ತಾಲೂಕಿನ ಹೇರೂರ(ಕೆ) ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಭೀಕರ ಅಗ್ನಿ ಅವಘಡ ಸಂಭವಿಸಿ ರೈತನೊಬ್ಬರ ಐದು ಎಕರೆ ಕಬ್ಬಿನ ತೋಟ ಬೆಂಕಿಗಾಹುತಿಯಾದ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.
ಗ್ರಾಮದ ರೈತ ರೇವಣಸಿದ್ದಪ್ಪ ಸಿದ್ದಣ್ಣ ಕುಂಬಾರ ಅವರಿಗೆ ಸೇರಿದ ತೋಟದಲ್ಲಿ ಸಂಭವಿಸಿದ ಈ ಅವಘಡದಲ್ಲಿ ಒಂದು ಎಕರೆಯಲ್ಲಿದ್ದ ಸುಮಾರು 10 ಟನ್ ಕಬ್ಬು ಸಂಪೂರ್ಣವಾಗಿ ನಾಶವಾಗಿದೆ. ಜೊತೆಗೆ ಐದು ಎಕರೆ ವ್ಯಾಪ್ತಿಯಲ್ಲಿ ಅಳವಡಿಸಲಾಗಿದ್ದ ಕೃಷಿ ಡ್ರಿಪ್ ವ್ಯವಸ್ಥೆ, ಲ್ಯಾಟ್ರಲ್, ಸ್ಪ್ರಿಂಕ್ಲರ್ ಪೈಪ್‌ಗಳು ಹಾಗೂ ಸೋಲಾರ್ ಬೇಲಿ ಬೆಂಕಿಗೆ ಆಹುತಿಯಾಗಿದ್ದು, ಅಂದಾಜು 6 ಲಕ್ಷ ರೂ. ಮೌಲ್ಯದ ಕೃಷಿ ಪರಿಕರಗಳು ನಾಶವಾಗಿವೆ.
ಹೊಲದಲ್ಲಿರುವ ವಿದ್ಯುತ್ ಕಂಬಗಳು ಹಾಗೂ ಜೋತುಬಿದ್ದ ವೈರ್‌ಗಳನ್ನು ಸರಿಪಡಿಸುವಂತೆ ಹೆಬ್ಬಾಳ ಕೆಇಬಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ರೈತ ರೇವಣಸಿದ್ದಪ್ಪ ಕುಂಬಾರ ಆರೋಪಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎಂದು ಅವರು ಅಳಲನ್ನು ತೋಡಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಆಸ್ತಿ ಹಂಚಿಕೆ ವಿವಾದ; ಚಾಕುವಿನಿಂದ ಇರಿದು ವ್ಯಕ್ತಿಯ ಹತ್ಯೆ
ಘಟನೆಯ ಮಾಹಿತಿ ಪಡೆದ ಸ್ಥಳೀಯರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





