ಕಲಬುರಗಿ | ಹಳೆ ವಿದ್ಯಾರ್ಥಿಗಳ ಕೊಡುಗೆಯಿಂದ ರಾಮತೀರ್ಥ ಶಾಲೆಗೆ ಹೊಸ ಚೆಲುವು

Date:

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾಮತೀರ್ಥ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದು ಮಾದರಿಯ ಶಿಕ್ಷಣ ಕೇಂದ್ರವಾಗಿ ಮಿಂಚುತ್ತಿದ್ದು, ಹಳೆಯ ವಿದ್ಯಾರ್ಥಿಗಳು, ಶಿಕ್ಷಕರು, ಎಸ್‌ಡಿ‌ಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಕೈಜೋಡಿಸಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿರುವುದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಲೆಯ ಮುಖ್ಯಶಿಕ್ಷಕ ಸುರೇಶ್ ಓಂಕಾರ ಅವರ ನೇತೃತ್ವದಲ್ಲಿ ಹಳೆಯ ವಿದ್ಯಾರ್ಥಿಗಳು, ಎಸ್‌ಡಿ‌ಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಒಂದಾಗಿ ಶಾಲೆಯ ಮೂಲಸೌಕರ್ಯ ಸುಧಾರಣೆಗೆ ಮುಂದಾಗಿದ್ದಾರೆ. ಸರ್ಕಾರದ ನೆರವಿಲ್ಲದೆ ಸ್ವಂತ ಖರ್ಚಿನಲ್ಲಿ ಶಾಲೆಯ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿರುವುದು ಈ ಹಳ್ಳಿಯ ಹೆಮ್ಮೆ. ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಬೆಳವಣಿಗೆಯಲ್ಲಿ ಪಾಲ್ಗೊಂಡಿರುವುದು ಹೆಮ್ಮೆಯ ಸಂಗತಿ. ಅವರ ಪ್ರೇರಣೆಯಿಂದ ಇತರ ಹಳ್ಳಿಗಳಿಗೂ ಮಾದರಿ ನಿರ್ಮಾಣವಾಗುತ್ತದೆ ಎಂಬುದು ಶಾಲೆಯ ಮುಖ್ಯಶಿಕ್ಷಕರ ಅಭಿಪ್ರಾಯವಾಗಿದೆ.

ಮುಖ್ಯಶಿಕ್ಷಕ ಸುರೇಶ ಓಂಕಾರ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಳೆಯ ವಿದ್ಯಾರ್ಥಿಗಳಾದ ವಿದ್ಯಾಶ್ರೀ ಸಿದ್ದಣ್ಣ ಬಡಿಗೇರ ₹12,000 ಮೌಲ್ಯದ ಟಿಜೋರಿ(ಅಲ್ಮಾರಿ), ರಮೇಶ್ ವಾರ್ಡನ್ ₹6,000 ಮೌಲ್ಯದ ನೋಟಿಸ್ ಬೋರ್ಡ್, ಲಕ್ಷ್ಮೀ(ಅಂಗನವಾಡಿ ಕಾರ್ಯಕರ್ತೆ) ₹6,000 ಮೌಲ್ಯದ ಟೇಬಲ್ ಫ್ಯಾನ್, ಆರು ಕೊಠಡಿಗಳಿಗೆ ₹3,000 ಮೌಲ್ಯದ ಗಡಿಯಾರಗಳು, ಉಮಾದೇವಿ(ಪಿಯು ಕಾಲೇಜು ಪ್ರಾಧ್ಯಾಪಕಿ) ₹8,000 ಮೌಲ್ಯದ ಡ್ರಮ್‌ಸೆಟ್, ಸುನೀಲ್ ಚವ್ಹಾಣ ₹2,000 ಮೌಲ್ಯದ ಆಟದ ಸಾಮಗ್ರಿಗಳು, ಮೈಸೂರಿನ ನನ್ನ ಸೇಹಿತ ಹರೀಶ್ ₹2,000 ಮೌಲ್ಯದ ಆಟದ ಸಾಮಗ್ರಿಗಳು, ಹಳೆಯ ವಿದ್ಯಾರ್ಥಿಗಳ ಬಳಗ ₹19,600 ಮೌಲ್ಯದ ಮೈಕ್‌ಸೆಟ್, ಗಂಗಾಧರ್ 50 ತಟ್ಟೆಗಳು, ನಾಗಣ್ಣ ಗೌಡ ಮಾಲಿಪಾಟೀಲ್ ₹4,000 ಮೌಲ್ಯದ ಗ್ರೀನ್‌ಬೋರ್ಡ್, ಅತಿಥಿ ಶಿಕ್ಷಕರಾದ ಅಂಬಿಕಾ, ಭಾಗ್ಯಲಕ್ಷ್ಮೀ, ಆರತಿಯವರು ತಮ್ಮ ಸ್ವಂತ ಖರ್ಚಿನಲ್ಲಿ ₹18,000 ವೆಚ್ಚ ಮಾಡಿ ಶಾಲೆಯ ಗೋಡೆಗಳಿಗೆ ಬಣ್ಣ ಹಚ್ಚಿಸಿದ್ದಾರೆ. ಎಸ್‌ಡಿ‌ಎಂಸಿ ಸದಸ್ಯ ಲಕ್ಷ್ಮಿಕಾಂತ ರೆಡ್ಡಿ(ಪೊಲೀಸ್ ಪಾಟೀಲ್) ಸ್ವಂತ ಹಣದಿಂದ ₹22,000 ಮೌಲ್ಯದ ನಾಮಫಲಕ ಮತ್ತು ಶಾಲಾ ಆವರಣದಲ್ಲಿ 20 ಟ್ರಾಕ್ಟರ್ ಮರಳು ಹಾಕಿಸಿದ್ದಾರೆ. ಎಸ್‌ಡಿಎಂಸಿ ಸದಸ್ಯೆ ಶ್ರೀದೇವಿ 10 ಕುರ್ಚಿಗಳನ್ನು ನೀಡಿದ್ದಾರೆ. ಗ್ರಾಮಸ್ಥ ಐಯ್ಯಪ್ಪ ತಾತಳಗೇರ ಅವರು ಶಾಲಾ ಮಕ್ಕಳಿಗೆ ₹25,000 ಮೌಲ್ಯದ ನಲಿ-ಕಲಿ ಕುರ್ಚಿಗಳನ್ನು ಕೊಡಿಸುವ ಭರವಸೆ ನೀಡಿದ್ದಾರೆ” ಎಂದು ಮಾಹಿತಿ ಹಂಚಿಕೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ರಾಮತೀರ್ಥ ಶಾಲೆ

