ವರದಕ್ಷಿಣೆ ತರುವಂತೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಮಲಾಪುರ ತಾಲೂಕಿನ ತಾಂಡಾವೊಂದರ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
‘2023ರಲ್ಲಿ ಮದುವೆ ಸಮಯದಲ್ಲಿ 8 ತೊಲೆ ಬಂಗಾರ ಹಾಗೂ ₹2 ಲಕ್ಷ ವರದಕ್ಷಿಣೆ ನೀಡುವುದಾಗಿ ಮಾತಾಗಿತ್ತು. ಆರ್ಥಿಕ ಸಂಕಷ್ಟ ಇರುವ ಕಾರಣ 1 ತೊಲೆ ಬಂಗಾರ ಹಾಗೂ ₹1ಲಕ್ಷ ನಂತರ ಕೊಡುವುದಾಗಿ ಹೇಳಲಾಗಿತ್ತು. ಮದುವೆಯಾದ ಬಳಿಕ ಉಳಿದ ವರದಕ್ಷಿಣೆ ತರುವಂತೆ ಪ್ರತಿದಿನ ಮಾನಸಿಕ, ದೈಹಿಕ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಉಳಿದ ವರದಕ್ಷಿಣೆ ತರುವಂತೆ ಗಂಡ, ಮಾವ, ಭಾವ ಸೇರಿ ಕುಟುಂಬಸ್ಥರು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಹೊಡೆಯುವುದು ಮಾಡುತ್ತಿದ್ದಾರೆ. ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಜೀವ ಭಯದಿಂದ ಆ.1ರಂದು ತವರು ಮನೆಗೆ ಬಂದಿದ್ದೇನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಈ ದೂರಿನ್ವಯ ಕಾಳಗಿ ತಾಲೂಕಿನ ಸೇರಿ ಬಡಾ ತಾಂಡಾದ ನಿವಾಸಿ, ಪತಿ ಸೇವಕ, ಮಾವ ಭೀಮಸಿಂಗ್, ಭಾವ ಲೋಕೇಶ ಸೇರಿ ಒಟ್ಟು ಐದು ಜನರ ವಿರುದ್ಧ ವಿರುದ್ಧ ಐಪಿಸಿಯ ಕಲಂ 85, 115(2), 352, 351(2) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಕಲಂ 3 ಹಾಗೂ 4ರಡಿ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೀದರ್ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ಸ್ವಾಗತ ಸಮಿತಿ ಅಧ್ಯಕ್ಷರಾಗಿ ಬಸವರಾಜ ಧನ್ನೂರ ನೇಮಕ





