ಕಲಬುರಗಿ | ವರದಕ್ಷಿಣೆ ಕಿರುಕುಳ; ನೇಣು ಬಿಗಿದು ಮಹಿಳೆ ಕೊಲೆಗೆ ಯತ್ನ

Date:

ಕೌಟುಂಬಿಕ ಕಲಹದಲ್ಲಿ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡಿ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಕಲಬುರಗಿ ನಗರದಲ್ಲಿ ಮಂಗಳವಾರ ನಡೆದಿದ್ದು, ಮಹಿಳೆಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿ ನಗರದ ರೋಜಾ ಮಾರುಕಟ್ಟೆ ನಿವಾಸಿ ಯಾಸ್ಮಿನ್ ಎಂಬುವವರಿಗೆ ಕುಟುಂಬಸ್ಥರು ಕಿರುಕುಳ ನೀಡಿದ್ದು, ಅವರನ್ನು ಕೊಲೆ ಮಾಡಲು ಯತ್ನಿಸಿದ್ದಾರೆ.

ಸಂತ್ರಸ್ತೆ ಯಾಸ್ಮಿನ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗಂಡ ಶೇಖ್ ಅಬ್ದುಲಾ, ಅತ್ತೆ‌ ಹಾಗೂ ಐದು ಮಂದಿ ನಾದಿನಿಯರಾದ ಕರಿಮಾ, ಕಲಿಮಾ, ಆಫರಿನ್, ಜರಿನಾ, ಹಸಿನಾ ಅವರೆಲ್ಲ ಸೇರಿಕೊಂಡು, ʼನಿನ್ನ ತವರು ಮೆನೆಯಿಂದ ಬಂಗಾರ ತೆಗೆದುಕೊಂಡು ಬಾʼ ಎಂದು ಪ್ರತಿನಿತ್ಯ ನನ್ನನ್ನು ಪೀಡಿಸುತ್ತಿದರು. ಮಂಗಳವಾರ ಬೆಳಿಗ್ಗೆ ಊಟ ಮಾಡುತ್ತಿರುವಾಗ ತಟ್ಟೆ ಕಸಿದುಕೊಂಡು ತಟ್ಟೆಯಿಂದ ಬೆನ್ನು, ಮುಖ ಮೊಳಕಾಲು ಎಲ್ಲೆಂದರಲ್ಲಿ ಮನಬಂದಂತೆ ಹೊಡೆದಿದ್ದರಿಂದ ನಾನು ಮೂರ್ಛೆ ಹೋಗಿದ್ದೆ. ಆ ಸಮಯದಲ್ಲಿ ನನ್ನನ್ನು ನೇಣು ಹಾಕಿ ಸಾಯಿಸಲು ಯತ್ನಿಸಿದ್ದಾರೆ. ನನ್ನ ಗಂಡ, ಅತ್ತೆ, ನಾದಿನಿಯರಿಗೆಲ್ಲ ಶಿಕ್ಷೆಯಾಗಬೇಕು” ಎಂದು ಅವಲತ್ತುಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಸಂತ್ರಸ್ತೆ ತಾಯಿ

ಸಂತ್ರಸ್ತೆ ತಾಯಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಗಳ ಗಂಡನ ಮನೆಯವರು ಬಂಗಾರ, ದುಡ್ಡು ತಗೆದುಕೊಂಡು ಬರುವಂತೆ ಬಹಳ ಜಗಳ‌ ಮಾಡುತ್ತಿದ್ದರು‌. ನಾವು ಬಡವರು ಎಲ್ಲಿಂದ ಕೊಡಬೇಕು. ನಮ್ಮ ಹತ್ತಿರ ಏನೂ ಇಲ್ಲವೆಂದು ತಿಳಿಸಿದ ಮೇಲೆ ಮನೆಯಲ್ಲಿ ಮಗಳ ಜತೆಗೆ ಜಗಳ ಮಾಡಿದ್ದಾರೆ. ಪ್ರತಿದಿನ ಫೋನ್ ಮಾಡುವ ಮಗಳು ಮೂರು ದಿನಗಳಿಂದ ಪೋನ್ ಮಾಡಿಲ್ಲವೆಂದು ಆತಂಕಗೊಂಡು ಮಗಳ ಮನೆಗೆ ಹೋದಾಗ, ಮಗಳು ಮೂರ್ಛೆ ಹೋಗಿ ಬಿದ್ದಿರುವುದನ್ನು ನೋಡಿ‌ ನಾನು ಗಾಬರಿಗೊಂಡು ಆಟೊದಲ್ಲಿ ಮಗಳನ್ನು ತಂದು ಆಸ್ಪತ್ರೆಗೆ ಸೇರಿಸಿದ್ದೇನೆ. ನನ್ನ ಮಗಳಿಗೆ ಈ ರೀತಿ ಹಿಂಸೆ ನೀಡಿದವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದರು.

ಸಂತ್ರಸ್ತೆ ಯಾಸ್ಮಿನ್‌ ಎಂಬುವವರಿಗೆ ಒಬ್ಬಳು ಪುತ್ರಿ, ಒಬ್ಬ ಪುತ್ರನಿದ್ದು, ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಮಕ್ಕಳು, “ನಮ್ಮ ಅಮ್ಮನಿಗೆ ಅತ್ತೆ ಕರಿಮಾ ತಟ್ಟೆಯಿಂದ ಹೊಡೆದು ನೇಣು ಹಾಕಿದ್ದಾರೆ. ನಮ್ಮ ಅಪ್ಪ ನೇಣು ಬಿಗಿದಿರುವುದು ಚಾಕುವಿನಿಂದ ಕತ್ತರಿಸಿದ್ದಾರೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಅಭಿಯಾನ; ಗಿಡಗಳ ವಿತರಣೆ

“ಯಾಸ್ಮಿನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಆಸ್ಪತ್ರೆಯ ಸಿಬ್ಬಂದಿಗಳು ಎಂಎಲ್‌ಸಿ ಮಾಡುವುದಾಗಿ ತಿಳಿಸಿದರು. ದೂರು ದಾಖಲಿಸಿಕೊಳ್ಳಲು ಮಹಿಳಾ ಪೊಲೀಸ್ ಠಾಣೆಯವರು ಹಿಂದೇಟು ಹಾಕಿದಾಗ ಈ ದಿನ.ಕಾಮ್ ಪ್ರತಿನಿಧಿ ಮಹಿಳಾ ಪೊಲೀಸ್ ಠಾಣೆಗೆ ಕರೆ ಮಾಡಿ ಮಾತನಾಡಿದ ಬಳಿಕ ದೂರು ದಾಖಲಿಸಲಾಯಿತು” ಎಂದು ಸಂತ್ರಸ್ತೆ ಕುಟುಂಬಸ್ಥರು
ಈ ದಿನ.ಕಾಮ್‌ಗೆ ಧನ್ಯವಾದ ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...