ಕಲಬುರಗಿ | ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರ ಸಾಲದ ಖಾತೆ ಬಂದ್:‌ ತೆರವಿಗೆ ರೈತ ಸಂಘಟನೆಗಳ ಆಗ್ರಹ

Date:

ಅತಿವೃಷ್ಟಿ ಮಳೆಯಿಂದ ಹಾನಿಗೊಳಗಾದ ರೈತರು ಸಂಕಷ್ಟದಲ್ಲಿದ್ದಾರೆ. ಹಿಂಗಾರು ಬಿತ್ತನೆ ಮಾಡಿ ಕಂಗಾಲಾದ ರೈತರ ಸಾಲದ ಖಾತೆಗಳನ್ನು ಸ್ಥಗಿತ ಮಾಡುವುದನ್ನು ನಿಲ್ಲಿಸಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲದ ಖಾತೆಗಳನ್ನು ಹೋಲ್ಡ್ ಮಾಡಿರುವುದನ್ನು ಕೂಡಲೇ ತೆರೆಯಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಜಂಟಿ ಸಂಘಟನೆಗಳು ಆಗ್ರಹಿಸಿವೆ.

ಕಲಬುರಗಿ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಲಬುರಗಿ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, “ಅತಿವೃಷ್ಟಿ ಪರಿಹಾರಕ್ಕಾಗಿ ನೋಂದಣಿಯಾದ 4,17,000 ಮಂದಿ ರೈತರು ಮತ್ತು FID ನಂಬರ್‌ ಹೊಂದಿರುವ ರೈತರು 3,17,000 ಮಂದಿ ರೈತರು ಮಾತ್ರ ಇನ್ನೂ 12,313 ಮಂದಿ ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ. ಸರಾಸರಿ ಅಂದಾಜು 30 ಕೊಟಿಯಷ್ಟು ಹಣವನ್ನು ರೈತರ ಖಾತೆಗೆ ಜಮಾ ಮಾಡಬೆಕಾಗಿದೆ” ಎಂದು ಆಗ್ರಹಿಸಿದರು.

“ಕಲಬುರಗಿ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಮಾಡುವಾಗ ಗ್ರಾಮೀಣ ಪ್ರದೇಶದಲ್ಲಿರುವ ವಿಲೇಜ್ ಅಕೌಂಟೆಂಟರ್ ಎಲ್ಲೋ ಕುಳಿತು ಬೆಳೆ ಸಮೀಕ್ಷೆ ಮಾಡಿ, ಈಗ ರೈತರಿಗೆ ಪರಿಹಾರ ನೀಡುವ ಸಮಯದಲ್ಲಿ ತಾರತಮ್ಯವಾಗಿದೆ. ಇನ್ನೂ ಅನೇಕ ಮಂದಿ ರೈತರಿಗೆ ಪರಿಹಾರವೇ ಜಮಾ ಅಗಿರುವುದಿಲ್ಲ. ಪರಿಹಾರಕ್ಕಾಗಿ ರೈತರು ಹತಾಶರಾಗಿದ್ದಾರೆ”‌ ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕಲಬುರಗಿ ಜಿಲ್ಲೆ ಅತಿವೃಷ್ಟಿಗೆ ತುತ್ತಾಗಿದೆಯಾದರೆ, ಹಸಿ ಜಾಸ್ತಿಯಾಗಿ ತೊಗರಿ ಗೊಡ್ಡು ರೋಗಕ್ಕೆ ತುತ್ತಾಗಿ ಹೋಗುತ್ತಿದೆ. ಅಲ್ಲದೆ ಮತ್ತೊಂದು ಕಡೆ ಕಾಡು ಹಂದಿಗಳ ಕಾಟಾ ಜಾಸ್ತಿಯಾಗಿ ತೊಗರಿ ಗಿಡಗಳನ್ನು ಸಂಪೂರ್ಣವಾಗಿ ತುಳಿದು, ತಿಂದುಹಾಕಿ ಅಪಾರ ನಷ್ಟ ಉಂಟಾಗಿದೆ. ಹೀಗಾಗಿ ಈ ಹಾನಿಯಾದ ತೊಗರಿ ನಷ್ಟವಾಗಿರುವುದು ಯಾವುದೇ ಲೆಕ್ಕಕ್ಕೂ ಬರುವುದಿಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇವರಿಗೂ ಕೂಡ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.

