ಎರಡು ಲಾರಿಗಳ ಮಧ್ಯೆ ಮುಖಾಮುಖಿ ಡಿಕ್ಕಿ ನಡೆದ ವೇಳೆ ಸಿಲುಕಿದ ಚಾಲಕನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಬೆಳಗಿನ ಜಾವ ಜೇವರ್ಗಿ ಪಟ್ಟಣದ ಹೊರವಲಯದ ಹೆದ್ದಾರಿ ಮೇಲೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಂಕಲಗಾ ಗ್ರಾಮದ ಲಾರಿ ಚಾಲಕ ಸಾದಿಕ್ ಅಬ್ಬಾಸ್ ಎಂಬುವವರು ಅಪಘಾತದಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡು ಹೊರಬರಲು ಸಾಧ್ಯವಾಗದ ಒದ್ದಾಡುತ್ತಿದ್ದರು.
ʼಚಾಲಕನನ್ನು ಹೊರತೆಗೆಯಲು ಪೊಲೀಸರು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ, ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಗಾಯಗೊಂಡಿದ್ದ ಚಾಲಕನನ್ನು ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ತಿಳಿದು ಬಂದಿದೆ.
ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಜಿಲ್ಲಾ ಅಧಿಕಾರಿ ಮಲ್ಲಿಕಾರ್ಜುನ ಹಲಗೇರಾ, ಜೇವರ್ಗಿ ಪ್ರಭಾರ ಅಧಿಕಾರಿ ತಿರುಮಲರೆಡ್ಡಿ, ಮಂಜುನಾಥ, ಸಂಗಪ್ಪ ಲೋಣಿ, ಶಾಂತಪ್ಪ ಪಟ್ಟೇದ್, ಸತೀಶ್ ಪಾಟೀಲ, ಚಿದಾನಂದ, ದೌಲಸಾಬ, ಅಗ್ನಿಶಾಮಕ ಸಿಬ್ಬಂದಿ ಚನ್ನಬಸಪ್ಪ ಗೋಗಿ, ವೀರಭದ್ರಪ್ಪ, ಚಾಲಕರಾದ ವಿಜಯ ರಾಠೋಡ, ಸೌರವ, ರಾಘವೇಂದ್ರ ರೆಡ್ಡಿ, ತಯ್ಯಬಲಿ, ರವಿ, ಪ್ರದೀಪ ಮತ್ತಿತರರು ಇದ್ದರು.
ಈ ಪ್ರಕರಣ ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





