ಕಲಬುರಗಿ | ಗಂಡೂರಿ ನಾಲಾ ಹೂಳು ತೆಗೆದು, ರೈತರ ಬೆಳೆಗಳಿಗೆ ನೀರು ಬಿಡುವಂತೆ ಕೆಪಿಆರ್‌ಎಸ್‌ ಆಗ್ರಹ

Date:

ಗಂಡೂರಿ ನಾಲಾ ಎಡದಂಡೆ ಬಲದಂಡೆ ಕಾಲುವೆ ಹೂಳು ತೆಗೆದು ಅನಗತ್ಯ ಗಿಡಗಂಟಿಗಳನ್ನು ತೆರವುಗೊಳಿಸಿ ಕಾಲುವೆ ಕೆಳಗಿನ ರೈತರ ಬೆಳೆನಷ್ಟವಾಗದಂತೆ ನೋಡಿಕೊಳ್ಳಬೇಕು ಮತ್ತು ಭೂಮಿ ತೇವಾಂಶ ಒಣಗಿ ಹೋಗಿದ್ದು, ಕೂಡಲೇ ರೈತರ ಬೆಳೆಗಳಿಗೆ ನೀರು ಬಿಡಬೇಕೆಂದು ಆಗ್ರಹಿಸಿ ಕಲಬುರಗಿ ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್‌ಎಸ್‌)ದಿಂದ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ನೀರಾವರಿ ನಿಗಮ ನಿಯಮಿತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕರ್ನಾಟಕ ನೀರಾವರಿ ನಿಗಮ ನಿಯಮಿತ ಗಂಡೂರಿ ನಾಲಾ ಉಪವಿಭಾಗ ಮಹಾಗಾಂವ ಮುಖ್ಯ ಎಂಜಿನಿಯರ್‌ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಕೆಪಿಆರ್‌ಎಸ್‌ ಜಿಲ್ಲಾ ಅಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಮಾತನಾಡಿ, “ಗಂಡೂರಿ ನಾಲಾ ನೀರಾವರಿ ಎಡದಂಡೆ ಮತ್ತು ಬಲದಂಡೆ ಕಾಲುವೆಗಳು ಹೂಳು ತುಂಬಿ ಹೋಗಿವೆ. ಕಾಲುವೆಗಳು ಒಡೆದು ಹಾಳಾಗಿ ಹೋಗಿವೆ. ಹೀಗಾಗಿ ಕ್ಯಾನಲ್ ಕಾಲುವೆಗಳಿಗೆ ನೀರು ಬಿಟ್ಟರೂ ಕೂಡಾ ಅಲ್ಲಲ್ಲಿ ನೀರು ಸೊರಿಕೆಯಾಗಿ ರೈತರ ಜಮೀನು ಹಾಗೂ ಬೆಳೆಗಳಿಗೆ ಬಂದು ತಲುಪುವುದಿಲ್ಲ. ಹೆಸರಿಗೆ ಮಾತ್ರ ನೀರು ಬಿಟ್ಟಂತಾಗುತ್ತದೆ. ಆದರೆ ಬೆಳೆಗಳಿಗೆ ನೀರು ಬರುವುದೇ ಇಲ್ಲ. ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಕಾಲುವೆ ತುಂಬಿದ ಹೂಳು ತೆಗೆದು ಕಾಲುವೆಗಳ ಮೂಲಕ ರೈತರ ಬೆಳೆಗಳಿಗೆ ಗಂಡೂರಿ ನಾಲಾ ನೀರಾವರಿ ತುರ್ತಾಗಿ ನೀರು ಬಿಡಬೇಕು” ಎಂದು ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜಂಟಿ ಕಾರ್ಯದರ್ಶಿ ಕೆಪಿಆರ್‌ಎಸ್‌ ದಿಲೀಪ್ ನಾಗೂರೆ, ಉಪಾಧ್ಯಕ್ಷ ಸಿದ್ದಪ್ಪಾ ಕಲಶೆಟ್ಟಿ, ಬಸವರಾಜ ಹೊಸಮನಿ, ಚಾಂದಪಾಷ ಕೆಳಗಿನಮನಿ, ಸುನಿಲ್ ಗು‌ತ್ತೇದಾರ್‌, ಖಾದರಸಾಬ್ ಕೆಳಗಿನಮನಿ, ಮಲ್ಲಪ್ಪ ಪೂಜಾರಿ, ಇಸ್ಮಾಯಿಲ್ ರಟಗಲ್, ರೈತ ಮುಖಂಡ ಹಣಮಂತ ಚಂದ್ರನಗರ ಸೇರಿದಂತೆ ಇತರರು ಇದ್ದರು.

