ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಎರಡು ಮದ್ಯದ ಅಂಗಡಿಗಳಲ್ಲಿ ಕಳ್ಳತನ ನಡೆದಿರುವ ಘಟನೆ ಮಂಗಳವಾರ ನಸುಕಿನ ಜಾವದಲ್ಲಿ ಬೆಳಕಿಗೆ ಬಂದಿದೆ. ಕಳ್ಳರು ಅಂಗಡಿಗಳ ಶಟರ್‌ಗಳ ಕೀಲಿ ಮುರಿದು ಒಟ್ಟು ₹2.11 ಲಕ್ಷ ನಗದು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಬಸ್ ನಿಲ್ದಾಣದ ಪಕ್ಕದಲ್ಲಿರುವ ಎಸ್.ಆರ್. ಪಾಟೀಲ ಅವರಿಗೆ ಸೇರಿದ ಮದ್ಯದ ಅಂಗಡಿಯಿಂದ ₹1.30 ಲಕ್ಷ ನಗದು ಹಣವನ್ನು ಕಳ್ಳರು ಅಪಹರಿಸಿದ್ದಾರೆ. ಇದೇ ವೇಳೆ ಎಸ್‌ಬಿಐ ಬ್ಯಾಂಕ್ ಸಮೀಪದಲ್ಲಿರುವ ನಾಗಯ್ಯ ಕೋಟಕಿ ಅವರಿಗೆ ಸೇರಿದ ಮದ್ಯದ ಅಂಗಡಿಯಿಂದ ₹81 ಸಾವಿರ ನಗದು ಹಣ ಕಳ್ಳತನವಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಘಟನೆ ಸಂಬಂಧ ಅಂಗಡಿಗಳ ಶಟರ್ ಎತ್ತಿ ಒಳನುಗ್ಗುತ್ತಿರುವ ನಾಲ್ವರು ಕಳ್ಳರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ಜನರಿಗೆ ಘನತೆಯ ಬದುಕು ನೀಡಿದ ಸಂವಿಧಾನ: ವಿಭೂತಿಹಳ್ಳಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ
ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.





