ಕಲಬುರಗಿ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸುನಿಲ್ ಮಹಾಲಕ್ಷ್ಮಿ ಲೇಔಟ್‌ಗೆ ಬಂದಿದ್ದ ವೇಳೆ ಉಮೇಶ್ ಯಳವಂತಿ ಎಂಬಾತ ಸುನಿಲ್‌ನನ್ನು ಅಡ್ಡಗಟ್ಟಿದ್ದು, ʼನಮ್ಮ ಏರಿಯಾಗೆ ಯಾಕೆ ಬಂದಿರುವುದುʼ ಎಂದು ಪ್ರಶ್ನೆ ಮಾಡಿದ್ದ. ಈ ನಡುವೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಈ ವೇಳೆ ಸಿಟ್ಟಿಗೆದ್ದ ಸುನಿಲ್ ತನ್ನ ಬಳಿ ಇದ್ದ ಗನ್‌ನಿಂದ ಉಮೇಶ್ ಮೇಲೆ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ. ಸುನಿಲ್ ಹಾರಿಸಿದ ಗುಂಡು ಗೋಡೆಗೆ ತಗುಲಿದ ಪರಿಣಾಮ ಕೂದಲೆಳೆ ಅಂತರದಲ್ಲಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.
ಈ ಸುದ್ದಿ ಓದಿದ್ದೀರಾ? ಹಾಸನ | ಗ್ರ್ಯಾನೈಟ್ ಉದ್ಯಮಿ ಹತ್ಯೆ ಪ್ರಕರಣ; 143 ಮಂದಿ ಆರೋಪಿಗಳ ಬಂಧನ
ಘಟನೆ ಸಂಬಂಧ ಸದ್ಯ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಂಡಿನ ದಾಳಿ ಮಾಡಿದ ಸುನಿಲ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸುನಿಲ್ ಬಳಿ ಗನ್ ಹೇಗೆ ಬಂತು, ಪರವಾನಗಿ ಇದೆಯೇ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.




