ಆಳಂದ ತಾಲೂಕಿನ ಜಮಗಾ(ಆರ್) ಗ್ರಾಮದಲ್ಲಿ ರಮಾಬಾಯಿ ಅಂಬೇಡ್ಕರ್ ಅವರ 128ನೇ ಜಯಂತೋತ್ಸವ ಆಚರಣೆ ಅದ್ದೂರಿಯಾಗಿ ನಡೆಯಿತು.
ಉಪನ್ಯಾಸಕ ಬಸವರಾಜ ಎಸ್. ಶ್ರೀಂಗೇರಿ ಅವರು ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬೆನ್ನ ಹಿಂದಿನ ಬೆಳಕಾಗಿದ ರಮಾಬಾಯಿ ಅವರ ತ್ಯಾಗಮಯಿ ಜೀವನ ಸಮಾಜಕ್ಕೆ ಆದರ್ಶವಾಗಿದೆ. ಮಹಿಳೆಯರು ರಮಾಬಾಯಿ ಅವರ ಸಂಘರ್ಷಮಯ ಜೀವನವನ್ನು ಅನುಸರಿಸಬೇಕುʼ ಎಂದರು.
ʼಗ್ರಾಮದಲ್ಲಿ ಮಕ್ಕಳನ್ನು ನೈತಿಕ ಮೌಲ್ಯಗಳನ್ನು ಬಿತ್ತುವ ಉದ್ದೇಶದಿಂದ ಅಶೋಕ ತರುಣ ಸಂಘ ಹಾಗೂ ಅಶೋಕ್ ತಳಕೇರಿ ದಂಪತಿ ಶ್ರಮಿಸುತ್ತಿರುವುದು ಶ್ಲಾಘನೀಯ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ರಮಾಬಾಯಿ ತಾಯಿಯವರ ವಿಚಾರಧಾರೆ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕುʼ ಎಂದು ತಿಳಿಸಿದರು.
ಇದನ್ನೂ ಓದಿ : ಬೀದರ್ | ಯುಜಿಸಿ ನಿಯಮಾವಳಿ ಶೀಘ್ರ ಜಾರಿಗೆ ಆಗ್ರಹಿಸಿ ದಸಂಸ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಮುಖಂಡರಾದ ಭೀಮಾಶಂಕರ ತಳಕೇರಿ, ಅಶೋಕ್ ತಳಕೇರಿ, ದಿಗಂಬರ ಚಿತ್ತಕೊಟೆ, ಬಸವರಾಜ ಕಾಂಬಳೆ, ಮಾರುತಿ ಕಾಂಬಳೆ, ಮಸಪ್ಪ ಚಿತ್ತಕೊಟೆ, ಸಿದ್ರಾಮ ಕಾಂಬಳೆ, ಪ್ರಕಾಶ್ ಶಿವನಗೊಳ, ಸಿದ್ಧಾರ್ಥ ತಳಕೇರಿ ಮತ್ತಿತರರಿದ್ದರು. ಆಶಿಷ್ ಕಾಂಬಳೆ ನಿರೂಪಿಸಿದರು, ಪ್ರಜ್ಞಾ ಕಾಂಬಳೆ ವಂದಿಸಿದರು.





