ದೇವರಾಜ್ ಮಾಲಿ ಪಾಟೀಲ್ ಪಿಯು ಕಾಲೇಜು ಹಾಗೂ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಗೆ ಮಂಗಳವಾರ ರಾತ್ರಿ ದುಷ್ಕರ್ಮಿಗಳು ನುಗ್ಗಿ ಪೀಠೋಪಕರಣಗಳು ಧ್ವಂಸಗೊಳಿಸಿರುವುದು ತಿಳಿದು ಬಂದಿದೆ.
ಕಾಳಗಿ ಪಟ್ಟಣದ ಭರತನೂರ ರಸ್ತೆ ಮಾರ್ಗದಲ್ಲಿರುವ ಅಂಬಾ ಭವಾನಿ ದೇವಸ್ಥಾನ ಸಮೀಪದ ಡಿ ಎಮ್ ಪಟೀಲ್ ಅವರ ಶಾಲೆಯ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಕಿಟಕಿಗಳ ಗಾಜುಗಳನ್ನು ಒಡೆದು, ಕಂಪ್ಯೂಟರ್‌ಗಳು ಹಾಗೂ ಪ್ರಿಂಟರ್‌ಗೆ ಹಾನಿ ಮಾಡಿದ್ದಾರೆ. ಅಲ್ಲದೆ ಶೌಚಾಲಯದ ಬಾಗಿಲುಗಳು ಹಾಗೂ ವಿದ್ಯುತ್ ಸ್ವಿಚ್ ಬೋರ್ಡ್‌ಗಳನ್ನು ಕಿತ್ತು ಹಾಕಿರುವುದು ಕಂಡು ಬಂದಿದೆ. ಈ ಘಟನೆಯಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಪೀಠೋಪಕರಣಗಳು ಹಾಗೂ ವಸ್ತುಗಳು ಹಾನಿಗೊಳಗಾಗಿವೆ ಎಂದು ಅಂದಾಜಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಕೇಂದ್ರ ಕಾರಾಗೃಹದೊಳಗೆ ಸ್ಮಾರ್ಟ್‌ಫೋನ್ ಎಸೆಯಲು ಯತ್ನ: ಮೂವರ ಬಂಧನ
ಘಟನೆಯ ಮಾಹಿತಿ ಪಡೆದ ಕಾಳಗಿ ಪೊಲೀಸ್ ಠಾಣೆಯ ಪಿಎಸ್‌ಐ ತಿಮ್ಮಯ್ಯ ಬಿಕೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ತಿಳಿದು ಬಂದಿದೆ.





