ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಕಾರ್ಯದಲ್ಲಿ ಕರ್ತವ್ಯ ಲೋಪವೆಸಗಿರುವ ಹಿನ್ನೆಲೆ ಶಿಕ್ಷಕ ಅಮಾನತು ಆಗಿದ್ದಾರೆ.
ಕಲಬುರಗಿ ತಾಲ್ಲೂನ ಹೂಡಾ (ಎಂ) ಗ್ರಾಮದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಮಹ್ಮದ್ ರಫೀಕ್ ಅವರನ್ನು ಅಮಾನತುಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಗುರುವಾರ ಆದೇಶಿಸಿದ್ದಾರೆ.
ಸದರಿ ಶಿಕ್ಷಕನನ್ನು ಸೋಮಪಲ್ಲಿ ಗ್ರಾಮಕ್ಕೆ ಸಮೀಕ್ಷೆ ಕೆಲಸಕ್ಕೆ ನಿಯೋಜಿಸಲಾಗತ್ತು, ಆದರೆ, ಅವರು ವಹಿಸಿದ ಕೆಲಸದಲ್ಲಿ ಆಸಕ್ತಿ ತೋರದೆ, ಕಳೆದ ನಾಲ್ಕೆದು ದಿನಗಳಿಂದ ಗೈರಾಗಿದ್ದರು. ಮೇಲಾಧಿಕಾರಿಗಳು ಕರೆ ಮಾಡಿ ತಿಳಿಸಿದ ಮೇಲೂ ಸ್ಪಂದಿಸದೆ ಇರುವದರಿಂದ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಬೀದರ್ | ಸಚಿವ ಪ್ರಿಯಾಂಕ್ ಖರ್ಗೆ ಪರವಾಗಿ ಪ್ರತಿಭಟನೆ; ಆರ್‌ಎಸ್ಎಸ್ ವಿರುದ್ಧ ಆಕ್ರೋಶ





