ಕಲಬುರಗಿ ಜಿಲ್ಲೆ ಶಹಾಪುರ ತಾಲೂಕಿನ ಹೋತಪೇಟೆ ಗ್ರಾಮದಲ್ಲಿ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ಪ್ರಾಯೋಜಕತ್ವ ಮಕ್ಕಳಿಗೆ ಅಕ್ಟೋಬರ್ ತಿಂಗಳಲ್ಲಿ ಫ್ಲಾಟ್ ಫಂಕ್ಷನಲ್ ಸಾಕ್ಷರತಾ ಮೌಲ್ಯಮಾಪನ ಸಾಧನ ಬಳಸಿ ಮಕ್ಕಳಿಗೆ ಪರೀಕ್ಷೆ ನಡೆಸಿದ್ದರು. ಇದರಿಂದ ಸುಮಾರು ಮಕ್ಕಳಿಗೆ ತಮ್ಮ ವಯಸ್ಸಿಗೆ ಹಾಗೂ ತರಗತಿಗೆ ತಕ್ಕಂತೆ ಕನ್ನಡ ಓದಲು ಹಾಗೂ ಗಣಿತದ ಲೆಕ್ಕಗಳನ್ನು ಮಾಡಲು ಅನುಕೂಲವಾಗಿದೆ.
“ಗ್ರಾಮದ ಬಹುತೇಕ ಮಕ್ಕಳಿಗೆ ತಮ್ಮ ವಯಸ್ಸಿಗೆ ಹಾಗೂ ತರಗತಿಗೆ ತಕ್ಕಂತೆ ಕನ್ನಡ ಓದಲು ಹಾಗೂ ಗಣಿತದ ಲೆಕ್ಕಗಳನ್ನು ಮಾಡಲು ಬರುತ್ತಿರಲಿಲ್ಲ. ಹಾಗಾಗಿ ಫ್ಲಾಟ್ ಫಂಕ್ಷನಲ್ ಸಾಕ್ಷರತಾ ಮೌಲ್ಯಮಾಪನ ಸಾಧನ ಬಳಸಿ ಕಳೆದ ಆರು ತಿಂಗಳಿನಿಂದ ಮಕ್ಕಳಿಗೆ ಪರಿಹಾರ ಬೋಧನೆ ಶಿಕ್ಷಣ ನೀಡುತ್ತಿದ್ದು, ಸುಮಾರು 30 ಮಕ್ಕಳು ಈ ಶಿಕ್ಷಣ ಪಡೆಯುತ್ತಿದ್ದು, ಓದಲು ಬರೆಯಲು ಹಾಗೂ ಗಣಿತ ಲೆಕ್ಕಗಳನ್ನು ಮಾಡಲು ಅರ್ಹರಾಗಿದ್ದಾರೆ. ಇದರಿಂದ ಎಲ್ಲ ಮಕ್ಕಳಿಗೆ ಅನುಕೂಲವಾಗುತ್ತಿದೆ ಎಂದು ಸಂಸ್ಥೆಯ ಪ್ರೋಗ್ರಾಮ್ ಆಫೀಸರ್ ಅನಿಲ್ ತೇಜಪ್ಪ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ನೇಹಾ ಕೊಲೆ ಪ್ರಕರಣ; ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಎಸ್‌ಎಫ್‌ಐ ಒತ್ತಾಯ
ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶರಣಪ್ಪ, ಗ್ರಾಮದ ಮುಖಂಡ ಧರ್ಮಣ್ಣ, ಶಿಕ್ಷಕರು ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆ ಶಿಕ್ಷಕಿ ನಳಿನಿ ಸೇರಿದಂತೆ ಸಿಬ್ಬಂದಿ, ಮಕ್ಕಳು, ಪಾಲಕರು ಇದ್ದರು.