“ಕಲಬುರಗಿ ಜಿಲ್ಲೆಯ ತೊಗರಿ ನಾಡು ಮತ್ತು ರೈತರ ಒಕ್ಕಲುತನ ಸಂಕಷ್ಟಕ್ಕೆ ಸಿಲುಕಿವೆ. ಕಷ್ಟಪಟ್ಟು ಸಿಕ್ಕಾಪಟ್ಟಿ ಲಾಗೊಡಿ ಮಾಡಿ ಬೆಳೆ ಬೆಳೆದು ರೈತರ ರೊಕ್ಕದ ಮಾಲುಗಳಾದ ಉದ್ದು, ಹೆಸರು, ತೊಗರಿ, ಸೋಯಾಬೀನ್‌ ಬೆಳೆಗಳು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಮಾರುಕಟ್ಟೆಯಲ್ಲಿ ಬೆಂಬಲ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ರೈತರು ಬೆಳೆದ ಮಾಲುಗಳಿಗೆ ಕವಡಿ ಕಿಮ್ಮತ್ತೂ ಇಲ್ಲದಂತಾಗಿದೆ. ರೈತರು ಮಾರುಕಟ್ಟೆಗೆ ತಂದ ಮಾಲು ʼಅಗ್ಗಕ್ಕ ಮುಗ್ಗ ಜೋಳಾ ಕೊಟ್ಟಂತಾಗುತ್ತಿದೆʼ ಎನ್ನುವ ಗಾದೆಯ ಮಾತಿನಂತಾಗಿದೆ. ಕುಣಿಗೆ ತಂದ ಹೆಣ ಮರಳಿ ಮನೆಗೆ ತರುವಂತಿಲ್ಲ, ಮಣ್ಣು ಮಾಡಬೇಕು ಎಂಬ ಹಾಗೆ ಮಾರುಕಟ್ಟೆಗೆ ತಂದ ರೈತರ ಮಾಲನ್ನು ಬೇಕಾ ಬಿಟ್ಟಿಯಾಗಿ ಮಾರಾಟ ಮಾಡುವಂತಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.

“ರೈತರ ಗೋಳು ಮುಗಿಲು ಮುಟ್ಟಿದೆ. ಇಂತಹ ಸಂದರ್ಭದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ಎಂಎಸ್‌ಪಿ ಕಾನೂನನ್ನು ಜಾರಿಗೆ ತರಲಾರದಂಥ ರೈತ ವಿರೋಧಿಗಳಾಗಿವೆ. ರಾಷ್ಟ್ರೀಕೃತ ಬ್ಯಾಂಕುಗಳು ರೈತರ ಸಾಲದ ಖಾತೆಗಳನ್ನು ಸ್ಥಗಿತ ಮಾಡಿದ್ದನ್ನು ಕೈ ಬಿಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬರಬೇಕು” ಎಂದು ಜಿಲ್ಲಾಡಳಿತಕ್ಕೆ ರೈತ ಸಂಘದ ಪರವಾಗಿ ಆಗ್ರಹಿಸಿದರು.

“ಕಲಬುರಗಿ ಜಿಲ್ಲೆಯಲ್ಲಿ ಈ ವರ್ಷ ಅತಿವೃಷ್ಟಿ ಮಳೆಯಿಂದ ರೈತರ ರೊಕ್ಕದ ಮಾಲುಗಳು ನೀರುಪಾಲಾಗಿವೆ. ಹಿಂಗಾರು ಬಿತ್ತನೆಗೆ ತಯಾರಿ ಮಾಡುತ್ತಿರುವ ರೈತರು ಬಿತ್ತನೆ ಬೀಜ, ರಸಗೊಬ್ಬರ, ಬುಕ್ಕಾ ಕುಂಟಿ ದಿಂಡು, ಕೂರಿಗಿ ದಿಂಡುಗ ಭರದಿಂದ ತಯ್ಯಾರಿ ಮಾಡಿ ಬಿತ್ತನೆ ಮಾಡಿದ ರೈತರ ಹತ್ತಿರ ರೊಕ್ಕಾ ಇಲ್ಲದೆ ರೈತರು ಪರದಾಡುವಂತಾಗಿದೆ. ರೈತರು ಇಂತಹ ಸಂಕಷ್ಟದಲ್ಲಿರುವಾಗ ಸಣ್ಣ ಪ್ರಮಾಣದ ಪರಿಹಾರದ ರೊಕ್ಕ ರೈತರ ಖಾತೆಗೆ ಜಮಾವಣೆಯಾಗಿದ್ದು ನೋಡಿ ರಾಷ್ಟ್ರೀಕೃತ ಬ್ಯಾಂಕುಗಳು ರೈತರ ನೆರವಿಗೆ ಬಾರದೆ ಲಾಗೊಡಿ(ಖರ್ಚು) ರೊಕ್ಕಕ್ಕಾಗಿ ಅಲೆದಾಡುವ ಸಮಯದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ರೈತರು ಬೆಳೆ ಸಾಲ ಕಟ್ಟಿಲ್ಲ ಸಾಲ ಮರುಪಾವತಿ ಮಾಡಬೇಕು ಎಂದು ಒತ್ತಾಯಿಸುತ್ತಿದ್ದು, ಹಣಕಾಸಿನ ವ್ಯವಹಾರ ಮಾಡಲಾರದಂತೆ ರೈತರ ಖಾತೆಗಳನ್ನು ಸ್ಥಗಿತ ಮಾಡಿರುವ ರಾಷ್ಟ್ರೀಕೃತ ಬ್ಯಾಂಕುಗಳ ನಡೆ, ರೈತರಿಗೆ ಈಗಾಗಲೇ ಆಗಿರುವ ನೋವಿನ ಮೇಲೆ ಮತ್ತೆ ಪೆಟ್ಟು ಕೊಟ್ಟಂತಾಗಿದೆ” ಎಂದು ಆರೋಪಿಸಿದರು.

