ತೊಗರಿ ಬೆಳೆದ ರೈತರು ಪ್ರತಿ ಕ್ವಿಂಟಲ್ ₹12,500 ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಮಂಗಳವಾರ ಎಪಿಎಂಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ, ಕಲಬುರಗಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತ ಮುಖಂಡರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಭಾಗದ ತೊಗರಿ ‘ಜಿಐ’ ಟ್ಯಾಗ್ ಪಡೆದಿದ್ದು, ಉತ್ತಮ ಗುಣಮಟ್ಟದ ಬೆಳೆ ದೇಶ–ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ರೈತರು ಬೆಂಬಲ ಬೆಲೆ ನೀಡದಿರುವುದನ್ನು ಸರ್ಕಾರಿ ನಿರ್ಲಕ್ಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಪ್ರಮುಖ ಬೇಡಿಕೆಗಳಾದ ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು, ₹12,500 ಬೆಂಬಲ ಬೆಲೆ ನೀಡಬೇಕು, ರಾಜ್ಯ ಮತ್ತು ಕೇಂದ್ರ ಪ್ರೋತ್ಸಾಹ ಧನ ಒಂದು ಸಾವಿರ ರೂಪಾಯಿ ನೀಡಬೇಕು, ವಿದೇಶಿ ತೊಗರಿಗೆ ಶೇ.50 ಆಮದು ಶುಲ್ಕ, ತುರ್ತು ಖರೀದಿ ಕೇಂದ್ರ ಸ್ಥಾಪಿಸಬೇಕೆಂದು, ಬೆಳೆ ವಿಮೆ ಜಾರಿ ಮಾಡಬೇಕು, ರಾಷ್ಟ್ರೀಯೀಕೃತ ಬ್ಯಾಂಕ್ ಸಾಲ ಮನ್ನಾ ಮಾಡುಬೇಕು, ವಿಬಿ ಜಿರಾಮ್ ಜಿ ಕಾಯ್ದೆ ಜಾರಿಗೊಳಿಸುವುದು ಖಂಡನೀಯ ಎಂದು ಹೇಳಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಲುಂಬಿನಿ ವನದಲ್ಲಿ ದೆವ್ವದ ಸುಳ್ಳು ವದಂತಿ: ಅಪಪ್ರಚಾರಕರ ವಿರುದ್ಧ ಕಾನೂನು ಕ್ರಮಕ್ಕೆ ದಸಂಸ ಒತ್ತಾಯ
ಪ್ರತಿಭಟನೆಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಮಹೇಶ್ ಎಸ್.ಬಿ., ಭೀಮಾಶಂಕರ್ ಮಾಡ್ಯಾಳ, ಮಹಾಂತೇಶ್ ಜಮಾದಾರ್, ಮೌಲಾ ಮುಲ್ಲಾ, ಉಮಾಪತಿ ಪಾಟೀಲ್, ಕರೆಪ್ಪ ಕರಗೊಂಡ್, ಸಿದ್ದು ಎಸ್.ಎಲ್., ವಿಠಲ ಮಾಕಾ ಭಾಗವಹಿಸಿದ್ದರು.





