ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಕ್ಷಿತಾ ಇಂಟಿಗ್ರೇಟೆಡ್ ರೂರಲ್ & ಅರ್ಬನ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ನಗರದ ಶ್ರೀಯಾನ ಕಿವುಡ್ ಮತ್ತು ಮೂಕ ಮಕ್ಕಳ ವಸತಿ ಶಾಲೆಯಲ್ಲಿ ವಿಕಲಚೇತನ ಮಕ್ಕಳಿಗೆ ದಿನನಿತ್ಯ ಬಳಕೆಯ ವಸ್ತುಗಳ ಕಿಟ್ ವಿತರಣೆ ಮಾಡುವ ಮೂಲಕ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
‘ಕಾರ್ಯಕ್ರಮದಲ್ಲಿ ಆರ್‌ಐಆರ್‌ಯುಡಿಎಸ್ ಸಂಸ್ಥೆಯ ಅಧ್ಯಕ್ಷ ರೇವಣಸಿದ್ದಪ್ಪ ಕಟ್ಟೀಮನಿ ಮಾತನಾಡಿ, ‘ಹೋದ ತಿಂಗಳಲ್ಲಿ ಜಿಲ್ಲೆಯ ಅಫಜಲಪುರ ಮತ್ತು ಜೇವರ್ಗಿ ತಾಲ್ಲೂಕಿನ ಪ್ರವಾಹ ಪೀಡಿತರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದೇವೆ. ಈಗ ವಿಕಲಚೇತನ ಶಾಲಾ ಮಕ್ಕಳಿಗೆ ಹಾಗೂ ನಿರ್ಗತಿಕರಿಗೆ ಪೌಷ್ಟಿಕ ಕಿಟ್ ಮತ್ತು ದಿನ ಬಳಕೆ ವಸ್ತುಗಳ ಕಿಟ್ ವಿತರಿಸುವ ಅಭಿಯಾನ ಆರಂಭಿಸಿದ್ದೇವೆ. ಕನ್ನಡ ರಾಜ್ಯೋತ್ಸವದ ದಿನವೇ ಈ ಸೇವಾ ಕಾರ್ಯಕ್ಕೆ ಚಾಲನೆ ನೀಡಿರುವುದು ಸಂತೋಷದ ವಿಚಾರ,’ ಎಂದು ಹೇಳಿದರು.

ಈ ಅಭಿಯಾನಕ್ಕೆ ದೇಶದ ಪ್ರತಿಷ್ಠಿತ ಆಹಾರ ಉತ್ಪನ್ನ ಮತ್ತು ದಿನ ಬಳಕೆಯ ವಸ್ತು ತಯಾರಿಕಾ ಸಂಸ್ಥೆ ಡಾಬರ್ ಕಂಪನಿ ಸಹಭಾಗಿಯಾಗಿದ್ದು, ಆರ್‌ಐಆರ್‌ಯುಡಿಎಸ್ ಮತ್ತು ಡಾಬರ್ ಕಂಪೆನಿಯ ಸಂಯುಕ್ತ ಆಶ್ರಯದಲ್ಲಿ ಬಡ ವಸತಿ ಶಾಲಾ ಮಕ್ಕಳಿಗೆ ಹಾಗೂ ನಿರ್ಗತಿಕರಿಗೆ ದಿನ ಬಳಕೆ ವಸ್ತುಗಳನ್ನು ಉಚಿತವಾಗಿ ವಿತರಿಸಲಾಯಿತ್ತು ಎಂದು ಸಂಸ್ಥೆಯ ಸಂಯೋಜಕ ಬಾಲಾಜಿ ಎಂ. ಕಾಂಬಳೆ ಈದಿನ.ಕಾಮ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ದಯಾನಂದ ಲಾಡಂತಿ ಕೊಲೆ ಪ್ರಕರಣ : ಆರು ಮಂದಿಗೆ ಜೀವಾವಧಿ ಶಿಕ್ಷೆ
ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಜಯಶ್ರೀ ವಾದಿರಾಜ, ಕಾಂಗ್ರೆಸ್ ಮುಖಂಡ ಅಂಜನಾ ರಾಥೋಡ್, ಶ್ರೀಯಾನ ಕಿವುಡ್ ಮತ್ತು ಮೂಕ ಮಕ್ಕಳ ವಸತಿ ಶಾಲೆಯ ಅಧ್ಯಕ್ಷ ರಾಜಕುಮಾರ, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





