ಪ್ರಸ್ತುತ ದಿನದಲ್ಲಿ ಸಮಾಜ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಬದಲಾದ ಕಾನೂನು-ಕಾಯಿದೆ, ನೀತಿಗಳನ್ನು ಕಲಿತುಕೊಂಡರೆ ಮಾತ್ರ ಕಾರ್ಯಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿ ಮಕ್ಕಳ ಸ್ನೇಹಿ ಸಮಾಜ ನಿರ್ಮಾಣ ಸಾಧ್ಯ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಯಲದಲ್ಲಿ ಬಾಲಕಾರ್ಮಿಕ ಪದ್ಧತಿ ವಿರೋಧ ಆಂದೋಲನ, ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಬೆಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ದಕ್ಷಿಣ ಕನ್ನಡ, ಸ್ನಾತ್ತಕೋತ್ತರ ಸಮಾಜ ಕಾರ್ಯ ವಿಭಾಗ, ಕರ್ನಾಟಕ ಕೇಂದ್ರೀಯ ವಿಶ್ವವಿಧ್ಯಾಲಯ ಮತ್ತು ಐಎಲ್‌ಪಿ ಹಾಗೂ ಎಫ್ ಸಿಡಬ್ಲೂ ಇವರ ಸಂಯುಕ್ತಾಶ್ರಯದಲ್ಲಿ 3 ದಿನಗಳ ಮಕ್ಕಳ ಸ್ನೇಹಿ ಸಮಾಜ ಸೃಷ್ಠಿಯತ್ತ ಬದಲಾವಣೆಯ ಹರಿಕಾರರ ಕರ್ನಾಟಕ ರಾಜ್ಯ ಮಟ್ಟದ ಸಶಕ್ತಿಕರಣ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ʼಪ್ರಸ್ತುತ ದಿನದಲ್ಲಿ ಸಮಾಜ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡಲು ಅಷ್ಟು ಸುಲಭವಲ್ಲ. ಕೇವಲ ಜ್ಞಾನವಿದ್ದರೆ ಸಾಲದು, ಅದರೊಂದಿಗೆ ಕೌಶಲ್ಯಗಳು ಪ್ರತಿಯೊಬ್ಬರಿಗೂ ಅಗತ್ಯವಿದೆ. ಈ ಸಶಕ್ತಿಕರಣ ತರಬೇತಿ ಉತ್ತಮ ರೀತಿಯಲ್ಲಿ ಸಾಗಬೇಕಿದೆ. ಎಲ್ಲಾ ಶಿಬಿರಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ತರಬೇತಿಯ ಉಪಯೋಗ ಪಡೆದು ತಮ್ಮ ಕಾರ್ಯಕ್ಷೇತ್ರದಲ್ಲಿ ಬಳಸಿಕೊಳ್ಳಿʼ ಎಂದು ಹೇಳಿದರು.

ತರಬೇತಿಯಲ್ಲಿ ರಾಜ್ಯದ 31 ಜಿಲ್ಲೆಗಳ ಸುಮಾರು 55 ಶಿಬಿರಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ಅನುಭವವಿರುವ ನುರಿತ ಸಂಪನ್ಮೂಲ ವ್ಯಕಿಗಳು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಇದನ್ನೂ ಓದಿ : ಔರಾದ್ | ಹೋಳಿ ಸಂಭ್ರಮ : ಮಣ್ಣಿನ ಸ್ನಾನದಲ್ಲಿ ಮಿಂದೆದ್ದ ಜನ
ಸ್ನಾತ್ತಕೋತ್ತರ ಸಮಾಜ ಕಾರ್ಯ ವಿಭಾಗ ಪ್ರೊ.ಚೆನ್ನವೀರಾ ಆರ್.ಎಮ್ ಸೇರಿದಂತೆ ವಿವಿಯ ಪ್ರೊ.ಪವಿತ್ರಾ ಆರ್. ಆಲೂರ, ಕಾತ್ಯಾಯಿನಿ ಚಾಮರಾಜನ್, ರೆನ್ನಿ ಡಿಸೋಜಾ, ಆನಂದ್ ರಾಜ್, ಡಾ.ಎನ್.ವಿ.ವಾಸುದೇವ ಶರ್ಮಾ, ಸರಸ್ವತಿ, ಸಂಪತ್ ಕಟ್ಟಿ ಮತ್ತಿತರರು ಭಾಗವಹಿಸಿದರು.





