ಆರ್‌ಎಸ್‌ಎಸ್ ಪಥಸಂಚಲನಕ್ಕೆ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಗಣವೇಷಧಾರಿಗಳು ಹಾಗೂ ಪೊಲೀಸರ ಮಧ್ಯೆ ವಾಗ್ವಾದ ನಡೆದ ಘಟನೆ ಭಾನುವಾರ ಸಂಜೆ ಸೇಡಂ ಪಟ್ಟಣದಲ್ಲಿ ನಡೆದಿದೆ.
ಸಂಜೆ 4 ಗಂಟೆಗೆ ಆರ್‌ಎಸ್‌ಎಸ್ ಪಥಸಂಚಲನ ನಿಗದಿಯಾಗಿದ್ದರೂ, ಸೇಡಂ ಪುರಸಭೆಯು ಮಧ್ಯಾಹ್ನ 3 ಗಂಟೆಯ ನಂತರ ಅನುಮತಿಯನ್ನು ರದ್ದುಗೊಳಿಸಿದೆ. ಇದರಿಂದ ಅಸಮಾಧಾನಗೊಂಡ ಕಾರ್ಯಕರ್ತರು ಸ್ಥಳದಲ್ಲೇ ಪ್ರತಿಭಟಿಸಲು ಮುಂದಾಗಿದ್ದಾರೆ.
“ಪಥಸಂಚಲನಕ್ಕೆ ಎಲ್ಲಾ ರೀತಿಯ ಸಿದ್ಧತೆ ಪೂರ್ಣಗೊಂಡಿದ್ದರೂ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸುವುದು ನ್ಯಾಯಸಂಗತವೇ?” ಎಂದು ಬಿಜೆಪಿ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಲಾರಿ ಪಲ್ಟಿ ; ಚಾಲಕನಿಗೆ ಗಂಭೀರ ಗಾಯ
ಈ ವೇಳೆ ಮಧ್ಯಪ್ರವೇಶಿಸಿದ ಆರೆಸ್ಸೆಸ್ ಗಣವೇಷಧಾರಿಗಳು ಹಾಗೂ ಪೊಲೀಸರ ನಡುವೆ ವಾಗ್ವಾದ ತೀವ್ರಗೊಂಡಿದ್ದು, ಪೊಲೀಸರು ಗಣವೇಷಧಾರಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಂಧಿತರಲ್ಲಿ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ, ರಾಜಶೇಖರ ನಿಲಂಗಿ, ಶಿವಕುಮಾರ್ ಜಿ.ಕೆ. ಪಾಟೀಲ್ ತೆಲ್ಕೂರ, ಶಿವಕುಮಾರ್ ಬೋಳಖೇಟ್ಟಿ ಹಾಗೂ ಕಾಶಿನಾಥ್ ನಿಡಗುಂದಾ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.