“ವಿಮೆ ಹಣ, ಉದ್ಯೋಗ ಖಾತ್ರಿ ರೊಕ್ಕ, ಹಿರಿಯ ನಾಗರಿಕರ ವಯೋ ಪಿ ವಿಡಿಯೊ ಪೆನ್ಷನ್ ರೊಕ್ಕ, ಬೆಳೆಸಾಲ ಕಟ್ಟಲಾಗದ ರೈತರ ಖಾತೆಗಳನ್ನು ಹೋಲ್ಡ್ ಮಾಡಿದ್ದನ್ನು ಕೂಡಲೇ ಜಿಲ್ಲೆಯ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳು PKGB ಪ್ರಗತಿ ಕ್ರಷ್ಣಾ ಗ್ರಾಮೀಣ ಬ್ಯಾಂಕ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಈಗಾಗಲೇ ಅಫಜಲಪುರ, ಜೇವರ್ಗಿ, ಚಿಂಚೊಳಿ, ಚಿತ್ತಾಪುರ, ಶಹಾಬಾದ, ಕಮಲಾಪುರ ತಾಲೂಕುಗಳಲ್ಲಿ ಒಂದೊಂದು ಬ್ಯಾಂಕುಗಳಲ್ಲಿ ನೂರಾರು ಮಂದಿ ರೈತರ ಮತ್ತು ಮನರೇಗಾ ಕೂಲಿಕಾರರ ಖಾತೆಗಳನ್ನು ಬಂದ್‌ ಮಾಡಿರುವುದನ್ನು ರಾಷ್ಟ್ರೀಕೃತ ಬ್ಯಾಂಕುಗಳ ಕೂಡಲೇ ರೈತರ ಖಾತೆಗಳನ್ನು ಚಾಲು ಮಾಡಬೇಕು” ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪರವಾಗಿ ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಅಕಾಲಿಕ ಮಳೆಗೆ ಮುಳುಗಿತು ಬೆಳೆ: ಬಾಡಿತು ರೈತರ ಬದುಕು, ನೆರವು ನೀಡುವುದೇ ಸರ್ಕಾರ?

“ಒಂದು ವೇಳೆ ನಿರ್ಲಕ್ಷ್ಯ ತೊರಿದ್ದಲ್ಲಿ ಬ್ಯಾಂಕುಗಳ ಮುಂದೆ ಹೋರಾಟ ಅನಿವಾರ್ಯವಾಗುತ್ತದೆ” ಎಂದು KPRS ಎಚ್ಚರಿಕೆ ನಿಡಿದೆ.

ಕೆಪಿಆರ್‌ಎಸ್ ಕಾಳಗಿ‌ ತಾಲೂಕು ಅಧ್ಯಕ್ಷ ವೀರಣ್ಣಾ ಗಂಗಾಣಿ, ಕಲಬುರಗಿ ಜಿಲ್ಲಾ ಕಾರ್ಯದರ್ಶಿ ಶಿವುರಾಜ ಪಾಟೀಲ್ ಗೊಣಗಿ, KRRS ಯುವ ಘಟಕ ಕಾರ್ಯದರ್ಶಿ ಸಿದ್ದು ಟೆಂಗಳಿ, ಕರೆಪ್ಪಾ ಕರಗೊಂಡ, ಅಧ್ಯಕ್ಷ ಸಿದ್ದು ಎಸ್ ಎಲ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...