“ಆರ್‌ಎಸ್‌ಎಸ್ ನಿಷೇಧಿಸಿ, ಪ್ರಜಾಪ್ರಭುತ್ವ ಉಳಿಸಿ” ಎಂದು ಆಗ್ರಹಿಸಿ, ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸೋಮವಾರ ಜೇವರ್ಗಿ ಪಟ್ಟಣದ ತಹಶಿಲ್ದಾರರ ಕಚೇರಿ ಎದುರುಗಡೆ ಬೃಹತ್ ಪ್ರತಿಭಟನೆ ನಡೆಯಿತು.
ವಿವಿಧ ಸಂಘಟನೆಗಳ ನಾಯಕರು ಮತ್ತು ಸದಸ್ಯರು ಭಾಗವಹಿಸಿ ಆರ್‌ಎಸ್‌ಎಸ್ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ತಾಲ್ಲೂಕು ದಂಡಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸುರೇಶ ಹಾದಿಮನಿ, ಗುರುರಾಜ ಎಸ್. ಸುಬೇದಾರ್, ಶ್ರಿಹರಿ ಕರಕಿಹಳ್ಳಿ, ಸಿದ್ದು ಕೇರೂರ್, ನಿಜಲಿಂಗ ದೊಡ್ಡಮನಿ, ಆಶೋಕ ದೊಡ್ಡಮನಿ, ಅಬ್ದುಲ್ ಗನಿ, ಮೊಹಿಯುದ್ದೀನ್, ಸಿದ್ರಾಮ ಕಟ್ಟಿ, ಭೀಮರಾಯ ನಗನೂರ್ ಸೇರಿದಂತೆ ಹಲವಾರು ನಾಯಕರು ಮಾತನಾಡಿ, ಆರ್‌ಎಸ್‌ಎಸ್ ಸಂಘಟನೆ ಕಾನೂನುಬಾಹಿರವಾಗಿ ಹಾಗೂ ಸಮಾಜದಲ್ಲಿ ವಿಷಬೀಜ ಬಿತ್ತುವಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಕರೆದು, ಆರ್‌ಎಸ್‌ಎಸ್ ನಿಷೇಧ, ಪ್ರಿಯಾಂಕ್ ಖರ್ಗೆ ಸಚಿವರಿಗೂ ಹಾಗೂ ಅವರ ಕುಟುಂಬಕ್ಕೆ ಸರ್ಕಾರದ ಝಡ್ ಶ್ರೇಣಿ ಭದ್ರತೆ, ಜೀವ ಬೆದರಿಕೆ ಪ್ರಕರಣಗಳಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲು, ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ತ್ವರಿತ ನ್ಯಾಯ ಮತ್ತು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ಸಮಿತಿಯ ಮುಖಂಡರು, “ಆರ್‌ಎಸ್‌ಎಸ್ ನೂರಾರು ವರ್ಷಗಳಿಂದ ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ದೇಶದಲ್ಲಿ ಕೋಮುವಾದ ಮತ್ತು ಜಾತ್ಯತೀತ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಗಣವೇಷಧರಿಸಿ ಸರಕಾರಿ ವೈದ್ಯಾಧಿಕಾರಿ ಭಾಗಿ
ಪ್ರತಿಭಟನೆಯ ವೇಳೆ ಸಾರ್ವಜನಿಕರಿಗೆ ಉದ್ದೇಶವನ್ನು ತಿಳಿಸುತ್ತಾ, ಸಂಘಟನೆಗಳು ಮುಂದಿನ ದಿನಗಳಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಭೀಮರಾಯ ನಗನೂರ್, ಶಿವಶರಣಪ್ಪ ಮಾರಡಗಿ, ಗುಂಡಪ್ಪ ಜಡಗಿ, ಪರಮಾನಂದ ಯಲಗೋಡ, ಶಿವಕುಮಾರ್ ಹೆಗಡೆ, ಮಲ್ಲಣ್ಣ ಕೊಡಚಿ, ರವಿ ಕುರಳಗೇರಾ, ಮಾಪಣ್ಣ ಕಟ್ಟಿ, ಮಲ್ಲಿಕಾರ್ಜುನ ಕೆಲ್ಲೂರ್, ಮಹೇಶ ಕೋಕಿಲೆ, ಗುಂಡಪ್ಪ ಜಡಗಿ, ಗುರುಲಿಂಗಪ್ಪ ಗುಡೂರ, ಸಿದ್ದು ಶರ್ಮಾ, ಭೀಮರಾಯ ಬಳಬಟ್ಟಿ, ವಿಶ್ವರಾಧ್ಯ ಗೋಪಾಲಕರ, ಭಾಗಣ್ಣ ಕಟ್ಟಿ, ಮಿಲಿಂದ್ ಸಾಗರ್, ಪ್ರಕಾಶ್ ಮಾರಡಗಿ, ಬಸವರಾಜ್ ಮತ್ತಿತರರು ಭಾಗವಹಿಸಿದರು.





