸಲಾಗಿದೆʼ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಇದನ್ನೂ ಓದಿ : ಬೀದರ್| ʼಶಕ್ತಿ ಯೋಜನೆʼಗೆ 2 ವರ್ಷ: 8.29 ಕೋಟಿ ಮಹಿಳೆಯರು ಪ್ರಯಾಣ; ₹237.80 ಕೋಟಿ ಆದಾಯ





