ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಬೇಸಿಗೆ ಆರಂಭವಾಗುವುದರಿಂದ ಗಂಡೋರಿ ನಾಲಾ ಯೋಜನೆಯ ಕಾಲುವೆಗಳ ಮೂಲಕ ರೈತರ ಜಮೀನುಗಳಿಗೆ ನೀರು ಹರಿಸಬೇಕು. ಮುಖ್ಯ ಕಾಲವೆ, ಮರಿ ಕಾಲುವೆ ಮುಖ್ಯ ಗೇಟ್ ಮತ್ತು ಸಣ್ಣ ಗೇಟ್ ಒಡೆದ ಕಾಲುವೆಗಳನ್ನು ದುರಸ್ತಿಗೊಳಿಸಬೇಕು. ಕಾಲುವೆಗಳ ಹೂಳು ತೆಗೆಯಬೇಕು ಹಾಗೂ ಅನ್ನದಾತರ ಹಿತದೃಷ್ಟಿಯಿಂದ ಕಾಲುವೆಯಲ್ಲಿನ ಗಿಡಗಂಟಿಗಳನ್ನು ಕತ್ತರಿಸಲು ಸರ್ಕಾರದಿಂದ ಹಣ ಬಿಡುಗಡೆ ಮಾಡಿ ಬೆಸಿಗೆ ಕಾಲದಲ್ಲಿ ಕಾಲುವೆಗಳು ಮೂಲಕ ನಿರು ಹರಿಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ರೈತ ಸೈನ್ಯದಿಂದ ಕಂದಗೂಳ ಕ್ರಾಸ್ ಹತ್ತಿರ ರಸ್ತೆತಡೆ ಚಳವಳಿ ನಡೆಸಿ ಕಾಳಗಿ ತಹಶೀಲ್ದಾರರ ಮುಖಾಂತರ ಉಪಮುಖ್ಯಮಂತ್ರಿಗಳು ಹಾಗೂ ಬೃಹತ್ ನೀರಾವರಿ ಸಚಿವ ಡಿ ಕೆ ಶಿವಕುಮಾರ್, ಸಣ್ಣ ನಿರಾವಾರಿ ಮತ್ತು ವಿಜ್ಞಾನ ತಂತ್ರಜ್ಞಾನ ಇಲಾಖೆ ಸಚಿವ ಎಸ್ ಎನ್ ಬೋಸರಾಜು, ಕರ್ನಾಟಕ ನೀರಾವರಿ ನಿಗಮ ನಿಯಮಿತ ಕಚೇರಿ ಕಲಬುರಗಿ ಜಿಲ್ಲಾ ಸೂಪರಿಂಟೆಂಡೆಂಟ್ ಎಂಜಿನಿಯರ್, ಸಣ್ಣ ನಿರಾವಾರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಗಂಡೋರಿ ನಾಲಾ ಯೋಜನೆ ಉಪ ವಿಭಾಗ ಕಾರ್ಯನಿರವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
“ಕಲ್ಯಾಣ ಕರ್ನಾಟಕ ಭಾಗದ ತೊಗರಿ ನಾಡಿನಲ್ಲಿ ತೊಗರಿ ಬೆಳೆ ವಿಶ್ವದಲ್ಲಿ ಪ್ರಖ್ಯಾತಿ ಪಡೆದಿದೆ. 23 ಪ್ರತಿಶತ ಪ್ರೊಟೀನ್ ಅಂಶವನ್ನು ಹೊಂದಿದೆ. ಆದರೆ ತೊಗರಿ ನಾಡಿನ ರೈತರ ವಾಣಿಜ್ಯದ ಬೆಳೆಯಾಗಿರುವ ಉದ್ದು, ಹೆಸರು, ಸೋಯಾಬಿನ್, ತೊಗರಿ ಬೆಳೆಗಳು ಅತಿವೃಷ್ಟಿಗೆ ಹಾನಿಯಾಯಿತು. