ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿ ಡಾ. ಅಂಬೇಡ್ಕರ್ ಕಲಾ, ವಾಣಿಜ್ಯ, ವಿಜ್ಞಾನ ಕಾಲೇಜು ಮತ್ತು ಪಿಜಿ ಸೆಂಟರ್‌ನ ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಂಯುಕ್ತ ಆಶ್ರಯದಲ್ಲಿ “ಮಾನವೀಯ ತುರ್ತುಸ್ಥಿತಿಗಳಲ್ಲಿ ಮಾನಸಿಕ ಆರೋಗ್ಯ” ಎಂಬ ವಿಷಯದ ಕುರಿತು ಶುಕ್ರವಾರ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪೊಲೀಸ್ ಇಲಾಖೆಯ ವೈಜ್ಞಾನಿಕ ಅಧಿಕಾರಿ ಡಾ. ದಿಲೀಪ್ ಕುಮಾರ್ ಎಸ್. ನವಲೆ ಅವರು ಪಾಲ್ಗೊಂಡು ಮಾರ್ಗದರ್ಶನ ನೀಡಿದರು.
ಇದನ್ನೂ ಓದಿ: ಹಸಿ ಬರಗಾಲ ಘೋಷಣೆಗೆ ಆಗ್ರಹಿಸಿ ಅ.13ರಂದು ಕಲಬುರಗಿ ಬಂದ್‌ಗೆ ಕರೆ
ಅವರು ಮಾತನಾಡಿ, “ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ತಮ್ಮಲ್ಲಿ ಜಾಗೃತಿ ಮೂಡಿಸಿಕೊಂಡು ವೃತ್ತಿಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರಯತ್ನಿಸಬೇಕು. ಸಾಮಾಜಿಕ ಮೂಢನಂಬಿಕೆಗಳಿಂದ ದೂರವಿದ್ದು, ಧ್ಯಾನ ಮತ್ತು ಧನಾತ್ಮಕ ಚಿಂತನೆಯ ಮೂಲಕ ಮಾನಸಿಕ ಆರೋಗ್ಯವನ್ನು ಸದೃಢವಾಗಿಡಬಹುದು” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾದ ಸಿದ್ದಪ್ಪ ಎಂ. ಕಾಂತ ಅವರು ಅಧ್ಯಕ್ಷತೆ ವಹಿಸಿದರು. ಐಕ್ಯೂಎಸಿ ಸಂಯೋಜಕರು ಪ್ರಾಸ್ತಾವಿಕ ನುಡಿಯನ್ನು ನೀಡಿದರು, ಡಾ. ವಸಂತ ನಾಶಿ ನಿರೂಪಿಸಿದರು, ಡಾ. ಶಿವಕುಮಾರ್ ವಂದಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಡಾ. ಸುದರ್ಶನ್ ಮದನ್ಕರ್, ಡಾ. ಅರುಣ್ ಜೋಳದಕೂಡ್ಲಿಗಿ, ಡಾ. ಗಾಂಧೀಜಿ ಮಾಳ್ಕೆರೆ, ಡಾ. ಹರ್ಷವರ್ಧನ್, ಡಾ. ನಿರ್ಮಲ ಸಿರ್ಗಾಪುರ್, ಪಂಡಿತ್ ಮದಗುಣಕಿ ಹಾಗೂ ಅರುಣ್ ಸಂಗಾವಿ ಉಪಸ್ಥಿತರಿದ್ದರು.