“ಬೆಣ್ಣೆ ತೊರಾ ಮುಳುಗಡೆ ಪ್ರದೇಶ ನಾಗೂರ ಗ್ರಾಮದ ಪುನರ್ವಸತಿ ಕೇಂದ್ರ 2ರಲ್ಲಿ ಹಕ್ಕುಪತ್ರ ಕೊಡುವಲ್ಲಿ ವಿಳಂಬನೀತಿ ಅನುಸರಿಸುತ್ತಿರುವುದು ಬಡವರ ವಿರೋಧಿಯಾಗಿದೆ. ಕೆಲವರಿಗೆ ಹಕ್ಕುಪತ್ರ ಕೊಟ್ಟರೂ ಜಾಗದ ಪ್ಲಾಟ್ ಸಂಖೆ ನೀರಾವರಿ ಇಲಾಖೆಯವರು ತೋರಿಸುತ್ತಿಲ್ಲ. ಇನ್ನೂ 200 ಮಂದಿ ನಿರಾಶ್ರಿತರಿಗೆ ಹಕ್ಕುಪತ್ರ ಕೊಟ್ಟಿಲ್ಲ ನಾಗೂರ ಪುನರ್ವಸತಿ ಕೇಂದ್ರ ನಿರಾಶ್ರಿತರಿಗೆ ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಿದಂತಾಗಿದ್ದು, ಧೋರಣೆ ನಡೆಯುತ್ತಿದೆ. ಕೂಡಲೇ ಎಲ್ಲರಿಗೂ ಸಮಾನವಾಗಿ ಹಕ್ಕುಪತ್ರ ಕೊಡಬೇಕು. ಈಗಾಗಲೇ ಶೆಡ್ಡಿನಲ್ಲಿ ವಾಸಿಸುವ ನಿರಾಶ್ರಿತರ ಬದುಕು ಅಧೋಗತಿಯಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕೊಡಗು | ನ.9ರಂದು ಹಿ ಚಿ ಹಬ್ಬ; ನೆಲಮೂಲ ಸಂಸ್ಕೃತಿಯ ಪ್ರತಿಭೆಗಳಿಗೆ ಜನಪದ ರಾಜ್ಯೋತ್ಸವ ಪ್ರಶಸ್ತಿ

“ರೈತರ ಹೊಲದಲ್ಲಿ ಕೆಲಸ ಮಾಡಿ ಕೃಷಿ ಕೂಲಿಕಾರರು ಕೆಲಸ ಮಾಡಿಬಂದು ರಾತ್ರಿ ವೇಳೆ ನಿದ್ರೆಗೆ ಜಾರಿದ ಸಮಯದಲ್ಲಿ ವಿಷಕಾರಿ ಹುಳಗಳ ಉಪಟಳ ಹೆಚ್ಚಾಗಿದ್ದು, ಸಣ್ಣಮಕ್ಕಳು, ದನಕರುಗಳು, ಕುರಿ, ಕೋಳಿಗಳು ಮತ್ತು ಮನುಷ್ಯರ ಜೀವಕ್ಕೆ ಅಪಾಯವಿರುವುದು ಎದ್ದುಕಾಣುತ್ತದೆ. ಜನರು ಭಾರೀ ಭಯಭೀತರಾಗಿದ್ದಾರೆ. ಮುಳ್ಳು, ಗಿಡಗಂಟಿಗಳು ಬೆಳೆದಿವೆ. ಹಾಗಾಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಬೇಜವಾಬ್ದಾರಿ ತೋರದೆ ಅಲ್ಲಿನ ಸಾರ್ವಜನಿಕರ ಮಾನವೀಯತೆ ಹಿತದೃಷ್ಠಿಯಿಂದ ಕೂಡಲೇ ಸ್ವಚ್ಛಗೊಳಿಸಬೇಕು” ಎಂದು ಒತ್ತಾಯಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...