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದು, ಇದೀಗ ಉಳಿದಿರುವ ಬೆಳೆಗೆ ಬೆಂಬಲ ಬೆಲೆಯೂ ಇಲ್ಲದೆ ಮಾರುಕಟ್ಟೆ ನೆಲಕಚ್ಚಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸಾಲಭಾದೆ ತಾಳಲಾರದೆ ಅನ್ನದಾತರು ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕಲಬುರಗಿ ಜಿಲ್ಲೆಯಲ್ಲಿ ನೀರಾವಾರಿ ಪ್ರದೇಶ ಅಭಿವೃದ್ಧಿ ಹೊಂದಲು ಸಾಕಷ್ಟು ನದಿಗಳು ಇದ್ದರೂ ಸಹ ಯಾವುದೇ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ನೀರಾವಾರಿ ಬೆಳೆಗಳನ್ನು ಬೆಳೆಯಲು ರೈತರು ಅತುರಪಡುತ್ತಿರುವ ಸಂದರ್ಭದಲ್ಲಿ ಗಂಡೋರಿ ನಾಲಾ ಯೋಜನೆ ಮೇಲೆ ಅವಲಂಬಿತರಾದ ಅನ್ನದಾತರಿಗೆ ಅನ್ಯಾಯವಾಗುತ್ತಿದೆ. ಕಾಲುವೆಗಳ ಮೂಲಕ ರೈತರಿಗೆ ಅನೂಕುಲವಾಗುವಂತೆ ರೈತರ ಹಿತ ಕಾಪಾಡುವ ಸರ್ಕಾರದ ಮೊದಲ ಹೆಜ್ಜೆಯಾಗಿದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಕಾಲುವೆಗಳು ಮೂಲಕ ನಿರು ಹರಿಸಬೇಕು” ಎಂದು ಅನ್ನದಾತರು ಒತ್ತಾಯಿಸಿದ್ದಾರೆ.
“ಗಂಡೋರಿ ನಾಲಾ ಯೋಜನೆ 1978ರಲ್ಲಿ ಅನುಮೋದನೆ ನೀಡಿದೆ. 2009ರಲ್ಲಿ ಈ ಯೋಜನೆ ಮುಕ್ತಾಯವಾಗಿದೆ. ಗಂಡೋರಿ ನಾಲಾ, ಬೆಳಕೊಟಾ ಸೇರಿದಂತೆ ಒಟ್ಟು ಭೂಮಿ 11650 ಹೆಕ್ಟೇರ್ ಪ್ರದೇಶಕ್ಕೆ ನಿರಾವಾರಿ ಸೌಲಭ್ಯವನ್ನು ಎಡದಂಡೆ 90 ಕಿಮೀ ಮತ್ತು ಬಲದಂಡೆ 7 ಕಿಮೀ ಪ್ರದೇಶ ವ್ಯಾಪ್ತಿಯನ್ನು ಹೊಂದಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅಂಜುಮನ್ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
“ಬೆಣ್ಣೆ ತೊರಾ ಆಣೆಕಟ್ಟು ನಾಲಾ ಪ್ರಾಜೆಕ್ಟ್, ಒಡೆದು ಹಾಳಾದ ಮುಖ್ಯ ಕಾಲುವೆಗಳು, ಮರಿ ಕಾಲುವೆಗಳು, ತುಕ್ಕು ಹಿಡಿದ ಮುಖ್ಯ ಗೇಟ್‌ಗಳು ಸಣ್ಣ ಪ್ರಮಾಣದ ಗೇಟ್‌ಗಳನ್ನು ದುರಸ್ತಿ ಮಾಡಿಸಬೇಕು ಮತ್ತು ಕಾಲುವೆಗಳಲ್ಲಿ ಬೆಳೆದಿರುವ ಹುಲ್ಲು, ಗಿಡಗಂಟಿಗಳನ್ನು ತೆರವುಗೊಳಿಸಿ ಹೂಳು ತೆಗೆಯಬೇಕು. ಬೇಸಿಗೆ ಸಮಯದಲ್ಲಿ ರೈತರಿಗೆ ಕಾಲುವೆಗಳು ಮುಖಾಂತರ ನೀರು ಹರಿಸಬೇಕು” ಎಂದು ಒತ್ತಾಯಿಸಿದರು.





