ಕಲಬುರಗಿ | ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಚುನಾವಣೆ; ಶಾಲಾ ಸಂಸತ್ ರಚನೆ

Date:

ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಚುನಾವಣೆ ನಡೆಸುವ ಮೂಲಕ 2024-25ನೇ ಶೈಕಣಿಕ ಸಾಲಿನ ಶಾಲಾ ಸಂಸತ್ ರಚನೆ ಮಾಡಿದರು.

ಚುನಾವಣಾ ಅಧಿಸೂಚನೆ ಹೊರಡಿಸಿ ನಾಮಪತ್ರ ಸಲ್ಲಿಸುವುದು, ವಾಪಸ್ ತೆಗೆದುಕೊಳ್ಳುವುದು, ಅಣುಕು ಮತದಾನ, ತೋರು ಬೆರಳಿಗೆ ಶಾಹಿ ಹಚ್ಚುವುದು ಸೇರಿದಂತೆ ಚುನಾವಣೆಯಲ್ಲಿ ಅನುಸರಿಸುವ ಬಹುತೇಕ ವಿಧಾನಗಳನ್ನು ಅನುಸರಿಸಿದರು. ಸರದಿ ಸಾಲಿನಲ್ಲಿ ನಿಂತು ವಿದ್ಯಾರ್ಥಿನಿಯರು ಇವಿಎಂ ಆ್ಯಪ್ ಮೂಲಕ ಮತ ಚಲಾಯಿಸಿದರು. ಹೊಸ ಮತದಾರರು(6ನೇ ತರಗತಿ) ಉತ್ಸಾಹದಿಂದ ಮತದಾನ ಮಾಡುವುದು ಕಂಡುಬಂದಿತು.‌

ವಸತಿ ಶಾಲೆಯಲ್ಲಿ ಚುನಾವಣೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಾಚಾರ್ಯ ಡಾ ರಾಜಶೇಖರ ಮಾಂಗ್ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಶಿವಾನಂದ ಬೀಳಗಿ, ನಾಗಶೆಟ್ಟಿ, ಅಶೋಕ, ತುಕಾರಾಮ, ಮಹಾನಂದ, ರೇಖಾ, ಸಾಲೇಹ ಫರೀನ್, ಶಿವಕುಮಾರ ಹಿರೇಮಠ, ಮಹೇಶ ಎಸ್ ಜಿ, ಬಸವರಾಜ, ಭಾಗ್ಯ ಜ್ಯೋತಿ ಸೇರಿದಂತೆ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ನಂತರ ಮತ ಎಣಿಕೆ ನಡೆದು ಮಂತ್ರಿಮಂಡಲ ರಚಿಸಿದರು.

ವಸತಿ ಶಾಲೆಯಲ್ಲಿ ಚುನಾವಣೆ
ಕೋಡ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಚುನಾವಣೆ

ಈ ಸುದ್ದಿ ಓದಿದ್ದೀರಾ ಹಾವೇರಿ | ಲಿಡ್ಕರ್ ನಿಗಮದಿಂದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಲು ದಸಂಸ ಒತ್ತಾಯ

ಮಂತ್ರಿ ಮಂಡಲ ವಿವರ:

  • ಗೀತಾ ಭೀಮಸಿಂಗ್ – ಪ್ರಧಾನಿ,
  • ಅನುರಾಧಾ, ಪ್ರಿಯಾ – ಶಿಕ್ಷಣ ಮಂತ್ರಿ
  • ನಾವಿನ್ಯ ಸೂರ್ಯಕಾಂತ – ಆರೋಗ್ಯ ಮಂತ್ರಿ
  • ರಂಜಿತಾ ವೆಂಕಟೇಶ, ಪ್ರಜ್ಞಾ ಪರಮೇಶ್ವರ – ಆಹಾರ ಮಂತ್ರಿಗಳು
  • ಕೀರ್ತಿ ಲೋಕೇಶ್, ಸ್ನೇಹಾ ಅಶೋಕ – ಶಿಸ್ತು ಮತ್ತು ಸ್ವಚ್ಚತಾ ಮಂತ್ರಿಗಳು
  • ಶೃತಿ ಸೂರ್ಯಕಾಂತ, ಐಶಾ ಸಂತೋಷ – ಸಾಂಸ್ಕೃತಿಕ ಮಂತ್ರಿಗಳು
  • ಲಕ್ಷ್ಮೀಬಾಯಿ ಶಿವರಾಮ, ಅನುಶ್ರೀ ನರಸಪ್ಪ – ಕ್ರೀಡಾ ಮಂತ್ರಿಗಳು
  • ಶಾಲಿನಿ ದಶರಥ – ಪರಿಸರ ಮತ್ತು ಅರಣ್ಯ ಮಂತ್ರಿ
  • ಕಾವೇರಿ ತುಕಾರಾಮ – ಪ್ರವಾಸ ಮಂತ್ರಿ
  • ಕರೀನಾ ತುಕಾರಾಮ, ಶಿಲ್ಪಾ ನಾಗೇಂದ್ರಪ್ಪ – ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿಗಳಾಗಿ ನೇಮಕಗೊಂಡರು.
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...