[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಕುರುಬರು ಬಿಜೆಪಿ ಕಾಂಗ್ರೆಸ್ ಸೇರಿದಂತೆ ಇನ್ನಿತರ ರಾಜಕೀಯ ಪಕ್ಷಗಳ ಗುಲಾಮರಲ್ಲ. ನಮ್ಮ ಸಮಾಜದ ಮಹತ್ತರ ಬೇಡಿಕೆ ಗೊಂಡ್ ಪರ್ಯಾಯ ಪದ ʼಕುರುಬʼ ಎಂದು ಪರಿಗಣಿಸಿ ಮಾನವಿಯತೆ ದೃಷ್ಟಿಯಿಂದ ನಮ್ಮ ಸಮಾಜವನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂತಣಿಯ ಪರಮ ಪೂಜ್ಯರಾದ ಸಿದ್ದರಮಾನಂದ ಶ್ರೀಗಳು ಆಗ್ರಹಿಸಿದ್ದಾರೆ.
ಚಿತ್ತಾಪುರ ಪಟ್ಟಣದ ಕನಕ ಭವನದಿಂದ ಪ್ರಾರಂಭವಾದ ಗೊಂಡ್ ಪರ್ಯಾಯ ಪದ ʼಕುರುಬʼ ಎಂದು ಪರಿಗಣಿಸಿ ಎಸ್‌ಟಿ ಪಟ್ಟಿಗೆ ಸೇರಿಸಬೇಕು ಎಂದು ನಡೆಸಿದ ಹೋರಾಟವು ಲಾಡ್ಜಿಂಗ್ ಕ್ರಾಸ್ ಮಾರ್ಗವಾಗಿ ತಹಸೀಲ್ದಾರ್ ಕಛೇರಿಗೆ ತಲುಪಿದ ನಂತರ ಹೋರಾಟವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗೊಂಡ್ ಪರ್ಯಾಯ ಪದದಲ್ಲಿ ಅನೇಕ ಪದಗಳಿವೆ ಅದರಲ್ಲಿ ʼಕುರುಬʼ ಪದ ಒಂದಾಗಿದ್ದು ನಮ್ಮ ಸಮಾಜವನ್ನು 1936ರಲ್ಲಿ ರಾಣಿ ಎಲಿಜಬೆತ್ ಮತ್ತು 1950ರಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಎಸ್‌ಟಿ ಪಟ್ಟಿಯಲ್ಲಿ ಪರಿಗಣಿಸಿದ್ದಾರೆ. ಆದರೆ, ಇಲ್ಲಿನ ಆಡಳಿತ ಪಕ್ಷಗಳು ನಮ್ಮ ಸಮಾಜದವರನ್ನು ಕೇವಲ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸಮಾಜದವರು ಯಾವ ರಾಜಕೀಯ ಪಕ್ಷಗಳ ಗುಲಾಮರಲ್ಲ. ನಮ್ಮ ಸಮಾಜದವರನ್ನು ಮಾನವೀಯತೆ ದೃಷ್ಟಿಯಿಂದ ಎಸ್‌ಟಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದ ಅವರು, ತಹಸೀಲ್ದಾರ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಲಾಡ್ಜಿಂಗ್ ಕ್ರಾಸ್ ಬಳಿ ಸಮಾಜದ ಬಾಂಧವರು ಮಾನವ ಸರಪಳಿ ನಿರ್ಮಿಸಿ ಟಾಯರ್‌ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಗೊಂಡ್ ಪರ್ಯಾಯ ಪದ ʼಕುರುಬʼ ಪದವನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಪ್ರತಿಭಟನೆ ನಡೆಸಿದರು. ಲಾಡ್ಜಿಂಗ್ ಕ್ರಾಸ್ ಹತ್ತಿರ ರಸ್ತೆ ತಡೆ ನಡೆಸಿ, ಕುರಿಗಳನ್ನು ತಂದು ಹೋರಾಟ ಮುಂದುವರಿಸಲು ಸಮಾಜದವರು ವಿಳಂಬ ಮಾಡುತ್ತಿರುವಾಗ ಹೋರಾಟ ಮಾಡಲು ನೀಡಿರುವ ಸಮಯ ಮೀರುತ್ತಿದೆ ಬೇಗನೆ ಹೋರಾಟವು ತಹಸೀಲ್ದಾರ್ ಕಛೇರಿಯತ್ತ ಸಾಗಲಿ ಎಂದು ಪೊಲೀಸರು ತಿಳಿಸಿದಾಗ ನಮ್ಮ ಹಕ್ಕನ್ನು ಪಡೆಯಲು ನಡೆಸಿದ ಸಮಾಜದ ಹೋರಾಟವನ್ನು ಪೊಲೀಸ್ ಇಲಾಖೆ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಪೊಲೀಸ್ ಇಲಾಖೆಯ ವಿರುದ್ಧ ದಿಕ್ಕಾರ ಕೂಗಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಚಿಕ್ಕ ಲಿಂಗ ಬೀರ ದೇವರು ಮಾತನಾಡಿ, ಜಿಲ್ಲಾ ಗೊಂಡ್ ಕುರುಬ ಸಮಾಜದ ಅಧ್ಯಕ್ಷ ಮಹಾಂತೇಶ ಕೌಲಗಿ, ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ತಾಲೂಕ ಅಧ್ಯಕ್ಷ ಬಸವರಾಜ ಪೂಜಾರಿ ಹೊಸಳ್ಳಿ, ತಾಲೂಕ ಕಾರ್ಯದರ್ಶಿ ಮಲ್ಲಿಕಾರ್ಜುನ ಟಿ. ಪೂಜಾರಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಸವರಾಜ್ ಪೂಜಾರಿ ಮೊಗಲಾ, ಪ್ರಭು ಗಂಗಾಣಿ, ಯಲ್ಲಾಲಿಂಗ ಪೂಜಾರಿ, ಜುಮಣ್ಣಾ ಪೂಜಾರಿ, ಸಿದ್ದು ಪೂಜಾರಿ ವಾಡಿ, ಜಗನ್ನಾಥ್ ಪೂಜಾರಿ ಆಲೂರ್, ನಾಗೇಶ್, ಬೀರಲಿಂಗ ಪೂಜಾರಿ, ಭೋಜು ಶೇರಿ, ಬಸವರಾಜ ಪೂಜಾರಿ, ಸಂತೋಷ್ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ಸೇರಿದಂತೆ ಆನೇಕರು ಇದ್ದರು.