ಹಳೆಯ ವಿದ್ಯಾರ್ಥಿನಿ ವಿದ್ಯಾಶ್ರೀ ಸಿದ್ದಣ್ಣ ಬಡಿಗೇರ ಈ ದಿನ.ಕಾಮ್ ಜತೆಗೆ ಮಾತನಾಡಿ, “ನಾವು ಓದುತ್ತಿದ್ದಾಗ ಶಾಲೆಯ ಸೌಲಭ್ಯಗಳು ತುಂಬಾ ಕಡಿಮೆಯಿದ್ದವು. ಇಂದು ನಾನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಕಲಿತ ಶಾಲೆಯ ಹಳೆಯ ಟಿಜೋರಿ ಮುರಿದಿರುವುದನ್ನು ನೋಡಿ ಹೊಸ ಟಿಜೋರಿ ನೀಡಿದ್ದೇನೆ. ಮಕ್ಕಳು ಉತ್ತಮ ವಾತಾವರಣದಲ್ಲಿ ಕಲಿಯಬೇಕು ಎಂಬುದು ನನ್ನ ಆಶಯ ಮತ್ತು ನಾನು ಕಲಿತ ಸ್ಥಳಕ್ಕೂ ಕಾಣಿಕೆ ನೀಡುವುದು ನನ್ನ ಕರ್ತವ್ಯ” ಎಂದು ಹೇಳಿದರು.

ರಾಮತೀರ್ಥ ಶಾಲೆಗೆ ಅಲುಮ್ನಿಗಳ ಕೊಡುಗೆ

ಹಳೆಯ ವಿದ್ಯಾರ್ಥಿ ರಮೇಶ್ ಪ್ರಸ್ತುತ ಒಬಿಸಿ ಹಾಸ್ಟೆಲ್‌ನಲ್ಲಿ ವಾರ್ಡನ್‌ ಆಗಿರುವ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾನು ಇದೇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿ. ಕ್ರೀಡೆಯಲ್ಲಿ ಆಸಕ್ತಿ ಇತ್ತು. ಈಗ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದೇನೆ. ₹5,000 ಮೌಲ್ಯದ ಕಾಣಿಕೆ ನೀಡಿದ್ದೇನೆ. ನಮ್ಮ ಅಣ್ಣನ ಮಕ್ಕಳು ಇದೇ ಶಾಲೆಯಲ್ಲಿ ಓದುತ್ತಿದ್ದಾರೆ. ಎಲ್ಲ ಮಕ್ಕಳಿಗೂ ಇದರ ಪ್ರಯೋಜನವಾಗಲಿ ಎಂಬುದು ನನ್ನ ಆಶಯವಾಗಿದೆ” ಎಂದು ಹೇಳಿದರು.

ಇದನ್ನೂ ಓದಿದ್ದೀರಾ? ಭಾರೀ ಮಳೆ | ನೆಲಕಚ್ಚಿದ ಮೆಕ್ಕೆಜೋಳ ಇಳುವರಿ: ನಷ್ಟದಲ್ಲಿರುವ ರೈತರನ್ನು ಮೇಲೆತ್ತುವವರು ಯಾರು?

ರಾಮತೀರ್ಥ ಶಾಲೆ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಒಗ್ಗಟ್ಟಿನ ಶಕ್ತಿ ಈ ಶಾಲೆಗೆ ಹೊಸ ರೂಪ ನೀಡಿದೆ.
ಸರ್ಕಾರದ ನಿರೀಕ್ಷೆಗಿಂತ ಜನಶಕ್ತಿ ದೊಡ್ಡದು ಎಂಬುದನ್ನು ಈ ಹಳ್ಳಿ ಸಾಬೀತುಪಡಿಸಿದೆ. ಸರ್ಕಾರದ ನೆರವಿಲ್ಲದಿದ್ದರೂ ಹಳ್ಳಿಯ ಜನ, ಹಳೆಯ ವಿದ್ಯಾರ್ಥಿಗಳ ಶ್ರಮವೇ ಶಾಲೆಯ ಬೆಳಕು. ರಾಮತೀರ್ಥ ಶಾಲೆಯ ಈ ಪ್ರೇರಣಾದಾಯಕ ಬೆಳವಣಿಗೆ ಇತರ ಹಳ್ಳಿಗಳ ಶಾಲೆಗಳಿಗೂ ಸ್ಫೂರ್ತಿಯಾಗಲಿ. ಎಲ್ಲ ಸರ್ಕಾರಿ ಶಾಲೆಗಳು ಮಾದರಿ ಶಾಲೆಗಳಾಗಲಿ ಎಂಬುದು ಸ್ಥಳೀಯರ ಆಶಯವಾಗಿದೆ.

WhatsApp Image 2024 11 08 at 12.18.37 667ed234 e1731048718511
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...